ಕರ್ನಾಟಕ

karnataka

By

Published : Jun 30, 2020, 1:59 PM IST

ETV Bharat / sports

ಕೋವಿಡ್​ ಟೆಸ್ಟ್​​​​​​ನಲ್ಲಿ ಹಫೀಸ್​ ಸೇರಿ 6 ಪಾಕ್​ ಆಟಗಾರರು ಪಾಸ್​: ಇಂಗ್ಲೆಂಡ್​ಗೆ ಪಯಣಿಸಲು ಗ್ರೀನ್​​​​​​ಸಿಗ್ನಲ್​

ಜೂನ್​ 26ರಂದು ನಡೆಸಿದ ಪರೀಕ್ಷೆಯ ನೆಗೆಟಿವ್​ ವರದಿ ಬಂದರೂ ಜೂನ್​ 29ರಂದು ಈ 6 ಕ್ರಿಕೆಟಿಗರಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ಇದೀಗ ಅದರಲ್ಲೂ ನೆಗೆಟಿವ್​ ವರದಿ ಬಂದಿರುವುದರಿಂದ ಅವರಿಗೆ ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಪಿಸಿಬಿ ಮಾಹಿತಿ ನೀಡಿದೆ.

ಪಾಕ್​ ಆಟಗಾರರಿಗೆ ಕೋವಿಡ್​ 19 ನೆಗೆಟಿವ್​
ಪಾಕ್​ ಆಟಗಾರರಿಗೆ ಕೋವಿಡ್​ 19 ನೆಗೆಟಿವ್​

ಲಾಹೋರ್ (ಪಾಕಿಸ್ತಾನ)​:ಕ್ರಿಕೆಟಿಗರಾದ ಮೊಹಮ್ಮದ್​ ಹಫೀಜ್​, ವಹಾಬ್​ ರಿಯಾಜ್​, ಫಖಾರ್​ ಜಮಾನ್​, ಮೊಹಮ್ಮದ್​ ಹಸ್ನೈನ್​, ಮೊಹಮ್ಮದ್​ ರಿಜ್ವಾನ್​, ಶದಾಬ್​ ಖಾನ್​ ಅವರಿಗೆ ಕಳೆದ ಮೂರು ದಿನಗಳಲ್ಲಿ ನಡೆದ ಎರಡನೇ ಕೋವಿಡ್​ ಟೆಸ್ಟ್​​ನಲ್ಲಿ ಪಾಸಾಗಿದ್ದಾರೆ. ಇವರ ವರದಿ ನೆಗೆಟಿವ್​ ಬಂದಿರುವುದರಿಂದ ಅವರು ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲು ಅರ್ಹರಾಗಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

ಜೂನ್​ 26ರಂದು ನಡೆಸಿದ ಪರೀಕ್ಷೆಯ ನೆಗೆಟಿವ್​ ವರದಿ ಬಂದರೂ ಜೂನ್​ 29ರಂದು ಈ 6 ಕ್ರಿಕೆಟಿಗರಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ಇದೀಗ ಅದರಲ್ಲೂ ನೆಗೆಟಿವ್​ ವರದಿ ಬಂದಿರುವುದರಿಂದ ಅವರಿಗೆ ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಪಿಸಿಬಿ ಮಾಹಿತಿ ನೀಡಿದೆ.

ಮೊಹಮ್ಮದ್​ ಹಫೀಜ್​

20 ಆಟಗಾರರು ಹಾಗೂ ಸಿಬ್ಬಂದಿ ಸೇರಿದಂತೆ 31 ಸದಸ್ಯರ ಪಾಕಿಸ್ತಾನ ತುಕಡಿ ಭಾನುವಾರ ಇಂಗ್ಲೆಂಡ್​ ತಲುಪಿದೆ. ಮುಂಬರುವ ಆಗಸ್ಟ್​ ಹಾಗೂ ಸೆಪ್ಟೆಂಬರ್​ನಲ್ಲಿ ಅವರು ಮೂರು ಟೆಸ್ಟ್​ ಹಾಗೂ ಕೆಲವು ಟಿ-20 ಪಂದ್ಯಗಳನ್ನಾಡಲಿದ್ದಾರೆ.

ಸದ್ಯ 14 ದಿನಗಳ ಕಾಲ ಪಾಕ್​​ ಕ್ರಿಕೆಟ್​ ತಂಡ ಕ್ವಾರಂಟೈನ್​​ಗೊಳಗಾಗಲಿದ್ದು, ಬಳಿಕ ತರಬೇತಿಯಲ್ಲಿ ಭಾಗಿಯಾಗಲಿದೆ ಎಂದು ಪಿಸಿಬಿ ತಿಳಿಸಿದೆ.

ಉಭಯ ತಂಡಗಳ ನಡುವಿನ ಪಂದ್ಯದ ವೇಳೆ ಯಾವುದೇ ಕ್ರೀಡಾಭಿಮಾನಿಗಳಿಗೆ ಅವಕಾಶ ಇರುವುದಿಲ್ಲ. ಅಜರ್​ ಅಲಿ ಟೆಸ್ಟ್​ ತಂಡವನ್ನ ಮುನ್ನಡೆಸಲಿದ್ದಾರೆ. ಟಿ-20 ತಂಡಕ್ಕೆ ಬಾಬರ್​ ಅಜಂ ಸಾರಥ್ಯ ವಹಿಸಿದ್ದಾರೆ.

ABOUT THE AUTHOR

...view details