ಕರ್ನಾಟಕ

karnataka

ETV Bharat / sports

ಲೀಗ್​ನಲ್ಲಿ ಕರ್ನಾಟಕಕ್ಕೆ 3 ನೇ ಸ್ಥಾನ: ಕ್ವಾ.ಫೈನಲ್​ಗೇರಿದ 8 ತಂಡಗಳ ವಿವರ, ವೇಳಾಪಟ್ಟಿ..

ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಿಂದ 4 ಗೆಲುವು ಹಾಗೂ 4 ಡ್ರಾ ಸಾಧಿಸಿರುವ ಕರ್ನಾಟಕ ತಂಡ ಎ ಮತ್ತ ಬಿ ಗುಂಪಿನ ಅಂಕಪಟ್ಟಿಯಲ್ಲಿ ಗುಜರಾತ್​(35) ಹಾಗೂ ಬೆಂಗಾಲ್​(32) ನಂತರದ ಸ್ಥಾನಪಡೆದಿದೆ. ಈ ಮೂರು ತಂಡಗಳ ಜೊತೆ ಸೌರಾಷ್ಟ್ರ(31), ಆಂಧ್ರ ಪ್ರದೇಶ(27) ತಂಡಗಳು ಕ್ವಾರ್ಟರ್​ ಫೈನಲ್​ ಪ್ರವೇಶ ಪಡೆದಿವೆ.

By

Published : Feb 15, 2020, 6:26 PM IST

2019-20 Ranji Trophy
ರಣಜಿ ಟ್ರೋಫಿ ಕ್ವಾರ್ಟರ್​ ಫೈನಲ್​

ಬೆಂಗಳೂರು: ಕರ್ನಾಟಕ ತಂಡ ತನ್ನ ಕೊನೆಯ ಪಂದ್ಯ ಬರೋಡ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿದ ಕರ್ನಾಟಕ ತಂಡ ಲೀಗ್​ ಹಂತದಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕ್ವಾರ್ಟರ್​ ಫೈನಲ್​ನಲ್ಲಿ ಜಮ್ಮುಕಾಶ್ಮೀರ ತಂಡದ ಸವಾಲನ್ನು ಎದರಿಸಲಿದೆ.

ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಿಂದ 4 ಗೆಲುವು ಹಾಗೂ 4 ಡ್ರಾ ಸಾಧಿಸಿರುವ ಕರ್ನಾಟಕ ತಂಡ ಎ ಮತ್ತ ಬಿ ಗುಂಪಿನ ಅಂಕಪಟ್ಟಿಯಲ್ಲಿ ಗುಜರಾತ್​(35) ಹಾಗೂ ಬೆಂಗಾಲ್​(32) ನಂತರದ ಸ್ಥಾನಪಡೆದಿದೆ. ಈ ಮೂರು ತಂಡಗಳ ಜೊತೆ ಸೌರಾಷ್ಟ್ರ(31), ಆಂಧ್ರ ಪ್ರದೇಶ(27) ತಂಡಗಳು ಕ್ವಾರ್ಟರ್​ ಫೈನಲ್​ ಪ್ರವೇಶ ಪಡೆದಿವೆ.

ಸಿ ಗುಂಪಿನಿಂದ ಜಮ್ಮು ಮತ್ತ ಕಾಶ್ಮೀರ(39) ಅಗ್ರಸ್ಥಾನಿಯಾಗಿ ಹಾಗೂ ಒಡಿಶಾ(38) ಎರಡನೇ ಸ್ಥಾನ ಪಡೆದು ಕ್ವಾರ್ಟರ್​ ಫೈನಲ್ ಪ್ರವೇಶಿಸಿವೆ. ಪ್ಲೇಟ್​ ಗುಂಪಿನಲ್ಲಿ ಗೋವಾ ತಂಡ 9 ಪಂದ್ಯಗಳಲ್ಲಿ 7 ಜಯದೊಂದಿಗೆ 50 ಅಂಕ ಪಡೆದು ಕ್ವಾರ್ಟರ್​ ಅವಕಾಶ ಗಿಟ್ಟಿಸಿಕೊಂಡಿದೆ.

ಕ್ವಾರ್ಟರ್​ ಫೈನಲ್ ಪಂದ್ಯಗಳ ವೇಳಾಪಟ್ಟಿ :

ಸೌರಾಷ್ಟ್ರ vs ಆಂದ್ರ ಪ್ರದೇಶ--​ ಫೆಬ್ರವರಿ 20-24ವರೆಗೆ--- ಒಂಗೊಲೆ(ಆಂದ್ರ

ಕರ್ನಾಟಕ vs ಜಮ್ಮು ಮತ್ತುಕಾಶ್ಮೀರ-- ಫೆಬ್ರವರಿ 20-24 ವರೆಗೆ--- ಜಮ್ಮು

ಪಶ್ಚಿಮ ಬಂಗಾಳ vs ಒಡಿಶಾ-- ಫೆಬ್ರವರಿ 20-24 ವರೆಗೆ --- ಕಟಕ್​(ಒಡಿಶಾ)

ಗುಜರಾತ್ vs ಗೋವಾ--ಫೆಬ್ರವರಿ 20-24 ವರೆಗೆ--- ವಲ್ಸಾದ್​( ಗುಜರಾತ್​)

ABOUT THE AUTHOR

...view details