ಕರ್ನಾಟಕ

karnataka

ETV Bharat / sports

ಕ್ಯಾಚ್​ ವೇಳೆ ಮುಖಕ್ಕೆ ಬಡಿದ ಬಾಲ್​: ಹಲ್ಲು ಕಳೆದುಕೊಂಡ ಚಾಮಿಕ ಕರುಣರತ್ನೆ

ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಕ್ಯಾಚ್​ ಹಿಡಿಯುವಾಗ ಬಾಲ್​ ಮುಖಕ್ಕೆ ಬಡಿದ ಕಾರಣ ಚಾಮಿಕ ಕರುಣರತ್ನೆ ಮುಂಭಾಗದ ಹಲ್ಲುಗಳಿಗೆ ಪೆಟ್ಟಾಗಿದೆ.

By

Published : Dec 9, 2022, 9:00 AM IST

Chamika Karunaratne
ಕ್ಯಾಚ್​ ವೇಳೆ ಮುಖಕ್ಕೆ ಬಡಿದ ಬಾಲ್

ಕೊಲಂಬೋ(ಶ್ರೀಲಂಕಾ): ಲಂಕಾ ಅಂತಾರಾಷ್ಟ್ರೀಯ ಆಟಗಾರ ಚಾಮಿಕ ಕರುಣರತ್ನೆಯ ಮುಖಕ್ಕೆ ಚೆಂಡು ತಾಗಿ ನಾಲ್ಕು ಹಲ್ಲುಗಳನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿ ನಡೆಯುವ ಐಪಿಎಲ್​ ರೀತಿ ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್​ ಲೀಗ್​(ಎಲ್​ಪಿಎಲ್​) ಪಂದ್ಯ ನಡೆಯುತ್ತಿದೆ. ಕ್ಯಾಂಡಿ ಮತ್ತು ಗಾಲೆ ನಡುವಿನ ಪಂದ್ಯದ ವೇಳೆ ಕ್ಯಾಚ್​ ಹಿಡಿಯುವಾಗ ಮುಖಕ್ಕೆ ಬಾಲ್​ ಬಡಿದು ಎದುರಿನ ನಾಲ್ಕು ಹಲ್ಲುಗಳಿಗೆ ಪೆಟ್ಟಾಗಿದೆ.

ಘಟನೆ ನಡೆದ ತಕ್ಷಣ ಅವರನ್ನು ಗಾಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೆಂಡು ಬಡಿದ ರಭಸಕ್ಕೆ ಮುಂದಿನ ನಾಲ್ಕು ಹಲ್ಲುಗಳಿಗೆ ಪಟ್ಟಾಗಿದೆ. ಆಲ್ ರೌಂಡರ್ ಕರುಣರತ್ನೆ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಆಸ್ಟ್ರೇಲಿಯಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶಿಸ್ತಿನ ಉಲ್ಲಂಘನೆಗಳ ವಿಚಾರಣೆಯ ನಂತರ ಕರುಣಾರತ್ನೆ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಒಂದು ವರ್ಷ ನಿಷೇಧಿಸಲಾಗಿದೆ.

ಇದನ್ನೂ ಓದಿ:ರೋಹಿತ್ ಶರ್ಮಾ 500 ಸಿಕ್ಸರ್.. ಕ್ರಿಸ್​ಗೇಲ್​ ದಾಖಲೆ ಮುರಿಯಲು ಬೇಕು 51 ಸಿಕ್ಸರ್​

ABOUT THE AUTHOR

...view details