ಕರ್ನಾಟಕ

karnataka

ETV Bharat / sports

ಸ್ಪಾಟ್​ ಫಿಕ್ಸಿಂಗ್​ಗಾಗಿ ಭಾರತೀಯ ಉದ್ಯಮಿಗಳಿಂದ ಬ್ಲ್ಯಾಕ್​ಮೇಲ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜಿಂಬಾಬ್ವೆ ಕ್ರಿಕೆಟರ್​ - ಜಿಂಬಾಬ್ವೆ ಮಾಜಿ ನಾಯಕ ಬ್ರೆಂಡನ್​ ಟೇಲರ್​ ಭ್ರಷ್ಟಾಚಾರ

ಭಾರತದ ಉದ್ಯಮಿಯೊಬ್ಬ 2019ರಲ್ಲಿ ತಮ್ಮನ್ನು ಜಿಂಬಾಬ್ವೆಯಲ್ಲಿ ಟಿ20 ಈವೆಂಟ್​ ನಡೆಸುವುದಕ್ಕೆ ಪ್ರಾಯೋಜಕತ್ವ ವಹಿಸುವುದಾಗಿ ಆಫರ್​ ನೀಡಿ ಭಾರತಕ್ಕೆ ಕರೆಸಿಕೊಂಡು, ಕೊಕೇನ್​ ಕುಡಿಯುವಾಗ ವಿಡಿಯೋ ಮಾಡಿಕೊಂಡು ತಮ್ಮನ್ನು ಸ್ಪಾಟ್​ ಫಿಕ್ಸಿಂಗ್​ ಮಾಡುವಂತೆ ಬೆದರಿಕೆ ಹಾಕಿದ್ದರು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬ್ರೆಂಡನ್ ಟೇಲರ್​ ಬಹಿರಂಗಪಡಿಸಿದ್ದಾರೆ.

Brendan Taylor says blackmailed to spot-fix
ಬ್ರೆಂಡನ್ ಟೇಲರ್​ ಸ್ಪಾಟ್​ ಫಿಕ್ಸಿಂಗ್

By

Published : Jan 24, 2022, 6:22 PM IST

ನವದೆಹಲಿ:ಭ್ರಷ್ಟಾಚಾರಕ್ಕೆ ಪ್ರೇರೇಪಿಸಿದ್ದರೂ ಅದನ್ನು ಐಸಿಸಿಗೆ ತಿಳಿಸದೇ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್​ ಟೇಲರ್​ ತಮಗೆ ಭಾರತದ ಉದ್ಯಮಿಗಳು ಸ್ಪಾಟ್​ ಫಿಕ್ಸಿಂಗ್​ ಮಾಡುವಂತೆ ಬೆದರಿಕೆ ಹಾಕುತ್ತಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಬರಹವೊಂದನ್ನು ಪ್ರಕಟಿಸಿದ್ದಾರೆ.

ಭಾರತದ ಉದ್ಯಮಿಯೊಬ್ಬ 2019ರಲ್ಲಿ ತಮ್ಮನ್ನು ಜಿಂಬಾಬ್ವೆಯಲ್ಲಿ ಟಿ20 ಈವೆಂಟ್​ ನಡೆಸುವುದಕ್ಕೆ ಪ್ರಾಯೋಜಕತ್ವ ವಹಿಸುವುದಾಗಿ ಆಫರ್​ ನೀಡಿ ಆಹ್ವಾನ ನೀಡಿದ್ದರು. ಇದಕ್ಕಾಗಿ 15,000 ಅಮೆರಿಕನ್​ ಡಾಲರ್​ ನೀಡುವುದಾಗಿ ತಿಳಿಸಿ ನನ್ನನ್ನು ಕರೆಸಿಕೊಂಡಿದ್ದರು. ಜಿಂಬಾಬ್ವೆ ಕ್ರಿಕೆಟ್​ 6 ತಿಂಗಳ ವೇತನ ನೀಡದ್ದರಿಂದ ಅವರ ಮನವಿಗೆ ಸ್ಪಂದಿಸಲು ಕಾರಣವಾಗಿತ್ತು.

ನಾನಿದ್ದ ಹೋಟೆಲ್​​ ರೂಮಿನಲ್ಲಿ ಅವರು 6 ಜನರಿದ್ದರು. ಅವರು ನನ್ನನ್ನು ರಾತ್ರಿ ಊಟಕ್ಕೆ ಕರೆದುಕೊಂಡು ಹೋಗಿದ್ದರು. ನಾವು ಪಾನೀಯಗಳನ್ನು ಸೇವಿಸಿದೆವು. ಅವರು ನನಗೆ ಕೊಕೇನ್ ಅನ್ನು ಬಹಿರಂಗವಾಗಿ ನೀಡಿದರು, ಅದನ್ನು ಅವರು ಸ್ವತಃ ಕುಡಿದರು. ಆದರೆ ನಾನು ಮೂರ್ಖತನದಿಂದ ಅದನ್ನು ನಾನು ಸೇವಿಸಿದ್ದೆ. ನಾನು ಈ ಹಿಂದೆ ಹಲವಾರು ಬಾರಿ ತೆಗೆದುಕೊಂಡಿದ್ದೇನೆ. ಆದರೆ ಆ ರಾತ್ರಿ ಅವರು ನನ್ನೊಂದಿಗೆ ಆಡಿದ ಆಟದಿಂದ ಈಗಲೂ ನೋವು ಅನುಭವಿಸುತ್ತಿದ್ದೇನೆ ಎಂದು ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಮರುದಿನ ಬೆಳಗ್ಗೆ, ಅದೇ ಗುಂಪು ನನ್ನ ರೂಮಿಗೆ ನುಗ್ಗಿದರು ಮತ್ತು ಹಿಂದಿನ ರಾತ್ರಿ ಕೊಕೇನ್ ಕುಡಿಯುವಾಗ ತೆಗೆದ ವಿಡಿಯೋವನ್ನು ತೋರಿಸಿದರು ಮತ್ತು ಅವರಿಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾನು ಸ್ಪಾಟ್​ ಫಿಕ್ಸಿಂಗ್ ಮಾಡದಿದ್ದರೆ, ವಿಡಿಯೋವನ್ನು ವೈರಲ್​ ಮಾಡಲಾಗುವುದು ಎಂದು ಬೆದರಿಸಿದ್ದರು.

ಇದನ್ನೂ ಓದಿ:ಪಾಕಿಸ್ತಾನದ ಶಾಹೀನ್ ಆಫ್ರಿದಿಗೆ 'ಐಸಿಸಿ ವರ್ಷದ ಕ್ರಿಕೆಟಿಗ' ಪ್ರಶಸ್ತಿ ; ಐಸಿಸಿ ಎಲ್ಲಾ ಅವಾರ್ಡ್ ವಿನ್ನರ್​ ಲಿಸ್ಟ್ ಇಲ್ಲಿದೆ

ಆ ಸಂದರ್ಭದಲ್ಲಿ ನಾನು ಚಿಂತಿತನಾಗಿದ್ದೆ. ಏಕೆಂದರೆ ನನ್ನ ಹೋಟೆಲ್ ರೂಮಿನಲ್ಲಿ ಈ ಆರು ವ್ಯಕ್ತಿಗಳಿದ್ದರು. ನನ್ನ ಸ್ವಂತ ಸುರಕ್ಷತೆಗಾಗಿ ನಾನು ಹೆದರುತ್ತಿದ್ದೆ. ನಾನು ಅವರ ಜಾಲಕ್ಕೆ ಬಿದ್ದಿದ್ದೆ. ಅವರು ನನಗೆ 15 ಸಾವಿರ ಡಾಲರ್​ ನೀಡಿದರು. ಇದು ಕೇವಲ ಡೆಪಾಸಿಟ್​, ಸ್ಪಾಟ್​ ಫಿಕ್ಸಿಂಗ್ ಮಾಡಿದ ನಂತರ 20 ಸಾವಿರ ಡಾಲರ್​ ನೀಡುವುದಾಗಿ ತಿಳಿಸಿದರು. ನನಗೆ ಬೇರೆ ದಾರಿಯಿಲ್ಲದ್ದರಿಂದ ನಾನು ಹಣ ತೆಗೆದುಕೊಂಡು ನನ್ನ ದೇಶಕ್ಕೆ ಮರಳಿದೆ.

ಆದರೆ ಅಲ್ಲಿಂದ ಬಂದ ನಂತರ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಇದು ನನ್ನ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು. ಕೆಲವು ದಿನಗಳ ನಂತರ ಉದ್ಯಮಿ ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳಿದರು. ಅದನ್ನು ನಾನು ನೀಡಲು ಸಾಧ್ಯವಾಗಲಿಲ್ಲ. ಕೊನೆಗೆ ಈ ಅಪರಾಧ ಮತ್ತು ಫಿಕ್ಸಿಂಗ್ ಪ್ರಚೋಚದನೆಯನ್ನು ಐಸಿಸಿಗೆ ವರದಿ ಮಾಡಲು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡೆ ಎಂದು ಟೇಲರ್ ತಿಳಿಸಿದ್ದಾರೆ.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಆದರೆ ಇದು ತುಂಬಾ ದೀರ್ಘ ಸಮಯವಾಗಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಪ್ರತಿಯೊಬ್ಬರನ್ನು ಮತ್ತು ನಿರ್ದಿಷ್ಟವಾಗಿ ನನ್ನ ಕುಟುಂಬವನ್ನು ರಕ್ಷಿಸುವುದಕ್ಕಾಗಿ ಐಸಿಸಿ ಸಂಪರ್ಕಿಸಿದೆ ಮತ್ತು ನಾನು ನನ್ನ ಸಂಕಟವನ್ನು ವಿವರಿಸಿದರೆ. ನಮ್ಮ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ನನ್ನ ನಿಜವಾದ ಭಯವನ್ನು ನಾನು ವಿವರಿಸಿದೆ. ಹಾಗಾಗಿ ಈ ಭ್ರಷ್ಟಾಚಾರವನ್ನು ತಿಳಿಸಲು ಆದ ವಿಳಂಬವನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೆ ಎಂದು ತಮ್ಮ ನೋವನ್ನು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ದುರದೃಷ್ಟವಶಾತ್, ಅವರು ಹಾಗೆ ಮಾಡಲಿಲ್ಲ. ಆದರೆ, ಈ ವಿಷಯದಲ್ಲಿ ನಾನು ಅಜ್ಞಾನವನ್ನು ಪ್ರದರ್ಶಿಸಲಾರೆ. ಏಕೆಂದರೆ ನಾನು ಹಲವು ವರ್ಷಗಳಿಂದ ಭ್ರಷ್ಟಾಚಾರ-ವಿರೋಧಿ ಸೆಮಿನಾರ್‌ಗಳಲ್ಲಿ ಭಾಗವಹಿಸಿದ್ದೇನೆ ಮತ್ತು ಭ್ರಷ್ಟಾಚಾರ ಮಾಡಲು ಪ್ರಚೋದನೆ ಬಂದರೆ ಅದನ್ನು ವರದಿ ಮಾಡುವುದು ನನ್ನ ಕರ್ತವ್ಯವಾಗಿತ್ತು. ನಾನು ಅದನ್ನು ಮಾಡಲಿಲ್ಲ, ಇದೀಗ ಐಸಿಸಿಯ ಎಲ್ಲಾ ತನಿಖೆಗೆ ನಾನು ಬದ್ಧನಾಗಿದ್ದೇನೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

"ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಮೇಲೆ ಬಹು ವರ್ಷಗಳ ನಿಷೇಧವನ್ನು ವಿಧಿಸುವ ನಿರ್ಧಾರವನ್ನು ICC ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತದೆ. ನಾನು ಈ ನಿರ್ಧಾರವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಕ್ರಿಕೆಟಿಗರು ಯಾವುದೇ ರೀತಿಯ ಭ್ರಷ್ಟಾಚಾರ ಪ್ರಚೋದನೆಯನ್ನು ಮುಂಚಿತವಾಗಿ ವರದಿ ಮಾಡಲು ನನ್ನ ಕಥೆ ಪ್ರೋತ್ಸಾಹಿಸುವ ಸಾಧನವಾಗಿ ಬಳಸಲಾಗುವುದು ಎಂದು ನಾನು ಭಾವಿಸುತ್ತೇನೆ" ಎಂದು ಜಿಂಬಾಬ್ವೆಯ ಆಟಗಾರ ತಿಳಿಸಿದ್ದಾರೆ.

ಇದನ್ನೂ ಓದಿ:ಹರಿಣಗಳ ವಿರುದ್ಧ ODI ಸರಣಿ ಸೋತ ರಾಹುಲ್ ಪಡೆಗೆ ಶಾಕ್​​.. ಫೈನಲ್​​​ ಪಂದ್ಯದ ಶೇ.40ರಷ್ಟು ದಂಡ

ABOUT THE AUTHOR

...view details