ಕರ್ನಾಟಕ

karnataka

ETV Bharat / sports

BAN vs IND 1st test: ಅನುಭವಿ ತಂಡದೊಂದಿಗೆ ಟಾಸ್​ಗೆದ್ದು ಬ್ಯಾಟಿಂಗ್​ ಆಯ್ದಕೊಂಡ ರಾಹುಲ್​ - ETV Bharath Kannada

ಟೆಸ್ಟ್​ ಚಾಂಪಿಯನ್​ ಶಿಪ್​ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಬಾಂಗ್ಲ ಎದುರಿನ ಎರಡು ಪಂದ್ಯಗಳು ಮಹತ್ವದ್ದಾಗಿದೆ. ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅಗತ್ಯ ಭಾರತಕ್ಕಿದೆ. ಮೊದಲ ಪಂದ್ಯದಲ್ಲಿ ಟಸ್​ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

BAN vs IND 1st test
ಟಾಸ್​ಗೆದ್ದು ಬ್ಯಾಟಿಂಗ್​ ಆಯ್ದ ಭಾರತ

By

Published : Dec 14, 2022, 9:06 AM IST

ಚಿತ್ತಗಾಂತ್​(ಬಾಂಗ್ಲಾದೇಶ): ಏಕದಿನ ಸರಣಿ ಸೋತಿರುವ ಭಾರತಕ್ಕೆ ಇಂದಿನಿಂದ ಟೆಸ್ಟ್​ನಲ್ಲಿ ಪರೀಕ್ಷೆ ನಡೆಯಲಿದೆ. ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದ ಟಾಸ್ ​ಗೆದ್ದು ಬ್ಯಾಟಿಂಗ್​ಗೆ ಇಳಿದಿರುವ ರಾಹುಲ್​ ಪಡೆಗೆ ಬೃಹತ್​ ಮೊತ್ತ ಕಲೆಹಾಕುವ ಅಗತ್ಯ ಇದೆ. ದೇಶಿ ನೆಲದ ಲಾಭವನ್ನು ಬಾಂಗ್ಲಾಕ್ಕೆ ಭಾರತ ಬಿಟ್ಟು ಕೊಡದ ರೀತಿಯಲ್ಲಿ ಬ್ಯಾಟ್​ ಬೀಸಬೇಕಿದೆ.

ಐಸಿಸಿ ಟೆಸ್ಟ್​ ಚಾಂಪಿಯನ್​ ಶಿಪ್​ನಲ್ಲಿ ಸ್ಥಾನ ಪಡೆಯಲು ಸರಣಿಗೆಲ್ಲುವ ಅಗತ್ಯ ಇದೆ. ಕಳೆದ ಬಾರಿ ರನ್ನರ್​ ಅಪ್​ ಆಗಿದ್ದ ಭಾರತ ಈ ಬಾರಿ ಚಾಂಪಿಯನ್​ ಪಟ್ಟಕ್ಕೆ ಏರಿ ಬಲಿಷ್ಠತೆ ಮೆರೆಯಬೇಕಿದೆ.

ರೋಹಿತ್​ ಶರ್ಮಾ ಗಾಯಗೊಂಡಿರುವ ಹಿನ್ನೆಲೆ ಕೆ ಎಲ್​ ರಾಹುಲ್​ಗೆ ನಾಯಕತ್ವ ದೊರೆತಿದೆ. ಹಿಟ್​ ಮ್ಯಾನ್​ ಬದಲಾಗಿ ಅಭಿಮನ್ಯು ಈಶ್ವರನ್​ ತಂಡ ಸೇರಿದರೂ ಆಡುವ 11ರಲ್ಲಿ ಸ್ಥಾನ ಸಿಕ್ಕಿಲ್ಲ. ನಾಯಕ ರಾಹುಲ್​ ಬಹುತೇಕ ಹಳೆ ತಂಡವನ್ನೇ ಕಣಕ್ಕೆ ಇಳಿಸಿದ್ದಾರೆ.

ಅಕ್ಷರ್​, ಅಶ್ವನ್ ಮತ್ತು ಕುಲ್​ದೀಪ್​ ಅವರು ಸ್ಪಿನ್​ ವಿಭಾಗದಲ್ಲಿದ್ದರೆ, ಉಮೇಶ್​ ಮತ್ತು ಸಿರಾಜ್​ ವೇಗ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗಿಲ್​ ಮತ್ತು ರಾಹುಲ್(ನಾಯಕ)​ ಆರಂಭಿಕರಾಗಿ ಕಣಕ್ಕೆ ಬಂದರೆ ಮಧ್ಯಮ ಕ್ರಮಾಂಕದಲ್ಲಿ ಪೂಜಾರ, ಕೊಹ್ಲಿ, ಅಯ್ಯರ್​ ಮತ್ತು ಪಂತ್​ ಬಲ ಭಾರತಕ್ಕಿದೆ.

ಬಾಂಗ್ಲಾಕ್ಕೆ 101 ಆಟಗಾರನಾಗಿ ಆರಂಭಿಕ ಜಾಕಿರ್​ ಹಸನ್​ ಈ ಪಂದ್ಯದಿಂದ ಪಾದಾರ್ಪಣೆ ಮಾಡಿದ್ದಾರೆ. ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ ಮತ್ತು ನೂರುಲ್ ಹಸನ್ ಬಾಂಗ್ಲಾಕ್ಕೆ ಬ್ಯಾಟಿಂಗ್​ ಬಲವಾಗಿದ್ದಾರೆ. ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್ ಮತ್ತು ಎಬಾಡೋತ್ ಹೊಸೈನ್ ​ಬೌಲರ್​ಗಳಾಗಿ ಪಾತ್ರ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:IPL 2023: ಡಿ.23ಕ್ಕೆ ಹರಾಜು ಪ್ರಕ್ರಿಯೆ.. 405 ಆಟಗಾರರ ಪಟ್ಟಿ ಅಂತಿಮ

ABOUT THE AUTHOR

...view details