ಲಾರ್ಡ್ಸ್ (ಲಂಡನ್): ಆ್ಯಶಸ್ 2023ರ ಎರಡನೇ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಬಲಿಷ್ಠವಾಗಿ ಮುಂದುವರೆಯುತ್ತಿದೆ. ದ್ವಿತೀಯ ದಿನದ ಎರಡು ಸೆಷನ್ಗಳನ್ನು ಇಂಗ್ಲೆಂಡ್ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದು ಬಿಟ್ಟರೆ ಮಿಕ್ಕೆಲ್ಲಾ ಅವಧಿಗಳು ಆಸ್ಟ್ರೇಲಿಯಾದ ಪಾಲಾಗಿದ್ದವು. ಇದರಿಂದ ಎರಡನೇ ಟೆಸ್ಟ್ ಆಸ್ಟ್ರೇಲಿಯಾಕ್ಕೆ ಹೆಚ್ಚು ಲಾಭವಾಗುತ್ತಿದೆ. ನಾಲ್ಕನೇ ದಿನವಾದ ಇಂದು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಮೊದಲ ಸೆಷನ್ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜಾ ಅಜೇಯ 58 ರನ್ ಗಳಿಸಿದರು. ಸ್ಟೀವ್ ಸ್ಮಿತ್ 6 ರನ್ ಗಳಿಸಿ ಔಟಾಗದೇ ಉಳಿದ್ದಿದ್ದರು. ಇಂದಿನ ಇನ್ನಿಂಗ್ಸ್ನ್ನು ಸ್ಮಿತ್ ಬೌಂಡರಿ ಮೂಲಕ ಭರ್ಜರಿ ಆರಂಭ ನೀಡಿದರು. ಖವಾಜಾ ಮತ್ತು ಸ್ಮಿತ್ ಜೋಡಿ ತಂಡಕ್ಕೆ ಉತ್ತಮ ರನ್ ಕಲೆ ಹಾಕುತ್ತಿತ್ತು. 77 ರನ್ ಗಳಿಸಿ ಶತಕದ ಸನಿಹದಲ್ಲಿದ್ದ, ಉಸ್ಮಾನ್ ಖವಾಜಾ ಬ್ರಾಡ್ಗೆ ವಿಕೆಟ್ ಒಪ್ಪಿಸಿದರು. ಖಬಾಜಾ ಅವರ ವಿಕೆಟ್ ಬೆನ್ನಲ್ಲೇ ಅಂದರೆ ಜೋಶ್ ಅವರ ನಂತರದ ಓವರ್ನಲ್ಲೇ ವಿಕೆಟ್ ಕೊಟ್ಟರು. ನಂತರ ಬಂದ ಟ್ರಾವೆಸ್ ಹೆಡ್ (7) ಕೂಡಾ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಭೋಜನ ವಿರಾಮದ ವೇಳೆಗೆ ಇಂದಿನ ಇನ್ನಿಂಗ್ಸ್ನಲ್ಲಿ 92 ರನ್ ಕಲೆಹಾಕಿರುವ ಆಸ್ಟ್ರೇಲಿಯಾ, ಒಟ್ಟು 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿದೆ. 91 ರನ್ಗಳ ಮುನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಾಂಗರೂ ಪಡೆ 313 ರನ್ನ ಮುನ್ನಡೆ ಪಡೆದುಕೊಂಡಿದೆ. ಕ್ರೀಸ್ನಲ್ಲಿ ಕ್ಯಾಮರಾನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ಇದ್ದಾರೆ. ಇಂಗ್ಲೆಂಡ್ ಕೇವಲ ನಾಲ್ವರು ವೇಗ ಬೌಲರ್ಗಳಿಂದ ಬೌಲ್ ಮಾಡಿಸುತ್ತಿದ್ದು, ಈವರೆಗೆ ಜೋಶ್, ಬ್ರಾಡ್ ಎರಡು ವಿಕೆಟ್ ಮತ್ತು ಆಂಡ್ರೆಸನ್ ಒಂದು ವಿಕೆಟ್ ಪಡೆದಿದ್ದಾರೆ.