ಹೈದರಾಬಾದ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಸ್ಪಿನ್ ಬೌಲಿಂಗ್ ದಿಗ್ಗಜ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದು, ಅವರಿಗೆ 52 ವರ್ಷ ವಯಸ್ಸಾಗಿತ್ತು. 16 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಬೆರಳೆಣಿಕೆಯಷ್ಟು ಕ್ರಿಕೆಟರ್ಸ್ ನಿರ್ಮಿಸಿರುವ ದಾಖಲೆ ಮಾಡಿರುವುದು ಈ ದಿಗ್ಗಜನ ಸಾಧನೆಯಾಗಿದೆ.
ಭಾರತದ ವಿರುದ್ಧ ಟೆಸ್ಟ್ನಲ್ಲಿ ಪದಾರ್ಪಣೆ:1992ರಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದು, ಮೊದಲ ಪಂದ್ಯದಲ್ಲಿ ಕೇವಲ ಎರಡು ವಿಕೆಟ್ ಪಡೆದಿದ್ದರು. ಇದಾದ ಬಳಿಕ ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟರ್ಗಳ ಪಾಲಿಗೆ ವಿಲನ್ ಆಗಿ ಕಾಡಿರುವ ವಾರ್ನ್, ಅನೇಕ ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ತಂಡದ ಲೆಗ್ ಸ್ಪಿನ್ನರ್ ಆಗಿ ಗುರುತಿಸಿಕೊಂಡು 1992-2007ವರೆಗೆ ತಾವು ಆಡಿರುವ 145 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಿಂದ 708 ವಿಕೆಟ್ ಪಡೆದುಕೊಂಡಿದ್ದಾರೆ. 1993-2005ರ ಅವಧಿಯಲ್ಲಿ ತಾವು ಆಡಿರುವ 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಹಾಗೂ 1993-2005ರ ಅವಧಿಯಲ್ಲಿ ಆಡಿರುವ 55 ಟಿ20(ಐಪಿಎಲ್) ಪಂದ್ಯಗಳಿಂದ 57 ವಿಕೆಟ್ ಪಡೆದುಕೊಂಡಿದ್ದಾರೆ.