ಕೊಲಂಬೊ :ಆರಂಭಿಕ ಬ್ಯಾಟ್ಸ್ಮನ್ ಆವಿಷ್ಕಾ ಫರ್ನಾಂಡೊ ಅವರ ಅರ್ಧಶತಕದ ಬಲದಿಂದ ಶ್ರೀಲಂಕಾ ತಂಡ 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 276 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದ ಶ್ರೀಲಂಕಾ ತಂಡಕ್ಕೆ ಆರಂಭಿಕರಾದ ಫರ್ನಾಂಡೊ ಮತ್ತು ಮಿನೋದ್ ಭನುಕ 77 ರನ್ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿದರು.
36 ರನ್ಗಳಿಸಿದ್ದ ಭನುಕ ವಿಕೆಟ್ ಪಡೆಯುವ ಮೂಲ ಚಹಲ್ ಭಾರತಕ್ಕೆ ಮೊದಲ ಬ್ರೇಕ್ ನೀಡಿದರು. ನಂತರ ಬಂದ ರಾಜಪಕ್ಷ ಕೂಡ ಅದೇ ಓವರ್ನಲ್ಲೇ ಗೋಲ್ಡನ್ ಡಕ್ ಆದರು.
4ನೇ ಕ್ರಮಾಂಕದಲ್ಲಿ ಬಂದ ಧನಂಜಯ ಡಿಸಿಲ್ವಾ ಫರ್ನಾಂಡೊ ಜೊತೆಗೂಡಿ 3ನೇ ವಿಕೆಟ್ ಜೊತೆಯಾಟದಲ್ಲಿ 47 ರನ್ ಸೇರಿಸಿದರು. 71 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 50 ರನ್ಗಳಿಸಿದ್ದ ಫರ್ನಾಂಡೊ ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು.