ದುಬೈ: ಕೋವಿಡ್-19 ಕಾರಣ ಮುಂದೂಡಲ್ಪಟ್ಟಿದ್ದ 14ನೇ ಆವೃತ್ತಿಯ ಐಪಿಎಲ್ ಇಂದಿನಿಂದ ಪುನರಾಂಭಗೊಳ್ಳಲಿದ್ದು, ಮೊದಲ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್ 2020ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿ 7ನೇ ಸ್ಥಾನಕ್ಕೆ ಕುಸಿದಿತ್ತು. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಎಸ್ಕೆ ಪ್ಲೇಆಫ್ ತಲುಪಲು ವಿಫಲವಾಗಿತ್ತು. ಆದರೆ 2021ರಲ್ಲಿ ಅದ್ವಿತೀಯ ಪ್ರದರ್ಶನ ತೋರಿರುವ ಸಿಎಸ್ಕೆ ಆಡಿರುವ 7 ಪಂದ್ಯಗಲ್ಲಿ 5 ಗೆಲುವು ಮತ್ತು 2 ಸೋಲುಗಳೊಂದಿಗೆ 10 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಆಡಿರುವ 7 ಪಂದ್ಯಗಳಲ್ಲಿ 3 ಸೋಲು ಮತ್ತು 4 ಗೆಲುವುಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ.
2020ರ ಆವೃತ್ತಿ ಚೆನ್ನೈ ತಂಡವು ಸಿಹಿಗಿಂತ ಹೆಚ್ಚು ಕಹಿಯನ್ನೇ ಅನುಭವಿಸಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ ಸಮಾಧಾನಕರ ಸಂಗತಿಯೆಂದರೆ ದುಬೈನಲ್ಲಿ ಆಡಿದ 6 ಪಂದ್ಯಗಳಲ್ಲಿ ಚೆನ್ನೈ 4ರಲ್ಲಿ ಗೆಲುವು ಸಾಧಿಸಿತ್ತು.
ಮುಂಬೈ ಇಂಡಿಯನ್ಸ್ಗೆ ಯಾವುದೇ ಸ್ಥಳವಾದರೂ ಚಿಂತೆಯಿಲ್ಲ. ತಂಡವು ಎಲ್ಲಾ ಪರಿಸ್ಥಿತಿಯಲ್ಲಿ ಹೊಂದಿಕೊಳ್ಳುವ ಆಟಗಾರರನ್ನು ಹೊಂದಿದೆ. ಪೊಲಾರ್ಡ್ ಕಳೆದ ಆವೃತ್ತಿಯಲ್ಲಿ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಮುಂಬೈ ವೇಗದ ಬೌಲರ್ಗಳು ಶ್ರೇಷ್ಠ ಪ್ರದರ್ಶನ ತೋರಿ ತಂಡ 5ನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುಲು ನೆರವಾಗಿದ್ದರು.
ಮುಖಾಮುಖಿ: