ವಿಶ್ವ ಕ್ರಿಕೆಟ್ನ ಮಿಸ್ಟರ್ 360 ಎಬಿಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ತಂಡಕ್ಕೆ ಮತ್ತೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಕುರಿತಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಸಹ ಎಬಿಡಿ ತಮ್ಮ ತಂಡಕ್ಕೆ ಮರಳಬೇಕು ಎಂಬ ಸಲಹೆಯನ್ನೂ ಸಹ ನೀಡಿದ್ರು. ಆದ್ರೆ, ವಿಲಿಯರ್ಸ್ ಇನ್ನೆಂದೂ ತಂಡಕ್ಕೆ ಮರಳುವುದಿಲ್ಲ ಎಂದು ಕ್ರಿಕೆಟ್ ಸೌತ್ ಆಫ್ರಿಕಾಗೆ ಅಧಿಕೃತವಾಗಿ ದೃಢಪಡಿಸಿದೆ.
ಐಪಿಎಲ್ ಆವೃತ್ತಿಯಲ್ಲಿ ತಮ್ಮ ಹೊಡಿಬಡಿ ಆಟದಿಂದಲೇ ಗಮನ ಸೆಳೆದಿದ್ದ ಎಬಿಡಿ, ಟಿ-20 ವಿಶ್ವಕಪ್ ದೃಷ್ಟಿಯಿಂದ ತಂಡಕ್ಕೆ ಮರಳಬೇಕು ಎಂಬುದು ಕ್ರಿಕೆಟ್ ಅಭಿಮಾನಿಗಳ ಮಹದಾಸೆಯಾಗಿತ್ತು.