ಕರ್ನಾಟಕ

karnataka

ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ.. ಕ್ರಿಕೆಟ್​​ ವಿಶ್ವಕಪ್​ ವಿಜೇತ ತಂಡದ ಪ್ಲೇಯರ್​ಗೆ ಇದೆಂಥಾ ಸ್ಥಿತಿ?

2018ರಲ್ಲಿ ಭಾರತಕ್ಕೆ ಅಂಧರ ವಿಶ್ವಕಪ್​ ಗೆದ್ದುಕೊಟ್ಟ ತಂಡದಲ್ಲಿದ್ದ ಆಟಗಾರನೊಬ್ಬ ಇದೀಗ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ಸರ್ಕಾರಿ ಕೆಲಸ ನೀಡುವಂತೆ ಅನೇಕ ಸಲ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ.

By

Published : Aug 10, 2021, 11:05 PM IST

Published : Aug 10, 2021, 11:05 PM IST

cricketer Naresh
cricketer Naresh

ನವಸಾರಿ(ಗುಜರಾತ್​):ಕ್ರಿಕೆಟರ್ಸ್​ ಅಂದರೆ ಸಾಕು ಕೋಟ್ಯಂತರ ರೂಪಾಯಿ ಗಳಿಕೆ ಮಾಡ್ತಾರೆ ಅಂದುಕೊಳ್ಳುತ್ತೇವೆ. ಒಂದು ಸಲ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ಸಾಕು ಅವರ ಲಕ್​ ಚೇಂಜ್​ ಆಗಿಬಿಡುತ್ತದೆ. ಆದರೆ, ಇಲ್ಲೊಬ್ಬ ಕ್ರಿಕೆಟಿಗನ ಪರಿಸ್ಥಿತಿ ಮಾತ್ರ ಹೇಳತೀರದಾಗಿದೆ. 2018ರ ಫೈನಲ್​ ಪಂದ್ಯದಲ್ಲಿ ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದ ಭಾರತದ ಅಂಧರ ತಂಡ ವಿಶ್ವಕಪ್​​ ಎತ್ತಿ ಹಿಡಿದಿತ್ತು. ಈ ವೇಳೆ ಅವರಿಗೆ ರಾಷ್ಟ್ರಪತಿ ಸೇರಿದಂತೆ ಅನೇಕರು ಸನ್ಮಾನ ಮಾಡಿ, ಗೌರವಿಸಿದ್ದರು. ಆದರೆ, ಆ ತಂಡದಲ್ಲಿದ್ದ ಸದಸ್ಯನೊಬ್ಬ ಇದೀಗ ಹೊಟ್ಟೆ ಪಾಡಿಗಾಗಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ.

2018ರ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದ 29 ವರ್ಷದ ನರೇಶ್​ ತುಬ್ಡಾ, ಸದ್ಯ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದಾರೆ. ಗುಜರಾತ್​ನ ನವಸಾರಿಯಲ್ಲಿ ವಾಸವಾಗಿರುವ ಈ ಪ್ಲೇಯರ್​​ ಪ್ರತಿದಿನ 250 ರೂಪಾಯಿ ದುಡಿಯುತ್ತಿದ್ದು, ಅದರಿಂದ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಚಿಕ್ಕದಾದ ಮನೆಯಲ್ಲಿ ವಾಸವಾಗಿರುವ ನರೇಶ್​, ಅನೇಕ ಸಲ ಸರ್ಕಾರಿ ನೌಕರಿ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಬೇರೆ ದಾರಿ ಕಾಣದೇ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ.

2018ರ ಅಂಧರ ಕ್ರಿಕೆಟ್​ ತಂಡದ ಆಟಗಾರ ನರೇಶ್​​

ಇದನ್ನೂ ಓದಿರಿ: ಚೆನ್ನೈಗೆ ಬಂದಿಳಿದ ಧೋನಿ, ಆಗಸ್ಟ್​ 13ರಂದು UAEನತ್ತ ಸಿಎಸ್​ಕೆ ಪ್ರಯಾಣ!

ಮೊದಲು ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ನರೇಶ್​, ಅದರಿಂದ ಬರುವ ಹಣದಿಂದ ಮನೆ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇದೀಗ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ನರೇಶ್​, ಸರ್ಕಾರಿ ಕೆಲಸ ಕೊಡಿಸುವಂತೆ ಮುಖ್ಯಮಂತ್ರಿಗಳ ಬಳಿ ಅನೇಕ ಸಲ ಮನವಿ ಮಾಡಿದ್ದೇನೆ. ಆದರೆ ಉತ್ತರ ಮಾತ್ರ ಸಿಕ್ಕಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ ಜವಾಬ್ದಾರಿ ನನ್ನ ಮೇಲೆ ಇರುವ ಕಾರಣ ಕೂಲಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಐದು ವರ್ಷದವನಾಗಿದ್ದಾಗಿನಿಂದಲೂ ನರೇಶ್​ ಕ್ರಿಕೆಟ್​ ಆಡುತ್ತಿದ್ದರು. 2014ರಲ್ಲಿ ಗುಜರಾತ್​ ತಂಡಕ್ಕೆ ಆಯ್ಕೆಯಾಗಿದ್ದು, ಇದಾದ ಬಳಿಕ ರಾಷ್ಟ್ರೀಯ ತಂಡದಲ್ಲೂ ಅವಕಾಶ ಪಡೆದುಕೊಳ್ಳುತ್ತಾರೆ. ಜತೆಗೆ 2018ರಲ್ಲಿ ವಿಶ್ವಕಪ್​ಗಾಗಿ ಪ್ರಕಟಗೊಂಡಿದ್ದ ತಂಡದಲ್ಲಿ ನರೇಶ್ ಕೂಡ ಇದ್ದರು.

ಬಾಂಗ್ಲಾದೇಶದ ಶಾರ್ಜಾದಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಪಾಕ್​ ಮೇಲೆ ಸವಾರಿ ಮಾಡಿದ್ದ ಭಾರತ ಭರ್ಜರಿ ಗೆಲುವು ದಾಖಲು ಮಾಡಿತ್ತು. ಇದಾದ ಬಳಿಕ ಭಾರತಕ್ಕೆ ಬಂದಾಗ ಕೇಂದ್ರ ಸಚಿವರು ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಇವರನ್ನ ಸನ್ಮಾನಿಸಿದ್ದರು.

ABOUT THE AUTHOR

...view details