ಸೆಂಚುರಿಯನ್: ಬಾಕ್ಸಿಂಗ್ ಡೇ ಟೆಸ್ಟ್ 3ನೇ ದಿನ ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡ ಮತ್ತು ಲುಂಗಿ ಎಂಗಿಡಿ ದಾಳಿಗೆ ಸಿಲುಕಿದ ಟೀಂ ಇಂಡಿಯಾ 327ರನ್ಗಳಿಗೆ ಆಲೌಟ್ ಆಗಿದೆ.
ಮೊದಲ ದಿನ ಭಾರತ 3 ವಿಕೆಟ್ ಕಳೆದುಕೊಂಡು 272 ರನ್ಗಳಿಸಿತ್ತು. ಮಯಾಂಕ್ 60, ಕೊಹ್ಲಿ 35, ರಾಹುಲ್ ಅಜೇಯ 122 ಮತ್ತು ರಹಾನೆ ಅಜೇಯ 40 ರನ್ಗಳಿಸಿದ್ದರು. 2ನೇ ದಿನ ಮಳೆಗೆ ಆಹುತಿಯಾದರೆ, 3ನೇ ದಿನ ಕೊಹ್ಲಿ ಹಿಂದಿನ ಮೊತ್ತಕ್ಕೆ ಕೇವಲ 55 ರನ್ ಸೇರಿಸಿ ಉಳಿದ 7 ವಿಕೆಟ್ ಕಳೆದುಕೊಂಡಿತು.
ಮಂಗಳವಾರ 122 ರನ್ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಉಪನಾಯಕ ಕೆಎಲ್ ರಾಹುಲ್ ಒಂದು ರನ್ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಅಜೇಯ 40 ರನ್ಗಳಿಸಿದ್ದ ರಹಾನೆ 48 ರನ್ಗಳಿಸಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು. ಇವರಿಬ್ಬರ ವಿಕೆಟ್ ಪತನದ ನಂತರ ಭಾರತ ಸತತ 4 ಓವರ್ಗಳಲ್ಲಿ ಅಶ್ವಿನ್(4), ರಿಷಭ್ ಪಂತ್(8), ಶಾರ್ದೂಲ್ ಠಾಕೂರ್(4) ಮತ್ತು ಮೊಹಮ್ಮದ್ ಶಮಿ(8) ವಿಕೆಟ್ ಕಳೆದುಕೊಂಡಿತು.