ಬಾಸೆಲ್ [ಸ್ವಿಟ್ಜರ್ಲೆಂಡ್]:ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸ್ವಿಸ್ ಓಪನ್ ಪಂದ್ಯಾವಳಿಯಲ್ಲಿ ಟರ್ಕಿಯ ನೆಸ್ಲಿಹಾನ್ ಯಿಗಿಟ್ ಅವರನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದರು.
ಯಿಗಿಟ್ ವಿರುದ್ಧ 21-16, 21-19 ಅಂತರದಿಂದ ಸಿಂಧು ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆ ಪಡೆದರು. ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಂಧು, 10-5 ಮುನ್ನಡೆ ಸಾಧಿಸಿದರು. ಆದರೆ ಪ್ರತಿಸ್ಫರ್ಧಿ ಆಟಗಾರ್ತಿ ಯಿಗಿಟ್ ಕೊನೆಯಲ್ಲಿ 11-11 ಅಂಕಗಳ ಸಮ ಬಲ ಪಡೆದರು.
ಮತ್ತೆ ಅದೇ ಜೋಶ್ನಿಂದ ಆಟವಾಡಿದ ಸಿಂಧೂ ಮನ್ನಡೆ ಕಾಯ್ದುಕೊಂಡು ಮೊದಲ ಪಂದ್ಯದಲ್ಲಿ 21-16 ಸೆಟ್ಗಳಿಂದ ಮೇಲುಗೈ ಸಾಧಿಸಿದರು. ಎರಡನೇ ಸುತ್ತಿನಲ್ಲಿ ಸಿಂಧುಗೆ ಯಿಗಿಟ್ ಕಠಿಣ ಸ್ಪರ್ಧೆ ನೀಡಿದರಾದರೂ ಅಂತಿಮವಾಗಿ ಸಿಂಧು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.