ಡೆನ್ಮಾರ್ಕ್:ಸತತ ಏಳು ಬಾರಿ ವಿವಿಧ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲುವಲ್ಲಿ ಎಡವುತ್ತಿದ್ದ ಜಪಾನ್ನ ಒಕುಹರಾ ನಜೊಮಿ ಕೊನೆಗೂ ಡೆನ್ಮಾರ್ಕ್ ಓಪನ್ ಗೆಲ್ಲುವ ಮೂಲಕ ಪ್ರಶಸ್ತಿ ಬರ ನೀಗಿಸಿಕೊಂಡಿದ್ದಾರೆ.
ಮರಿನ್ ಮಣಿಸಿ ಡೆನ್ಮಾರ್ಕ್ ಓಪನ್ ಗೆದ್ದ ಜಪಾನ್ನ ಒಕುಹರಾ ನಜೊಮಿ - ಡೆನ್ಮಾರ್ಕ್ ಓಪನ್
ಇಂದು ನಡೆದ ಫೈನಲ್ ಪಂದ್ಯದಲ್ಲಿ ಒಕುಹರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಸ್ಪೇನ್ನ ಕ್ಯಾರೋಲಿನ ಮರಿನ್ರನ್ನು 21-19, 21-17ರ ಪಾಯಿಂಟ್ಗಳ ಅಂತರದಲ್ಲಿ ಮಣಿಸಿ ಡೆನ್ಮಾರ್ಕ್ ಚಾಂಪಿಯನ್ ಟ್ರೋಫಿ ಹಿಡಿದು ಸಂಭ್ರಮಿಸಿದರು.
ಒಕುಹರಾ ನಜೊಮಿ
ಒಕುಹರಾ ಇಂದು ನಡೆದ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಸ್ಪೇನ್ನ ಕ್ಯಾರೋಲಿನ ಮರಿನ್ ಅವರನ್ನು 21-19, 21-17ರ ಪಾಯಿಂಟುಗಳ ಅಂತರದಲ್ಲಿ ಸೋಲಿಸಿದರು.
ಈ ಮೂಲಕ 2018ರ ಬಳಿಕ ಪ್ರಮುಖ ಟ್ರೋಫಿಯೊಂದನ್ನು ಅವರು ಗೆದ್ದಿದ್ದಾರೆ. ನಜೋಮಿ ಕಳೆದ ಎರಡು ವರ್ಷಗಳಿಂದ ಸತತ ಏಳು ಟೂರ್ನಿಗಳಲ್ಲಿ ಫೈನಲ್ ತಲುಪಿದರೂ ಚಾಂಪಿಯನ್ ಪಟ್ಟಕ್ಕೇರುವುದರಲ್ಲಿ ವಿಫಲರಾಗುತ್ತಿದ್ದರು. ಆದರೆ ಈ ಬಾರಿ ಸ್ಪೇನ್ನ ಆಟಗಾರ್ತಿ ವಿರುದ್ಧ ಯಾವುದೇ ತಪ್ಪು ಮಾಡದೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.