ಕರ್ನಾಟಕ

karnataka

ಸಿದ್ಧವಾಗುತ್ತಿದೆ ಹಿರಿಯ ನಟ ಶ್ರೀನಿವಾಸ ಪ್ರಭು ಆತ್ಮಚರಿತ್ರೆ

By

Published : Feb 14, 2020, 10:47 PM IST

ಶ್ರೀನಿವಾಸ್ ಪ್ರಭು ಅವರ ಆತ್ಮಚರಿತ್ರೆ ಸಿದ್ಧವಾಗುತ್ತಿದೆ. ಅವರ ಬಾಲ್ಯ, ವಿದ್ಯಾಭ್ಯಾಸ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಈಗಾಗಲೇ ಸುಮಾರು 50 ಪುಟಗಳನ್ನು ಬರೆದಿದ್ದಾರೆ. ಬಾಲ್ಯವನ್ನು ಅಜ್ಜ-ಅಜ್ಜಿ ಮನೆ ಕೋಣನೂರಿನಲ್ಲಿ ಕಳೆದಿದ್ದು. ಪ್ರೌಢಶಾಲೆಗಾಗಿ ಬೆಂಗಳೂರಿಗೆ ಬಂದದ್ದು. ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರ ಎಲ್ಲವೂ ಈ ಆತ್ಮಚರಿತ್ರೆಯಲ್ಲಿದೆ.

Srinivas Prabhu
ಶ್ರೀನಿವಾಸ ಪ್ರಭು

ಕನ್ನಡ ಚಿತ್ರರಂಗ, ರಂಗಭೂಮಿ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಶ್ರೀನಿವಾಸಪ್ರಭು ಅವರು ಜನಪ್ರಿಯ ವ್ಯಕ್ತಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರು ಉತ್ತಮ ಬರಹಗಾರ ಕೂಡಾ. 1977 ರಲ್ಲಿ 'ಬೆಳ್ಳಿ ಗುಂಡು' ಎಂಬ ನಾಟಕವನ್ನು ರಚಿಸಿ ಅನಂತ್​​ನಾಗ್ ಅವರಂತ ದಿಗ್ಗಜರನ್ನು ತಮ್ಮತ್ತ ಸೆಳೆದವರು ಶ್ರೀನಿವಾಸ ಪ್ರಭು.

ನಂತರ ಶ್ರೀನಿವಾಸ ಪ್ರಭು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಕೋರ್ಸ್ ಮುಗಿಸಿ ದೂರದರ್ಶನದಲ್ಲಿ ಸೇವೆಗೆ ಸೇರಿಕೊಂಡರು. 14 ವರ್ಷಗಳು ಬೆಂಗಳೂರು ದೂರದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಾಂತಿ ಕ್ರಾಂತಿ ಚಿತ್ರದವರಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಶ್ರೀನಿವಾಸಪ್ರಭು ಕಂಠದಾನ ಕಲಾವಿದರಾಗಿ ಕೆಲಸ ಮಾಡಿದರು. ಇತ್ತೀಚೆಗೆ ಶ್ರೀನಿವಾಸಪ್ರಭು ‘ಬಿಂಬ...ಆ 90 ನಿಮಿಷಗಳು’ ಸಿನಿಮಾದಿಂದ ವಿಶ್ವ ದಾಖಲೆ ಕೂಡಾ ಮಾಡಿದರು.

ಇದೀಗ ಶ್ರೀನಿವಾಸ್ ಪ್ರಭು ಅವರ ಆತ್ಮಚರಿತ್ರೆ ಸಿದ್ಧವಾಗುತ್ತಿದೆ. ಅವರ ಬಾಲ್ಯ, ವಿದ್ಯಾಭ್ಯಾಸ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಈಗಾಗಲೇ ಸುಮಾರು 50 ಪುಟಗಳನ್ನು ಬರೆದಿದ್ದಾರೆ. ಬಾಲ್ಯವನ್ನು ಅಜ್ಜ-ಅಜ್ಜಿ ಮನೆ ಕೋಣನೂರಿನಲ್ಲಿ ಕಳೆದಿದ್ದು. ಪ್ರೌಢಶಾಲೆಗಾಗಿ ಬೆಂಗಳೂರಿಗೆ ಬಂದದ್ದು. ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರ ಎಲ್ಲವೂ ಈ ಆತ್ಮಚರಿತ್ರೆಯಲ್ಲಿದೆ.

ಸಿನಿಮಾ, ರಂಗಭೂಮಿ ಹೊರತುಪಡಿಸಿ ಶ್ರೀನಿವಾಸ ಪ್ರಭು ಬಹಳ ಚೆನ್ನಾಗಿ ಅಡುಗೆ ಮಾಡುತ್ತಾರೆ. ಪತ್ನಿ ಕನ್ನಡ ಉಪಾಧ್ಯಾಯರು ಹಾಗೂ ಕವಿಯತ್ರಿ. ಮಗ ಮೆಕಾನಿಕಲ್ ಇಂಜಿನಿಯರ್, ಮಗಳು ಲಂಡನ್​​​ನಲ್ಲಿ ನೆಲಸಿದ್ದಾರೆ. ಬ್ಯುಸಿ ಇದ್ದರೂ ಪುಸ್ತಕ ಓದುವುದು, ಕ್ಲಾಸ್ಸಿಕ್ ಸಿನಿಮಾಗಳ ವೀಕ್ಷಣೆ, ಚರ್ಚೆಯಲ್ಲಿ ಭಾಗವಹಿಸುವಿಕೆಗೆ ಸಮಯ ಮಾಡಿಕೊಳ್ಳುತ್ತಾರೆ. ಇದುವರೆಗೂ ಸುಮಾರು 150 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಶ್ರೀನಿವಾಸ ಪ್ರಭು. ಅವರ ಅಭಿನಯದ ‘ಜ್ಞಾನ ಗಂಗೆ’ ಹಾಗೂ ‘ಇತ್ಯರ್ಥ’ ಬಿಡುಗಡೆಗೆ ಸಿದ್ಧವಾಗಿದೆ.

TAGGED:

ABOUT THE AUTHOR

...view details