ಕರ್ನಾಟಕ

karnataka

ETV Bharat / sitara

ಬೆಳ್ಳಿತೆರೆ ಕನಸು ಕಾಣದೆ ಕಿರುತೆರೆಯಲ್ಲೇ ಮಿಂಚುತ್ತಿರುವ ನಟಿಯರು ಇವರು - Lakumi serial fame Sushma shekhar

ಧಾರಾವಾಹಿಗಳ ಮೂಲಕ ಕರಿಯರ್ ಆರಂಭಿಸಿ ನಂತರ ಬೆಳ್ಳಿ ತೆರೆಗೆ ಹೋಗುವವರ ನಡುವೆ ಕೆಲವೇ ನಟಿಯರು ಮಾತ್ರ ನಾವು ಕಿರುತೆರೆಯಲ್ಲೇ ಹೆಸರು ಮಾಡುತ್ತೇವೆ ಎನ್ನುತ್ತಿದ್ದಾರೆ. ಅಮೃತಾ ರಾಮಮೂರ್ತಿ, ದೀಪಿಕಾ, ಸುಷ್ಮಾ ಶೇಖರ್ ಸೇರಿ ಅನೇಕ ನಟಿಯರು ಇಂದಿಗೂ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.

Small screen actress
ನಮ್ರತಾ

By

Published : Jul 23, 2020, 5:34 PM IST

ಕಿರುತೆರೆ ಮೂಲಕ ಬಣ್ಣದ ಪಯಣ ಆರಂಭಿಸಿದ ಬಹುತೇಕರು ಸಿನಿಮಾದಲ್ಲಿ ಅವಕಾಶ ದೊರೆಯುವುದೇ ತಡ ಅದನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ ಕೆಲವರು ಮಾತ್ರ ಬಹಳ ವಿಭಿನ್ನ. ನಮಗೆ ಬೆಳ್ಳಿ ತೆರೆ ಬೇಡ, ಇಲ್ಲೇ ಇರುತ್ತೇವೆ ಎನ್ನುತ್ತಾರೆ.

ಒಂದಾದ ನಂತರ ಒಂದರಂತೆ ಕಿರುತೆರೆಯಲ್ಲೇ ಇವರಿಗೆಲ್ಲಾ ಅವಕಾಶ ದೊರೆಯುತ್ತಿದೆ. ಬೆಳ್ಳಿತೆರೆಯ ಕನಸು ಕಾಣದ ಇವರು ಕಿರುತೆರೆಯಲ್ಲೇ ಹೆಸರು ಮಾಡಿ ವೀಕ್ಷಕರ ಮನ ಗೆದ್ದಿದ್ದಾರೆ. ಅದೃಷ್ಟ, ಜನರ ಪ್ರೀತಿ ಇದ್ದರೆ ಸಿನಿಮಾಗಳಲ್ಲಿ ಮಾತ್ರವಲ್ಲ ಧಾರಾವಾಹಿ ಮೂಲಕವೂ ಜನರ ಮನಸ್ಸು ಗೆಲ್ಲಬಹುದು ಎನ್ನುತ್ತಾರೆ ಈ ಚೆಲುವೆಯರು.

ಅಮೃತಾ ರಾಮಮೂರ್ತಿ

'ಸರಸ್ವತಿ ಲಕ್ಷ್ಮಿ ಪ್ರಿಯೆ' ಧಾರಾವಾಹಿಯಲ್ಲಿ ಲಕ್ಷ್ಮಿ ಯಾಗಿ ನಟಿಸುವ ಮೂಲಕ ಕಿರುತೆರೆಗೆ ಬಂದ ಅಮೃತಾ ರಾಮಮೂರ್ತಿ ಮೇಘ ಮಯೂರಿ ಧಾರಾವಾಹಿಯ ಮಯೂರಿ ಆಗಿ ಮಿಂಚಿದರು. ಅಲ್ಲಿಂದ ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯಲ್ಲಿ ಐಶ್ವರ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡ ಅಮೃತಾ ತದ ನಂತರ ಕಾಣಿಸಿಕೊಂಡಿದ್ದು ಕುಲವಧುವಿನ ವಚನಾಳಾಗಿ. ಈ ಮಧ್ಯೆ 'ಸೈಕೋ ಶಂಕ್ರ' ಸಿನಿಮಾದಲ್ಲಿ ಅಮೃತಾ ಬಣ್ಣ ಹಚ್ಚಿದ್ದರೂ ಮತ್ತೆ ಮರಳಿ ಕಿರುತೆರೆಗೆ ಬಂದರು. ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಮೃದುಲಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಅಮೃತಾ ರಾಮಮೂರ್ತಿ

ದೀಪಿಕಾ

'ಕುಲವಧು' ಧಾರಾವಾಹಿಯಲ್ಲಿ ಹಿರಿ ಸೊಸೆ ಧನ್ಯಾಳಾಗಿ ಕಿರುತೆರೆಗೆ ಬಂದ ದೀಪಿಕಾ ಮೊದಲ ಧಾರಾವಾಹಿಯಲ್ಲೇ ಮನೆ ಮಾತಾದರು‌. ಕುಲವಧು ಧಾರಾವಾಹಿಯ ನಂತರ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಆರತಿಯಾಗಿ ನಟಿಸುವ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಕಾರಣಾಂತರಗಳಿಂದ ಧಾರಾವಾಹಿ ಪ್ರಸಾರ ನಿಲ್ಲಿಸಿತ್ತು. ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ಅಭಿನಯಿಸುತ್ತಿದ್ದಾರೆ.

ದೀಪಿಕಾ

ಕಾವ್ಯ ಮಹಾದೇವ್

ಚರಣದಾಸಿ ಧಾರಾವಾಹಿಯ ದೀಪಾ ಆಗಿ ನಟನಾ ಕ್ಷೇತ್ರಕ್ಕೆ ಬಂದ ಮಲೆನಾಡ ಕುವರಿ ಕಾವ್ಯ ಮಹಾದೇವ್ ಮುಂದೆ ಕಾಣಿಸಿಕೊಂಡಿದ್ದು ನೆಗೆಟಿವ್ ರೋಲ್​​​ನಲ್ಲಿ. ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಕಾಂಚನಾ ಳಾಗಿ ಅಭಿನಯಿಸಿ ನೆಗೆಟಿವ್ ಪಾತ್ರಕ್ಕೂ ಸೈ ಎಂದು ಸಾಬೀತು ಮಾಡಿದ ಚೆಲುವೆ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮೂರ ಯುವರಾಣಿ ಧಾರಾವಾಹಿಯಲ್ಲಿ ಅಹಲ್ಯಾ ಆಗಿ ನಟಿಸುತ್ತಿದ್ದಾರೆ.

ಕಾವ್ಯ ಮಹಾದೇವ್

ಅನಿಕಾ ಸಿಂಧ್ಯಾ

ಕಾದಂಬರಿ ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಅನಿಕಾ ಸಿಂಧ್ಯಾ ನಂತರ ಗುಪ್ತಗಾಮಿನಿ, ಕುಂಕುಮ ಭಾಗ್ಯ, ಕಂಕಣ, ನನ್ನವಳು, ಸುಕನ್ಯಾ, ಮನೆಮಗಳು, ಶುಭಮಂಗಳ, ಮಂದಾರ, ಸೂರ್ಯಕಾಂತಿ, ಆಕಾಶದೀಪ ಹೀಗೆ ಸುಮಾರು 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇವರಿಗೆ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಕುಮುದಾ ಪಾತ್ರ ಬಹಳ ಹೆಸರು ನೀಡಿತು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕನ ಅಕ್ಕನಾಗಿ ಅಭಿನಯಿಸುತ್ತಿದ್ದಾರೆ.

ಅನಿಕಾ ಸಿಂಧ್ಯ

ಸುಷ್ಮಾ ಶೇಖರ್

'ವೆಂಕಟೇಶ್ವರ ಮಹಿಮೆ' ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಬಂದ ಸುಷ್ಮಾ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದು ಲಕುಮಿ ಧಾರಾವಾಹಿಯಲ್ಲಿ. ನಂತರ ಕನಕ ಧಾರಾವಾಹಿಯಲ್ಲಿ ಕನಕಳಾಗಿ ನಟಿಸಿದ ಸುಷ್ಮಾ ಶೇಖರ್, ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಬೆಳ್ಳಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.

ಸುಷ್ಮಾ ಶೇಖರ್

ಅಮೂಲ್ಯ ಗೌಡ

ಸ್ವಾತಿಮುತ್ತು ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಬಂದ ಅಮೂಲ್ಯ ಗೌಡ ಅಲ್ಲಿಂದ ಪುನರ್ ವಿವಾಹ, ಅರಮನೆ ಧಾರಾವಾಹಿಯಲ್ಲೂ ನಟಿಸಿದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿಯಲ್ಲಿ ಕಮಲಿ ಆಗಿ ಅಭಿನಯಿಸುತ್ತಿದ್ದಾರೆ.

ಅಮೂಲ್ಯ ಗೌಡ

ನಮ್ರತಾ ಗೌಡ

ಬಾಲ ಕಲಾವಿದೆಯಾಗಿ ಕಿರುತೆರೆ ಲೋಕಕ್ಕೆ ಬಂದ ನಮ್ರತಾ ಗೌಡ 'ಆಕಾಶದೀಪ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ನಂತರ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಹಿಮಾ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ನಮ್ರತಾ ಇದೀಗ ನಾಗಿಣಿಯಾಗಿ ಬದಲಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಿಣಿ' ಧಾರಾವಾಹಿಯಲ್ಲಿ ನಾಗಿಣಿ ಶಿವಾನಿ ಆಗಿ ನಮ್ರತಾ ನಟಿಸುತ್ತಿದ್ದಾರೆ.

ನಮ್ರತಾ ಗೌಡ

ABOUT THE AUTHOR

...view details