ಕರ್ನಾಟಕ

karnataka

ETV Bharat / sitara

ಶತಕ ಬಾರಿಸಿದ 'ಸತ್ಯ': ರಾಘವೇಂದ್ರ ಹುಣಸೂರು ಸಂತಸ - Zee kannada latest news

ಜೀ ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗುವ ಸತ್ಯ ಧಾರಾವಾಹಿಯು ನೂರು ಕಂತುಗಳನ್ನು ಪೂರೈಸಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ರಾಘವೇಂದ್ರ ಹುಣಸೂರು ಸಂತಸ ಹಂಚಿಕೊಂಡರು.

Satya
'ಸತ್ಯ

By

Published : Apr 25, 2021, 7:09 AM IST

'ಸತ್ಯ' ಧಾರಾವಾಹಿ 100 ಎಪಿಸೋಡ್​ಗಳನ್ನು ಪೂರ್ಣಗೊಳಿಸಿದ ಸಂಭ್ರಮದಲ್ಲಿದೆ. ಸತ್ಯ ಎಂಬ ದಿಟ್ಟ ಹುಡುಗಿಯ ಕಥೆಯನ್ನು ಈ ಧಾರಾವಾಹಿ ಹೊಂದಿದ್ದು, ಸತ್ಯ ಪಾತ್ರದಲ್ಲಿ ನಟಿ ಗೌತಮಿ ಜಾಧವ್​ ಅಭಿನಯಿಸಿದ್ದಾರೆ.

ಗೌತಮಿ ಅವರ ಹೇರ್​ಸ್ಟೈಲ್​, ಮ್ಯಾನರಿಸಂ ಮತ್ತು ಅಭಿನಯದ ಶೈಲಿಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದು, ಧಾರಾವಾಹಿ ವೀಕ್ಷಕರ ಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದೆ. ಪ್ರೀತಿ-ಪ್ರೇಮ, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್​ ಸೇರಿದಂತೆ ಅನೇಕ ಬಗೆಯಲ್ಲಿ ಪ್ರೇಕ್ಷಕರನ್ನು ಈ ಧಾರಾವಾಹಿ ಸೆಳೆಯುತ್ತಿದೆ. 100 ಸಂಚಿಕೆಗಳನ್ನು ಪೂರೈಸಿರುವುದು ಇಡೀ ತಂಡದಲ್ಲಿ ಸಂಭ್ರಮ ಮನೆಮಾಡಿದೆ.

'ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿರುವ ಸತ್ಯ ಧಾರಾವಾಹಿ ನೂರು ಕಂತಿನ ಮೈಲಿಗಲ್ಲು ಮುಟ್ಟಿರುವುದು ಅವರ ಅಭೂತಪೂರ್ವ ಪ್ರೀತಿಗೆ ದ್ಯೋತಕವಾಗಿದೆ. ಜೀ ಕನ್ನಡ ವೀಕ್ಷಕರನ್ನು ರಂಜಿಸುವ ಮತ್ತಷ್ಟು ವಿನೂತನ ಕಾರ್ಯಕ್ರಮಗಳನ್ನು ನಾವು ನೀಡಲು ಇದು ಪ್ರೇರಣೆ ನೀಡಿದೆ' ಎಂದು ರಾಘವೇಂದ್ರ ಹುಣಸೂರು ಹೇಳಿದ್ದಾರೆ.

ನಾಯಕನಾಗಿ ಸಾಗರ್​ ಬಿಳಿ ಗೌಡ, ಶ್ರೀನಿವಾಸ್​ ಮೂರ್ತಿ, ಅಭಿಜಿತ್​, ತ್ರಿವೇಣಿ ಮುಂತಾದವರು ಸತ್ಯ ಧಾರಾವಾಹಿಯ ಇನ್ನುಳಿದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ABOUT THE AUTHOR

...view details