ಕರ್ನಾಟಕ

karnataka

ETV Bharat / sitara

ಬಿಗ್‌ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಹೊರ ಬಂದ ಸ್ಪರ್ಧಿ ಇವರೇ.. - ಬಿಗ್​ಬಾಸ್​ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್

ಬಿಗ್​ಬಾಸ್​ ಸೀಸನ್ 8ರ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದ್ದು ನಿಧಿ ಸುಬ್ಬಯ್ಯ ಶೋ ನಿಂದ ಹೊರನಡೆದಿದ್ದಾರೆ.

nidhi subbaiah
ನಿಧಿ ಸುಬ್ಬಯ್ಯ

By

Published : Jul 4, 2021, 8:08 PM IST

ಬಿಗ್​ಬಾಸ್​ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ಪ್ರಾರಂಭವಾಗಿ ಈಗಾಗಲೇ 10 ದಿನಗಳಾಗಿವೆ. ಈ ಇನ್ನಿಂಗ್ಸ್​ನ ಮೊದಲನೇ ಎಲಿಮಿನೇಷನ್ ಆಗಿದ್ದು ಬಿಗ್ ಬಾಸ್ ಮನೆಯಿಂದ ನಿಧಿ ಸುಬ್ಬಯ್ಯ ಹೊರನಡೆದಿದ್ದಾರೆ.

ಬಿಗ್‌ಬಾಸ್​ 8ನೇ ಸೀಸನ್ ಕಳೆದ ಫೆಬ್ರವರಿಯಲ್ಲಿ ಪ್ರಾರಂಭವಾಗಿತ್ತು. 72 ದಿನಗಳ ನಂತರ ಲಾಕ್​ಡೌನ್​ನಿಂದ ಸ್ಥಗಿತಗೊಂಡು ಪುನಃ ಜೂನ್ ತಿಂಗಳ ಕೊನೆಯಲ್ಲಿ ಶುರುವಾಗಿತ್ತು. ಕಳೆದ ವಾರವೇ ಎಲಿಮಿನೇಷನ್ ಪ್ರಕ್ರಿಯೆ ನಡೆದು, ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಬೇಕಿತ್ತು. ಪ್ರಶಾಂತ್ ಸಂಬರಗಿ ಎಲಿಮಿನೇಟ್ ಆದರೂ, ಅದು ಪ್ರಾಂಕ್ ಎಂಬ ಕಾರಣಕ್ಕೆ ಅವರು ಪುನಃ ಮನೆಗೆ ಹಿಂದಿರುಗಿದರು.

ಕಳೆದ ವಾರ ನಾಮಿನೇಟ್ ಆದವರು ಈ ವಾರ ಕೂಡ ಪುನಃ ಮುಂದುವರೆದಿದ್ದು, ಈ ಪೈಕಿ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ರಘು ಗೌಡ, ಪ್ರಶಾಂತ್ ಸಂಬರಗಿ ಮತ್ತು ಪ್ರಿಯಾಂಕಾ ತಿಮ್ಮೇಶ್ ಮೇಲೆ ಎಲಿಮಿನೇಷನ್ ಕತ್ತಿ ನೇತಾಡುತ್ತಿತ್ತು. ಏಳು ಸ್ಪಧಿರ್ಗಳ ಪೈಕಿ ಇದೀಗ ನಿಧಿ ಎಲಿಮಿನೇಟ್ ಆಗಿದ್ದಾರೆ.

ಇನ್ನು ಸದ್ಯಕ್ಕೆ ಬಿಗ್​ಬಾಸ್ ಮನೆಯಲ್ಲಿ11 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ಪೈಕಿ ಅಂತಿಮವಾಗಿ ಯಾರು ಗೆಲ್ಲುತ್ತಾರೆ? ಎಂಬ ಕುತೂಹಲ ಎಲ್ಲರಿಗೂ ಮೂಡಿದೆ.

For All Latest Updates

ABOUT THE AUTHOR

...view details