ಕರ್ನಾಟಕ

karnataka

ETV Bharat / sitara

'ವೀಕೆಂಡ್ ವಿಥ್ ರಮೇಶ್​'ಗೆ ಬರಬೇಕಂತೆ 'ದಿ ವಾಲ್​',  ದ್ರಾವಿಡ್​ ಕರೆತರಲು ನ್ಯೂ ಪ್ಲಾನ್​

ರಾಹುಲ್ ದ್ರಾವಿಡ್​ 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮಕ್ಕೆ ಬರಬೇಕು. ಅವರ ಸಾಧನೆಯ ಹಾದಿಯನ್ನು ರೆಡ್​ ಸೀಟ್​ ಮೇಲೆ ಕುಳಿತು ಹೇಳಿಕೊಳ್ಳಬೇಕು ಎಂಬುದು ಕನ್ನಡಿಗರ ಮನದಿಂಗಿತ. ಆದರೆ, ಈ ಬಯಕೆ ನಾಲ್ಕನೇ ಸೀಸನ್​ನಲ್ಲಿಯೂ ಈಡೇರುತ್ತಿಲ್ಲ. ​

By

Published : Apr 16, 2019, 7:02 PM IST

ವೀಕೆಂಡ್ ವಿಥ್ ರಮೇಶ್​

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್​ ಅವರನ್ನು ಕರೆತನ್ನಿ ಎನ್ನುವ ಕೂಗು ಪ್ರಾರಂಭದಿಂದಲೂ ಕೇಳಿ ಬರುತ್ತಿದೆ. ಆದರೆ,ಈವರೆಗೂ ವಾಲ್ ಆಫ್​ ಕ್ರಿಕೆಟ್​ನ್ನು ಸಾಧಕರ ಸೀಟಿನಲ್ಲಿ ಕಣ್ಣುಂಬಿಕೊಳ್ಳುವ ಸೌಭಾಗ್ಯ ಕೂಡಿ ಬಂದಿಲ್ಲ.ಈ ಬಾರಿಯೂ ಕನ್ನಡಿಗರ ಕನಸು ನನಸಾಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಹೌದು, ಕಳೆದ ಮೂರು ಸೀಸನ್​​ಗಳಿಂದ ಹೆಮ್ಮೆಯ ಕನ್ನಡಿಗ ದ್ರಾವಿಡ್​ ಬರುವಿಕೆಗೆ ವೀಕ್ಷಕರು ಕಾಯುತ್ತಿದ್ದಾರೆ. ಪ್ರತಿ ಸೀಸನ್​ ಪ್ರಾರಂಭಕ್ಕು ಮುನ್ನ ರಾಹುಲ್ ದ್ರಾವಿಡ್​ ಅವರನ್ನು ಕರೆತನ್ನಿ ಎನ್ನುವ ಕರೆಗಳು ​​ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಲೆಕ್ಕವಿಲ್ಲದಷ್ಟು ಬಂದಿವೆ. ವಾಹಿನಿ ಕೂಡ ರಾಹುಲ್ ದ್ರಾವಿಡ್ ಅವರಿಗೆ ಪತ್ರದ ಮೂಲಕ ಸಂಪರ್ಕ ಸಹ ಮಾಡಿದೆಯಂತೆ. ಆದರೆ, ಇದಕ್ಕೆ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ವಂತೆ.

​​ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು

ಈ ಬಗ್ಗೆ ಮಾತನಾಡಿರುವ ರಾಘವೇಂದ್ರ ಹುಣಸೂರು, ದ್ರಾವಿಡ್​ ಅವರನ್ನು ಕರೆತರಲು ಇರುವುದು ಒಂದೇ ಮಾರ್ಗ. ಟ್ವಿಟ್ಟರ್​ನಲ್ಲಿ 'We want Rahul' ಅಂತಾ ಅಭಿಯಾನ ಪ್ರಾರಂಭಿಸಬೇಕು. ಇದಕ್ಕೆ ಕನ್ನಡಿಗರಿಂದ ವ್ಯಕ್ತವಾಗುವ ಬೆಂಬಲವನ್ನು ಸಾಕ್ಷಿಯಾಗಿ ದ್ರಾವಿಡ್ ಅವರ ಮುಂದಿಟ್ಟು, ಅವರನ್ನು ಮನವೋಲಿಸಬೇಕು ಎನ್ನುತ್ತಾರೆ. ಈ ಬಗ್ಗೆ ಗಂಭೀರವಾಗಿಯೇ ಆಲೋಚಿಸಿರುವ ವಾಹಿನಿ, ‘ನಿಖಿಲ್ ಎಲ್ಲಿದ್ದಿಯಪ್ಪ’ ಎನ್ನೋ ಹಾಗೆ ನಾವು 'ರಾಹುಲ್ ಎಲ್ಲಿದ್ದಿಯಪ್ಪ' ಅಂತ ಮಾಡಿದ್ರೆ ಒಳಿತು. ಆದರೆ, ಅದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಹೊಂದಿಕೆ ಆಗುವ ಸಾಧ್ಯತೆ ಇದೆ. ಹಾಗಾಗಿ ಈಗ ಡಬ್ಲೂ ಡಬ್ಲೂ ರಾಹುಲ್ (ವೀ ವಾಂಟ್ ರಾಹುಲ್) ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟು ಜನರ ಅಪೇಕ್ಷೆ ತಿಳಿಯಲು ಸಿದ್ಧವಾಗಿದೆಯಂತೆ.

ಇನ್ನು ವೀಕೆಂಡ್ ವಿಥ್ ರಮೇಶ್​ ಸೀಸನ್​ 4 ಮುಗಿಯುವ ಸಮಯಕ್ಕೆ ರಾಘವೇಂದ್ರ ಹುಣಸೂರು, 5ನೇ ಕಂತು ಹೇಗಿರಲಿದೆ ಎಂಬುದರ ಬಗ್ಗೆ ಕೇಳಲಿದ್ದಾರಂತೆ. ಈ ಕಾರ್ಯಕ್ರಮಕ್ಕೆ 4 ಕಂತುಗಳ ವ್ಯಕ್ತಿಗಳನ್ನು ಕರೆಸುವ ಯೋಜನೆ ಸಹಇದೆಯಂತೆ. ಅದೇ ಸಮಯಕ್ಕೆ ಪುಸ್ತಕ ರೂಪದಲ್ಲಿ ಹಾಡು ಡಿವಿಡಿ ರೂಪದಲ್ಲಿ ‘ವೀಕೆಂಡ್ ವಿತ್ ರಮೇಶ್’ ಬರಲಿದೆಯಂತೆ.

For All Latest Updates

TAGGED:

ABOUT THE AUTHOR

...view details