ಕರ್ನಾಟಕ

karnataka

ETV Bharat / sitara

ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ರಂಗಭೂಮಿ ಕಲಾವಿದ ಜಯಕುಮಾರ್​ ಕೊಡಗನೂರು

ಕಿರುತೆರೆ ಕ್ಷೇತ್ರದ ಸಾಧನೆಗಾಗಿ ರಂಗಭೂಮಿ ನಟ ಜಯಕುಮಾರ್ ಕೊಡಗನೂರು ಅವರಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಗುಬ್ಬಿ ಕಂಪನಿ, ಗುಡಗೇರಿ ಕುಮಾರಸ್ವಾಮಿ, ಚಿಂದೋಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 50 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

By

Published : Oct 28, 2019, 9:33 PM IST

ಜಯಕುಮಾರ್ ಕೊಡಗನೂರು

ವರನಟ ಡಾ. ರಾಜ್​​​​ಕುಮಾರ್ ಅವರ ತದ್ರೂಪು ಎಂದೇ ಕರೆಸಿಕೊಳ್ಳುತ್ತಿದ್ದ ರಂಗಭೂಮಿ ನಟ ಜಯಕುಮಾರ್ ಕೊಡಗನೂರು 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಯಕುಮಾರ್ ಮೂಲತಃ ದಾವಣಗೆರೆಯ ಕೊಡಗನೂರಿನವರು. ರಂಗಭೂಮಿಯ ಅಪ್ಪಟ ಕಲಾವಿದರಾದ ಇವರು ಅಭಿನಯ ಚತುರರು. ಕಿರುತೆರೆ ಕ್ಷೇತ್ರದ ಸಾಧನೆಗಾಗಿ ಇವರಿಗೆ ಈ ಪ್ರಶಸ್ತಿ ಲಭಿಸಿದೆ. ಗುಬ್ಬಿ ಕಂಪನಿ, ಗುಡಗೇರಿ ಕುಮಾರಸ್ವಾಮಿ, ಚಿಂದೋಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ದರ್ಶನ್, ಶಶಿಕುಮಾರ್, ಶಿವರಾಜ್​​ಕುಮಾರ್ ಸೇರಿದಂತೆ ಅನೇಕ ನಟರ ಜೊತೆ ಪೋಷಕ ಪಾತ್ರದಲ್ಲಿ ಜಯಕುಮಾರ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಕಲಬುರಗಿಯ ಕಾಯಂ ಮೊಕ್ಕಾಂ ನಾಟಕ ಕಂಪನಿ ಆಯೋಜಿಸಿದ್ದ ನಾಟಕವೊಂದರಲ್ಲಿ ನಟಿಸುತ್ತಿದ್ದ ವೇಳೆ ಜಯಕುಮಾರ್​​ಗೆ ಹೃದಯಾಘಾತ ಸಂಭವಿಸಿತ್ತು. ಆ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಜಯಕುಮಾರ್ ಗುಣಮುಖರಾಗಿ ದಾವಣಗೆರೆಯಲ್ಲಿ ವಾಸವಿದ್ದಾರೆ ಎಂದು ಪುತ್ರ ಮಾರುತಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details