ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠ ಆಗಿ ನಟಿಸಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಹ್ಯಾಂಡ್ ಸಮ್ ಹುಡುಗ ರಕ್ಷ್ ಅವರು ಇತ್ತೀಚೆಗಷ್ಟೇ ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಂಡಿದ್ದು ಕಬಿನಿಗೆ ತೆರಳಿದ್ದರು. ಕಬಿನಿ ಅರಣ್ಯಕ್ಕೆ ಹೋಗಿರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಶೇರ್ ಮಾಡಿದ್ದಾರೆ ರಕ್ಷ್. ಮಾತ್ರವಲ್ಲ ಇದರ ಜೊತೆಗೆ "ದೇಶದ ಶ್ರೇಷ್ಠತೆಯನ್ನು ಪ್ರಾಣಿಗಳನ್ನು ಪರಿಗಣಿಸುವ ವಿಧಾನದಿಂದ ನಿರ್ಣಯಿಸಬಹುದು- ಮಹಾತ್ಮಾ ಗಾಂಧಿ" ಎಂದು ಬರೆದುಕೊಂಡಿದ್ದಾರೆ.
ಕಬಿನಿಯಲ್ಲಿ ಇಯರ್ ಎಂಡ್ ಕಳೆದ ಗಟ್ಟಿಮೇಳ ಖ್ಯಾತಿಯ ರಕ್ಷ್
ಕಬಿನಿ ಅರಣ್ಯಕ್ಕೆ ಹೋಗಿರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಶೇರ್ ಮಾಡಿದ್ದಾರೆ ರಕ್ಷ್. ಮಾತ್ರವಲ್ಲ ಇದರ ಜೊತೆಗೆ "ದೇಶದ ಶ್ರೇಷ್ಠತೆ ಪ್ರಾಣಿಗಳನ್ನು ಪರಿಗಣಿಸುವ ವಿಧಾನದಿಂದ ನಿರ್ಣಯಿಸಬಹುದು- ಮಹಾತ್ಮಾ ಗಾಂಧಿ" ಎಂದು ಬರೆದುಕೊಂಡಿದ್ದಾರೆ.
ಸದಾ ಕಾಲ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ನಟ ರಕ್ಷ್ ವೀಕೆಂಡ್ನ್ನು ಪ್ರಕೃತಿಯ ಮಧ್ಯೆ ಕಳೆಯಲು ಇಷ್ಟಪಡುತ್ತಾರೆ. ಡಿಸೆಂಬರ್ ಮೂರನೇ ವಾರದಲ್ಲಿ ಮುಳ್ಳಯ್ಯನಗಿರಿಗೆ ತೆರಳಿದ್ದರು ರಕ್ಷ್. ಕರ್ನಾಟಕದ ಅತಿ ಎತ್ತರದ ಬೆಟ್ಟದಲ್ಲಿ ನಿಂತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದೀಗ ಈ ವಾರಾಂತ್ಯದಲ್ಲಿ ಅವರು ಕಬಿನಿಯಲ್ಲಿ ಕಾಲ ಕಳೆದಿದ್ದು ಪ್ರಕೃತಿಯ ಮಧ್ಯೆ ಸಂತಸದಿಂದ ಕಾಲ ಕಳೆದಿದ್ದಾರೆ. ಇನ್ನು ಪುಟ್ಟ ಗೌರಿಯ ಮದುವೆಯ ಮಹೇಶ ಆಗಿ ಕಿರುತೆರೆಗೆ ಕಾಲಿಟ್ಟ ರಕ್ಷ್ ಸದ್ಯ ವೇದಾಂತ್ ವಸಿಷ್ಠ ಆಗಿ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇದರ ಜೊತೆಗೆ ನರಗುಂದ ಬಂಡಾಯ ಸಿನಿಮಾದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ ರಕ್ಷ್.