ಕರ್ನಾಟಕ

karnataka

ETV Bharat / sitara

ಧಾರಾವಾಹಿಗಳ ಚಿತ್ರೀಕರಣ ಪುನಾರಂಭ... ಪ್ರಸಾರದ ಸಮಯದಲ್ಲಿ ಬದಲಾವಣೆ

ಇಂದಿನಿಂದ ಕೆಲವೊಂದು ಧಾರಾವಾಹಿಗಳ ಚಿತ್ರೀಕರಣ ಪುನಾರಂಭವಾಗಿದೆ. ವೀಕ್ಷಕರು ತಮ್ಮ ಮೆಚ್ಚಿನ ಧಾರಾವಾಹಿಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದು ಕೆಲವೊಂದು ಧಾರಾವಾಹಿಗಳ ಪ್ರಸಾರದ ಸಮಯದಲ್ಲಿ ಬದಲಾವಣೆಗಳಾಗಿವೆ.

By

Published : May 25, 2020, 10:05 PM IST

Updated : May 27, 2020, 10:58 AM IST

Serial shooting re start from today
ಇಂದಿನಿಂದ ಧಾರಾವಾಹಿಗಳ ಚಿತ್ರೀಕರಣ ಪುನಾರಂಭ

ಸುಮಾರು 2 ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ಸಾಮಾಜಿಕ ಅಂತರದ ಜೊತೆ ಇನ್ನಿತರ ಷರತ್ತುಗಳನ್ನು ವಿಧಿಸಿ ಧಾರಾವಾಹಿಗಳ ಚಿತ್ರೀಕರಣ ಮಾಡುವಂತೆ ಸರ್ಕಾರ ಅನುಮತಿ ನೀಡಿದೆ.

ಇಂದಿನಿಂದ ಧಾರಾವಾಹಿಗಳ ಚಿತ್ರೀಕರಣ ಪುನಾರಂಭ
ಇಂದಿನಿಂದ ಧಾರಾವಾಹಿಗಳ ಚಿತ್ರೀಕರಣ ಪುನಾರಂಭ

ಜೂನ್ 1 ರಿಂದ ಧಾರಾವಾಹಿಗಳ ಫ್ರೆಷ್ ಎಪಿಸೋಡ್​​ಗಳು ಎಂದಿನಿಂತೆ ಪ್ರಸಾರವಾಗಲಿದ್ದು ಧಾರಾವಾಹಿಪ್ರಿಯರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಜೊತೆ ಜೊತೆಯಲಿ, ಗಟ್ಟಿಮೇಳ, ಪಾರು, ಬ್ರಹ್ಮಗಂಟು, ಸೇರಿದಂತೆ ಹಲವು ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ಈ ಧಾರಾವಾಹಿಗಳು ಜೂನ್​ 1 ರಿಂದ ಪ್ರಸಾರ ಆರಂಭಿಸಲಿದೆ. ಇನ್ನು ಜೂನ್ 1ರಿಂದ ಪ್ರಸಾರವಾಗಲಿರುವ ಧಾರಾವಾಹಿಗಳ ಪ್ರಸಾರದ ಸಮಯದಲ್ಲಿ ಕೆಲವು ಬದಲಾವಣೆಗಳಾಗಿವೆ.

ಇಂದಿನಿಂದ ಧಾರಾವಾಹಿಗಳ ಚಿತ್ರೀಕರಣ ಪುನಾರಂಭ
ಇಂದಿನಿಂದ ಧಾರಾವಾಹಿಗಳ ಚಿತ್ರೀಕರಣ ಪುನಾರಂಭ

ರಾಧಾ ಕಲ್ಯಾಣ ಮತ್ತು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಗಳು ಇನ್ಮುಂದೆ ಪ್ರಸಾರವಾಗುವುದಿಲ್ಲ. ಈ ಧಾರಾವಾಹಿಗಳನ್ನು ಹೊರತುಪಡಿಸಿ ಪ್ರತಿದಿನ ಸಂಜೆ ಮಾಲ್ಗುಡಿ ಡೇಸ್ 6.30ಕ್ಕೆ , ಕಮಲಿ 7 ಗಂಟೆಗೆ , ಪಾರು ರಾತ್ರಿ 7.30ಕ್ಕೆ, ಗಟ್ಟಿಮೇಳ ರಾತ್ರಿ 8.00ಕ್ಕೆ , ಜೊತೆ ಜೊತೆಯಲಿ ರಾತ್ರಿ 8.30 , ನಾಗಿಣಿ-2 ರಾತ್ರಿ 9.00ಕ್ಕೆ , ಯಾರೇ ನೀ ಮೋಹಿನಿ ರಾತ್ರಿ 9.30ಕ್ಕೆ ಹಾಗೂ10 ಗಂಟೆಗೆ ಬ್ರಹ್ಮಗಂಟು ಧಾರಾವಾಹಿಗಳು ಪ್ರಸಾರವಾಗಲಿವೆ.

ಇಂದಿನಿಂದ ಧಾರಾವಾಹಿಗಳ ಚಿತ್ರೀಕರಣ ಪುನಾರಂಭ
ಇಂದಿನಿಂದ ಧಾರಾವಾಹಿಗಳ ಚಿತ್ರೀಕರಣ ಪುನಾರಂಭ
Last Updated : May 27, 2020, 10:58 AM IST

ABOUT THE AUTHOR

...view details