ಕರ್ನಾಟಕ

karnataka

ರಿಯಲ್ ಲೈಫ್​ನಲ್ಲೂ ಒಂದಾದ ಸೀರಿಯಲ್​ ಜೋಡಿ: ನಿಶ್ಚಿತಾರ್ಥದ ವಿಡಿಯೋ ಶೇರ್​ ಮಾಡಿದ ಕವಿತಾ ಗೌಡ

ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ನಿಶ್ಚಿತಾರ್ಥ ನೆರವೇರಿದೆ. ಈ ವಿಡಿಯೋವನ್ನು ಕವಿತಾಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

By

Published : Apr 2, 2021, 2:29 AM IST

Published : Apr 2, 2021, 2:29 AM IST

Updated : Apr 2, 2021, 5:19 AM IST

chandan-kumar-and-kavitha-gowda-got-engaged
ರಿಯಲ್ ಲೈಫ್​ನಲ್ಲೂ ಒಂದಾದ ಸೀರಿಯಲ್​ ಜೋಡಿ

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ನಿಶ್ಚಿತಾರ್ಥ ನೆರವೇರಿದ್ದು, ರೀಲ್​ನಲ್ಲಿ ಜೋಡಿಯಾಗಿದ್ದವರು ಇದೀಗ ರಿಯಲ್ ಆಗಿ ಒಂದಾಗಿದ್ದಾರೆ.

ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ನಿಶ್ಚಿತಾರ್ಥ

ಗುರು ಹಿರಿಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಚಂದನ್ ಹಾಗೂ ಕವಿತಾ ಅವರ ವಿವಾಹ ನಿಶ್ಚಿತಾರ್ಥ ನೆರವೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಮೇ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಚಂದನ್ ಹೇಳಿದ್ದಾರೆ.

ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ನಿಶ್ಚಿತಾರ್ಥ

ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಬಿಗ್​ಬಾಸ್​ ರಿಯಾಲಿಟಿ ಶೋನಲ್ಲೂ ಕೂಡ ಭಾಗವಹಿಸಿದ್ದರು. ಇತ್ತೀಚೆಗೆ ಧಾರಾವಾಹಿಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಕವಿತಾ ಗೌಡ ಸಿನಿಮಾಗಳತ್ತ ಮುಖಮಾಡಿದ್ದಾರೆ. ಚಂದನ್ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆದರೆ ಮದುವೆ ಕಾರಣದಿಂದಾಗಿ ಧಾರಾವಾಹಿಗೆ ಗುಡ್ ಬೈ ಹೇಳಿದ್ದಾರೆ.

ನಿಶ್ಚಿತಾರ್ಥ ಸಮಾರಂಭಕ್ಕೆ ಕೆಲವೇ ಕೆಲವು ಮಂದಿ ಆಗಮಿಸಿದ್ದರು. ಮಾಜಿ ಬಿಗ್ ಬಾಸ್ ಸ್ಪರ್ಧಿ ಧನರಾಜ್ ಹಾಗೂ ಕುಟುಂಬ, ನಟಿ ತೇಜಸ್ವಿನಿ, ನಟಿ ಅರ್ಚನಾ ಶರ್ಮಾ ಸೇರಿದಂತೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ನಟ-ನಟಿಯರು ಭಾಗವಹಿಸಿದ್ದರು. ನಿಶ್ಚಿತಾರ್ಥದ ವಿಡಿಯೋವನ್ನು ಕವಿತಾಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ನಿಶ್ಚಿತಾರ್ಥ
Last Updated : Apr 2, 2021, 5:19 AM IST

ABOUT THE AUTHOR

...view details