ಕರ್ನಾಟಕ

karnataka

ETV Bharat / sitara

ಕಿರುತೆರೆಯಲ್ಲಿ ಬ್ಯುಸಿಯಾದ ನಟಿ ಸಾಯಿ ಶ್ರೇಯ

'ಹೆಳವನಕಟ್ಟೆ ಗಿರಿಯಮ್ಮ' ಧಾರಾವಾಹಿಯಲ್ಲಿ ಗಿರಿಯಮ್ಮ ಎಂಬ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಶ್ರೇಯ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದರು.

By

Published : Apr 18, 2021, 3:44 PM IST

Actor sai
Actor sai

ಬೆಂಗಳೂರು: ಶಶಿಕುಮಾರ್ ಅಭಿನಯದ 'ರೀ ಸ್ವಲ್ಪ ಬರ್ತಿರಾ' ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಾಯಿ ಶ್ರೇಯ ಸದ್ಯ ಕಿರುತೆರೆಯಲ್ಲಿ ಬ್ಯುಸಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಇಂತಿ ನಿಮ್ಮ ಆಶಾ' ಧಾರಾವಾಹಿಯಲ್ಲಿ ನಾಯಕಿ ಆಶಾಳ ಮಗಳು ನಿಖಿತಾಳಾಗಿ ನಟಿಸುತ್ತಿರುವ ಶ್ರೇಯ 'ಜಗಳಗಂಟಿಯರು' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು.

ಮುಂದೆ ಮೆಗಾ ಧಾರಾವಾಹಿ 'ಬದುಕು'ವಿನಲ್ಲಿ ಬಣ್ಣ ಹಚ್ಚಿದ್ದ ಈ ನಟಿಗೆ ಜನಪ್ರಿಯತೆ ದೊರಕಿದ್ದು 'ಹೆಳವನಕಟ್ಟೆ ಗಿರಿಯಮ್ಮ' ಧಾರಾವಾಹಿಯ ‌ಮೂಲಕ.

ಹೆಳವನಕಟ್ಟೆ ಗಿರಿಯಮ್ಮ ಧಾರಾವಾಹಿಯಲ್ಲಿ ಗಿರಿಯಮ್ಮ ಎಂಬ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದ ಶ್ರೇಯ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದರು. ಬಳಿಕ 'ಚಿ.ಸೌ.ಸಾವಿತ್ರಿ' ಧಾರಾವಾಹಿಯಲ್ಲಿ ಸಾವಿತ್ರಿ ತಂಗಿಯಾಗಿ ನಟಿಸಿದ್ದ ಈಕೆ ಕೋಗಿಲೆ, ಗೃಹಲಕ್ಷ್ಮಿ ಸೇರಿದಂತೆ ಒಂದಷ್ಟು ಮೆಗಾ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಮನೋಜ್ಞ ನಟನೆಯ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಸಾಯಿ ಶ್ರೇಯ ತೆಲುಗು ಕಿರುತೆರೆಗೂ ಕಾಲಿಟ್ಟಾಗಿದೆ.

ತೆಲುಗಿನ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲೂ ಮಿಂಚಿದ್ದ ಶ್ರೇಯ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಬಿಕಾಂ ಪದವಿ ಪಡೆದಿರುವ ಶ್ರೇಯ ಮತ್ತೆ ನಟನೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸಿದ್ದಾರೆ.

ABOUT THE AUTHOR

...view details