ಕರ್ನಾಟಕ

karnataka

ಬೇಬಿ ಬಂಪ್​​ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ದಿಶಾ ಮದನ್​​ - ವಿಡಿಯೋ ವೈರಲ್​

ದಿಶಾ ಮದನ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತುಂಬು ಗರ್ಭಿಣಿಯಾಗಿರುವ ಅವರು ಫೋಟೋ ಶೂಟ್ ಮಾಡಿಸಿದ್ದು, ವಿಡಿಯೋ ಮತ್ತು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ..

By

Published : Jan 29, 2022, 5:37 PM IST

Published : Jan 29, 2022, 5:37 PM IST

Actress Disha Madan Baby Bump Photoshoot video Viral
ನಟಿ ದಿಶಾ ಮದನ್​​ ಬೇಬಿ ಬಂಪ್​​ ಫೋಟೋಶೂಟ್ ವಿಡಿಯೋ

ಕಿರುತೆರೆ ನಟಿ, ಫ್ರೆಂಚ್ ಬಿರಿಯಾನಿ ಸುಂದರಿ ದಿಶಾ ಮದನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅವರು ಬೇಬಿ ಬಂಪ್ ಫೋಟೊ ಶೂಟ್‌ ಮಾಡಿಸಿದ್ದು, ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ.

ಸದ್ಯಕ್ಕೆ ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್ ವೆಬ್​​​​​ ಸೀರಿಸ್​​​​ನಲ್ಲಿ ಅಭಿನಯಿಸಿರೋ ದಿಶಾ ಮದನ್, ತಮ್ಮ ಎರಡನೇ ಮಗು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೇಬಿ ಬಂಪ್​​ ಫೋಟೋಸ್​​ನಲ್ಲಿ ಸಖತ್​ ಬೋಲ್ಡ್​​ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ದಿಶಾ ಮದನ್​​ ಬೇಬಿ ಬಂಪ್​​ ಫೋಟೋಶೂಟ್ ವಿಡಿಯೋ

'ಮಾರ್ಚ್ 2022ಕ್ಕೆ ಕಾಯುತ್ತಿರುವೆ. ನಾವು ಮೂರು ಜನ ಇದ್ವಿ, ಸದ್ಯದಲ್ಲೇ ನಾವು ನಾಲ್ಕು ಜನ ಆಗುತ್ತಿದ್ದೇವೆ. 2022ರಲ್ಲಿ ನನ್ನ ಮೊದಲ ಮಗ ಅಣ್ಣನಾಗುತ್ತಾನೆ 'ಎಂದು ಸೋಶಿಯಲ್ ಮೀಡಿಯಾದಲ್ಲಿ ದಿಶಾ ಮದನ್ ಬರೆದುಕೊಂಡಿಕೊಂಡಿದ್ದಾರೆ.

ಇದನ್ನೂ ಓದಿ: ಫೋರ್ ವಾಲ್ಸ್ ಚಿತ್ರದ ಪ್ರೀತಿ ನಿವೇದನೆ ಹಾಡಿನಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್!

2017ರಲ್ಲಿ ವಾಸುಕಿ ಗೋಪಾಲ್ ಜೊತೆ ದಿಶಾ ಮದನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2019ರಲ್ಲಿ ಪುತ್ರ ವಿಹಾನ್‍ ಜನಿಸಿದ್ದಾನೆ. 2020ರಲ್ಲಿ ಹೊಸ ಮನೆ ಖರೀದಿಸಿ ಗೃಹಪ್ರವೇಶ ಮಾಡಿದ್ದಾರೆ. ಇದೀಗ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ದಿಶಾ ಮದನ್ ಎರಡನೇ ಮಗುವಿನ ಬೇಬಿ ಬಂಪ್ ಫೋಟೋಶೂಟ್ ಹೆಚ್ಚು ಗಮನ ಸೆಳೆಯುತ್ತಿದೆ.

ಇಲ್ಲೊಮ್ಮೆ ನೋಡಿ: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details