ಕರ್ನಾಟಕ

karnataka

ETV Bharat / sitara

'ವೀಕೆಂಡ್ ವಿಥ್ ರಮೇಶ್' ಈ ವಾರದ ಸಾಧಕನ ಹೆಸರು ರಿವೀಲ್ !

'ವೀಕೆಂಡ್ ವಿಥ್ ರಮೇಶ್'​ ಕಾರ್ಯಕ್ರಮದ ಎರಡನೇ ವಾರದ ಸಾಧಕ ಯಾರು ಎಂಬುದು ರಿವೀಲ್ ಆಗಿದೆ. ಚಂದನವನದ ನಟ ರಾಘವೇಂದ್ರ ರಾಜಕುಮಾರ್ ಈ ವಾರ ಸಾಧಕರ ಸೀಟಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

By

Published : Apr 24, 2019, 9:17 AM IST

ವೀಕೆಂಡ್ ವಿಥ್ ರಮೇಶ್

'ವೀಕೆಂಡ್ ವಿಥ್ ರಮೇಶ್' ಈ ವಾರದ ಅತಿಥಿಯಾಗಿ ಯಾರು ಬರಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ ಬಿದ್ದಿದೆ. ದೊಡ್ಮನೆ ಮಗ ರಾಘವೇಂದ್ರ ರಾಜ್ ಕುಮಾರ್ ಈ ಶನಿವಾರ ಸಾಧಕರ ಸೀಟ್​ನಲ್ಲಿ ಕುಳಿತುಕೊಳ್ಳಲಿದ್ದಾರೆ.

ನಟ ರಾಘವೇಂದ್ರ ರಾಜಕುಮಾರ್

ಈಗಾಗಲೇ ರಾಜ್​ ಕುಟುಂಬದಿಂದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಶಿವಣ್ಣ ಹಾಗೂ ಅಪ್ಪು ಅತಿಥಿಗಳಾಗಿ ಬಂದಿದ್ದಾರೆ. ಇದೀಗ ರಾಘಣ್ಣನ ಸರದಿ. ನಟ ರಮೇಶ್ ಅರವಿಂದ್ ಅವರ ನಿರೂಪಣೆಯ ಈ ಕಾರ್ಯಕ್ರಮದಲ್ಲಿ ರಾಘಣ್ಣ, ತಮ್ಮ ಜೀವನದ ಸಂತೋಷ ಹಾಗೂ ದುಃಖದ ಕ್ಷಣಗಳನ್ನು ಎಲ್ಲರೆದುರು ತೆರೆದಿಡಲಿದ್ದಾರೆ. ತಮ್ಮ ಬಾಲ್ಯ, ತಂದೆಯೊಂದಿಗಿನ ಒಡನಾಟ, ಅಣ್ಣ ತಮ್ಮಂದಿರ ಸಂಬಂಧ, ಹೆಂಡತಿ ಪ್ರೀತಿ, ತಾಯಿ ಮಮತೆ, ಮಕ್ಕಳು, ಸಂಬಂಧಿಕರು, ಸ್ನೇಹಿತರ ಬಗ್ಗೆ ರಾಘಣ್ಣ ನೆನಪಿನ ಬುತ್ತಿ ಬಿಚ್ಚಿಡಲಿದ್ದಾರೆ.

ವೀಕೆಂಡ್ ವಿಥ್ ರಮೇಶ್

ಅನಾರೋಗ್ಯದ ಸಂದರ್ಭದಲ್ಲಿ ತಮಗೆ ಮರುಜನ್ಮ ನೀಡಿದ ವೈದ್ಯರಿಗೆ ಕಾಲಿಗೆ ಬಿದ್ದು ನಮಸ್ಕರಿಸುವಂತಹ ಕ್ಷಣ, ಅಣ್ಣ ಶಿವಣ್ಣ ಒಂದು ತಿಂಗಳ ಕಾಲ ಮಗುವಿನಂತೆ ನೋಡಿಕೊಂಡಿದ್ದು ಹೀಗೆ.. ಹತ್ತು ಹಲವು ವಿಷಯಗಳು ಈ ವಾರ ವೀಕೆಂಡ್ ಟೆಂಟ್​ನಲ್ಲಿ ಹೊರ ಬರಲಿವೆ.

ವೀಕೆಂಡ್ ವಿಥ್ ರಮೇಶ್

ಈಗಾಗಲೇ ಈ ಎಪಿಸೋಡ್​ ಚಿತ್ರೀಕರಣ ಮುಗಿದಿದ್ದು,ಇವೆಲ್ಲವೂ ಶನಿವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ವೀಕೆಂಡ್ ವಿಥ್ ರಮೇಶ್

For All Latest Updates

TAGGED:

ABOUT THE AUTHOR

...view details