ಕರ್ನಾಟಕ

karnataka

ETV Bharat / sitara

ಏಪ್ರಿಲ್​ನಲ್ಲಿ ತೆರೆ ಕಾಣಬೇಕಿದ್ದ ‘ಹಿಟ್ಲರ್ ಕಲ್ಯಾಣ’ಕ್ಕೆ ಕೊರೊನಾ ಅಡ್ಡಿ - ಹಿಟ್ಲರ್ ಗಾರಿ ಪೆಲ್ಲಂ

ಏಪ್ರಿಲ್​​ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ 'ಹಿಟ್ಲರ್​ ಕಲ್ಯಾಣ' ಧಾರಾವಾಹಿಗೆ ಲಾಕ್​ಡೌನ್​ ಅಡ್ಡಿ ಬಂದಿದ್ದು, ಪ್ರಸಾರದ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ತ್ರಿಶೂಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಹಿಟ್ಲರ್​ ಕಲ್ಯಾಣ'ದಲ್ಲಿ ಮುಖ್ಯ ಪಾತ್ರದಲ್ಲಿ ನಟ ದಿಲೀಪ್ ರಾಜ್ ಮತ್ತು ಹೊಸ ಪ್ರತಿಭೆ ಮಲೈಕಾ ಟಿ. ವಾಸುಪಾಲ್ ನಟಿಸಿದ್ದಾರೆ.

zee-kannada-hitler-kalyana-serial-release-date-postponed
ಹಿಟ್ಲರ್ ಕಲ್ಯಾಣ

By

Published : Jun 10, 2021, 1:47 PM IST

ಕೊರೊನಾದಿಂದಾಗಿ ಇಡಿ ಚಿತ್ರರಂಗ ಸ್ತಬ್ಧವಾಗಿದೆ. ತೆರೆಕಾಣಬೇಕಿದ್ದ ಅದೆಷ್ಟೊ ಧಾರಾವಾಹಿಗಳು ತೆರೆ ಹಿಂದೆಯೇ ಮರೆಯಾಗುತ್ತಿವೆ. ಏಪ್ರಿಲ್​​ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ 'ಹಿಟ್ಲರ್​ ಕಲ್ಯಾಣ' ಧಾರಾವಾಹಿಗೆ ಲಾಕ್​ಡೌನ್​ ಅಡ್ಡಿ ಬಂದಿದ್ದು, ಪ್ರಸಾರದ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ತ್ರಿಶೂಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಹಿಟ್ಲರ್​ ಕಲ್ಯಾಣ'ದಲ್ಲಿ ಮುಖ್ಯ ಪಾತ್ರದಲ್ಲಿ ನಟ ದಿಲೀಪ್ ರಾಜ್ ಮತ್ತು ಹೊಸ ಪ್ರತಿಭೆ ಮಲೈಕಾ ಟಿ. ವಾಸುಪಾಲ್ ನಟಿಸಿದ್ದಾರೆ. ಈಗಾಗಾಲೇ ಪ್ರೋಮೋ ಮತ್ತು ಕೆಲವು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ.

ಹಿಟ್ಲರ್ ಕಲ್ಯಾಣದಲ್ಲಿ ನಟ ದಿಲೀಪ್ ರಾಜ್

ಪ್ರಸ್ತುತ ಪರಿಸ್ಥಿತಿಯಿಂದಾಗಿ, ಧಾರಾವಾಹಿಯ ಪ್ರಸಾರ ದಿನಾಂಕ ಮತ್ತು ಸಮಯ ನಿಗದಿಪಡಿಸಿಲ್ಲ. ಈ ತಿಂಗಳು ಸರ್ಕಾರ ಅನುಮತಿ ನೀಡಿದರೆ, ಧಾರಾವಾಹಿ ಪ್ರದರ್ಶನಕ್ಕೆ ಮುಂಚಿತವಾಗಿ ಉಳಿದ ಕಂತುಗಳನ್ನು ಚಿತ್ರೀಕರಿಸಲು ತಯಾರಕರು ಉತ್ಸುಕರಾಗಿದ್ದಾರೆ. ದೀರ್ಘ ವಿರಾಮದ ನಂತರ ದಿಲೀಪ್ ರಾಜ್ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಏಪ್ರಿಲ್​ನಲ್ಲಿ ತೆಗೆಕಾಣಬೇಕಿದ್ದ ‘ಹಿಟ್ಲರ್ ಕಲ್ಯಾಣ’ಕ್ಕೆ ಕೊರೊನಾ ಅಡ್ಡಿ

ಬಾಣಸಿಗ ಶ್ರೀಮಂತನಾಗಿ ಜನಪ್ರಿಯ ಹೋಟೆಲಿಯರ್ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. ಇದರಿಂದ ಹೋಟೆಲ್ ವ್ಯವಹಾರದ ಪ್ರತಿಯೊಂದು ಸೂಕ್ಷ್ಮ ವ್ಯತ್ಯಾಸ ಅವನಿಗೆ ಅರ್ಥವಾಗುವಂತೆ ಮಾಡುತ್ತದೆ. ಅವನು ಟಾಸ್ಕ್ ಮಾಸ್ಟರ್ ಆಗಿದ್ದು, ತಮ್ಮ ಆಶಯಕ್ಕೆ ಅನುಗುಣವಾಗಿ ನಡೆಯಬೇಕೆಂದು ಬಯಸುತ್ತಾನೆ ಮತ್ತು ಮನೆಯಲ್ಲಿಯೂ ಅಶಿಸ್ತನ್ನು ಎಂದಿಗೂ ಸಹಿಸುವುದಿಲ್ಲ, ಇದು ಬಿಸಿ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಧಾರಾವಾಹಿ ನಿರ್ಮಾಪಕರೂ ಆಗಿರುವ ದಿಲೀಪ್ ರಾಜ್ ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಕುರಿತು ಮಾಹಿತಿ ಹೇಳಿದ್ದಾರೆ.

ತೆಲುಗಿನ 'ಹಿಟ್ಲರ್ ಗಾರಿ ಪೆಲ್ಲಂ' ರಿಮೇಕ್ ಆಗಿರುವ ಈ ಧಾರಾವಾಹಿಯಲ್ಲಿ ನೇಹಾ ಪಾಟೀಲ್, ಅಭಿನಯ, ರವಿ ಭಟ್ ಮತ್ತು ವಿದ್ಯಾ ಮೂರ್ತಿ ಕೂಡ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details