ಕರ್ನಾಟಕ

karnataka

ದಯಮಾಡಿ ನನ್ನ ಎಲ್ಲಾ ಫೋಟೋಗಳನ್ನು ಡಿಲೀಟ್​​ ಮಾಡಿ ಎಂದ ದಂಗಲ್‌ ನಟಿ

ಜೀವನದ ಹೊಸ ಪಯಣ ಆರಂಭಿಸುತ್ತಿದ್ದೇನೆ. ಆದ್ದರಿಂದ ನಾನು ನಿಮ್ಮ ಬಳಿ ಫೋಟೋಗಳನ್ನು ಡಿಲೀಟ್​​ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ..

By

Published : Nov 22, 2020, 4:00 PM IST

Published : Nov 22, 2020, 4:00 PM IST

Zaira Wasim Appeals Fans To Delete Her Photos
ದಯಮಾಡಿ ನನ್ನ ಎಲ್ಲಾ ಫೋಟೋಗಳನ್ನು ಡಿಲೀಟ್​​ ಮಾಡಿ ಎಂದ ನಟಿ

ಬಾಲಿವುಡ್​ನಲ್ಲಿ ಬಿಗ್​ ಹಿಟ್​​ ನೀಡಿದ ಸಿನಿಮಾಗಳ ಪೈಕಿ ಅಮಿರ್​​​​ ಖಾನ್​ ನಟನೆಯ 'ದಂಗಲ್' ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ಅಮಿರ್​ ಖಾನ್​ ಪುತ್ರಿಯಾಗಿ ನಟಿಸಿದ್ದ ಝೈರಾ ವಾಸಿಂ ಕೂಡ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದರು. ಆದ್ರೆ, ಇದೀಗ ಅಭಿಮಾನಿಗಳಲ್ಲಿ ಈ ನಟಿ ಮನವಿಯೊಂದನ್ನು ಮಾಡಿದ್ದಾರೆ.

ಆಕ್ರಮಿತ ಕಾಶ್ಮೀರದಲ್ಲಿರುವ ಝೈರಾ ವಾಸಿಂ ಕಳೆದ ವರ್ಷ ಬಾಲಿವುಡ್​​ ಚಿತ್ರರಂಗಕ್ಕೆ ಗುಡ್​ ಬೈ ಹೇಳಿದ್ರು. ಇಸ್ಲಾಮಿಕ್ ಬೋಧನೆಗಳನ್ನು ಅನುಸರಿಸಿದ್ದಕ್ಕಾಗಿ ಕಳೆದ ವರ್ಷ ಝೈರಾ ಈ ನಿರ್ಧಾರಕ್ಕೆ ಬಂದಿದ್ದರು.

ಇದೀಗ ಝೈರಾ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ದಯಮಾಡಿ ಇಂಟರ್​ನೆಟ್​​ ಮತ್ತು ಫ್ಯಾನ್​ ಪೇಜ್​ಗಳಿಂದ ನನ್ನ ಫೋಟೋಗಳನ್ನು ತೆಗೆದು ಹಾಕಿ. ಇಂಟರ್​​ನೆಟ್​​ನಿಂದ ತೆಗೆಯಲು ಕಷ್ಟವಾದರೆ, ಫ್ಯಾನ್​ ಪೇಜ್​​ನಿಂದನಾದ್ರೂ ಡಿಲೀಟ್​ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಮೆಸೇಜ್​ ಮಾಡಿದ್ದ ಝೈರಾ ಇದೀಗ ಮತ್ತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ತಮ್ಮ ಜೀವನದ ಹೊಸ ಪಯಣ ಆರಂಭಿಸುತ್ತಿದ್ದೇನೆ. ಆದ್ದರಿಂದ ನಾನು ನಿಮ್ಮ ಬಳಿ ಫೋಟೋಗಳನ್ನು ಡಿಲೀಟ್​​ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ABOUT THE AUTHOR

...view details