ಗಂಗಾವತಿ: ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಹಾವಳಿ ಮತ್ತು ಪ್ರಕೃತಿ ವಿಕೋಪದಲ್ಲಿ ಸಿಲುಕಿರುವ ಸಂತ್ರಸ್ತರ ನೆರವಿಗೆ ನಾವಿದ್ದೇವೆ. ಆದರೆ, ಲಾಕ್ಡೌನ್ ಬಳಿಕ ಕಂಗೆಟ್ಟಿರುವ ಚಂದನವನದ ನೆರವಿಗೆ ರಾಜ್ಯದ ಜನ ಬರಬೇಕು ಎಂದು ನಟ ಹಾಗೂ ನಿರ್ಮಾಪಕ ಪುನೀತ್ ರಾಜ್ಕುಮಾರ್ ಮನವಿ ಮಾಡಿದರು.
ಸಂತ್ರಸ್ತರ ನೆರವಿಗೆ ನಾವಿದ್ದೇವೆ, ನಮ್ಮ ನೆರವಿಗೆ ನೀವೂ ಬನ್ನಿ: ಪುನೀತ್ ರಾಜ್ಕುಮಾರ್ - james movie shooting
ಈಗಾಗೆಲೇ ಸಿನಿಮಾ ರಂಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಲಾಕ್ಡೌನ್ ಬಳಿಕ ಈಗಷ್ಟೇ ಸಿನಿಮಾ ರಂಗದ ಚಟುವಟಿಕೆಗಳು ನಡೆಯುತ್ತಿವೆ. ಸುಧೀರ್ಘ 7 ತಿಂಗಳ ಕಾಲ ಎಲ್ಲವೂ ಬಂದ್ ಆಗಿತ್ತು. ಕಲಾವಿದರನ್ನು ಪ್ರೋತ್ಸಾಹಿಸಲು ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ನೋಡಿ ನಮ್ಮ ನೆರವಿಗೆ ನಿಲ್ಲಿ ಎಂದು ನಟ ಪುನೀತ್ ರಾಜ್ಕುಮಾರ್ ಮನವಿ ಮಾಡಿದರು.
ತಾಲೂಕಿನ ಮಲ್ಲಾಪುರದ ಬಳಿ ನಡೆಯುತ್ತಿರುವ 'ಜೆಮ್ಸ್' ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಈಗಾಗಲೇ ಸಿನಿಮಾ ರಂಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಲಾಕ್ಡೌನ್ ಬಳಿಕ ಈಗಷ್ಟೇ ಸಿನಿಮಾ ರಂಗದ ಚಟುವಟಿಕೆಗಳು ನಡೆಯುತ್ತಿವೆ. ಸುಧೀರ್ಘ 7 ತಿಂಗಳ ಕಾಲ ಎಲ್ಲವೂ ಬಂದ್ ಆಗಿತ್ತು. ಕಲಾವಿದರನ್ನು ಪ್ರೋತ್ಸಾಹಿಸಲು ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ನೋಡಿ ನಮ್ಮ ನೆರವಿಗೆ ನಿಲ್ಲಿ ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕದಲ್ಲಿನ ಪ್ರವಾಹ, ನೆರೆ ಸಂಕಷ್ಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಕೃತಿಯ ಮುಂದೆ ನಾವೆಲ್ಲ ಸಣ್ಣವರು. ನಿಸರ್ಗದ ನಿಯಮವನ್ನು ನಾವು ಪಾಲನೆ ಮಾಡಬೇಕು. ಸಂಕಷ್ಟದ ತೀವ್ರತೆ ಕಂಡು ಬಂದರೆ ನಾನು ವೈಯಕ್ತಿಕವಾಗಿ ಮತ್ತು ಇಡೀ ಚಿತ್ರ ತಂಡ, ಸಂತ್ರಸ್ತರ ನೆರವಿಗೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು.