ದೊಡ್ಮನೆ "ಯುವರಾಜ" ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ಸದ್ಯ "ಗ್ರಾಮಾಯಣ" ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವಿನಯ್ ರಾಜ್‌ಕುಮಾರ್ ಬಾಕ್ಸರ್ ಲುಕ್‌ನಲ್ಲಿರೋ ಪೋಸ್ಟರ್ಸ್ ಹರಿದಾಡಿತ್ತು.
ವಿನಯ್ ಬಾಕ್ಸರ್ ಪಾತ್ರದಲ್ಲಿ ಕಾಣಿಸ್ತಾರೇ ಎಂಬ ಸುದ್ದಿ ತುಂಬಾ ಸೌಂಡ್ ಮಾಡಿತ್ತು. ಅದ್ರೆ ಈಗ ಸದ್ದಿಲ್ಲದಂತೆ ವಿನಯ್ ರಾಜ್ ಕುಮಾರ್ ಬಾಕ್ಸರ್ ಆಗಿ ಕಾಣಿಸ್ತಿರುವ ಚಿತ್ರ ಭಾನುವಾರ ಸೆಟ್ಟೇರಿದೆ.
ಅಣ್ಣಾವ್ರ ಮೊಮ್ಮಗ ಬಾಕ್ಸರ್ ಗೆಟಪ್‌ನ ಪೋಸ್ಟರ್ಸ್ ಗಾಂಧಿನಗರದಲ್ಲಿ ಕುತೂಹಲ ಕೆರಳಿಸಿತ್ತು. ಈಗ ಸಿನಿ ಪಂಡಿತರ ಕುತೂಹಲ ತಣಿದಿದ್ದು, ಚಿತ್ರತಂಡ ಸೈಲೆಂಟಾಗಿ ಮುಹೂರ್ತ ಮುಗಿಸಿದೆ. ಅದ್ರೆ ಚಿತ್ರದ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಹೀಗಾಗಿ ವರ್ಕಿಂಗ್ ಟೈಟಲ್ ಆಗಿ ಟನ್ ಅಂತ ಇಟ್ಟು ಚಿತ್ರದ ಮುಹೂರ್ತ ಮುಗಿಸಿದ್ದಾರೆ.
ಇನ್ನು ಈ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ರು. ಅಲ್ಲದೆ ರಕ್ಷಿತ್ ಶೆಟ್ಟಿ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ರು. ಉಳಿದಂತೆ ವಿನಯ್ ರಾಜ್ ಕುಮಾರ್ಗೆ ನಾಯಕಿಯಾಗಿ ಅನುಷಾ ರಂಗನಾಥ್ ಬಣ್ಣ ಹಚ್ಚಲಿದ್ದು, ಚಿತ್ರದಲ್ಲಿ ಪಕ್ಕಾ ಸಂಪ್ರದಾಯಸ್ಥ ಹುಡುಗಿಯಾಗಿ ಅನುಷಾ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡ್ತಿದ್ದು, ಕಿರಿಕ್ ಪಾರ್ಟಿ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಸಹನಿರ್ದೆಶಕನಾಗಿ ಕೆಲಸ ಮಾಡಿರುವ ಕರಮ ಚಾವ್ಲ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ.