ಕನ್ನಡ ಚಿತ್ರರಂಗ ಹಾಗೂ ತಮಿಳು ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಅರ್ಜುನ್ ಸರ್ಜಾ. ಆಂಜನೇಯ ಮಹಾನ್ ಭಕ್ತನಾಗಿರುವ ಅವರು ಕೊನೆಗೂ ತಾವು ಕಂಡಿದ್ದ ಕನಸು ಈಡೇರಿಸಿಕೊಂಡಿದ್ದಾರೆ.
ವಿನಯ್ ಗುರೂಜಿಯಿಂದ ಧ್ರುವ ಸರ್ಜಾಗೆ ಉಡುಗೊರೆ... ಆ್ಯಕ್ಷನ್ ಪ್ರಿನ್ಸ್ ಫುಲ್ ಖುಷ್ - ವಿನಯ್ ಗೂರುಜಿ
ಚೊಚ್ಚಲ ಭೇಟಿಯಲ್ಲೇ ಧ್ರುವ ಅವರಿಗೆ ವಿನಯ್ ಗುರೂಜಿ ಹನುಮನ ವಿಗ್ರಹವನ್ನು ನೀಡಿದ್ದಾರೆ.
ಹೌದು.. ಸರ್ಜಾ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದವರು ಭಾಗಿಯಾಗಿದ್ದರು. ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಕೂಡ ಭಾಗಿಯಾಗಿದ್ದಾರೆ. ಆಂಜನೇಯ ಸ್ವಾಮಿ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಅವದೂತ ಸ್ವಾಮೀಜಿ ವಿನಯ್ ಗುರೂಜಿ ಕೂಡ ಭಾಗಿಯಾಗಿ ಶುಭಾ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಅವದೂತ ವಿನಯ್ ಗುರೂಜಿಯನ್ನ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಭೇಟಿ ಮಾಡಿ ಆರ್ಶೀವಾದ ಪಡೆದಿದ್ದಾರೆ. ಅಲ್ಲದೆ ಅರ್ಧ ಗಂಟೆಗೂ ಹೆಚ್ಚು ಕಾಲ ಗುರೂಜಿ ಜೊತೆ ಧ್ರುವ ಸರ್ಜಾ ಮಾತುಕತೆ ನಡೆಸಿದರು. ಚೊಚ್ಚಲ ಭೇಟಿಯಲ್ಲೇ ಧ್ರುವ ಅವರಿಗೆ ವಿನಯ್ ಗುರೂಜಿ ಹನುಮನ ವಿಗ್ರಹ ನೀಡಿದ್ದಾರೆ. ಪವನ ಪುತ್ರ ಹನುಮಂತನ ಭಕ್ತನಾಗಿರುವ ಧ್ರುವ ಸರ್ಜಾಗೆ ಆಂಜನೇಯ ವಿಗ್ರಹ ಸಿಕ್ಕಿರುವುದು ಸಂತೋಷವಾಗಿದೆಯಂತೆ.