ಕರ್ನಾಟಕ

karnataka

ETV Bharat / sitara

'ತ್ರಿವಿಕ್ರಮ' ರಿಲೀಸ್​ಗೂ ಮುನ್ನ ಎರಡನೇ ಚಿತ್ರಕ್ಕೆ ಸೈ ಎಂದ ಕ್ರೇಜಿಸ್ಟಾರ್​ ಪುತ್ರ - Ravichandran son new movie

ಕ್ರೆಜಿಸ್ಟಾರ್​​ ಪುತ್ರ ವಿಕ್ರಂ ಅವರು ತಮ್ಮ ಮೊದಲ ಸಿನಿಮಾ 'ತ್ರಿವಿಕ್ರಮ' ರಿಲೀಸ್​​ಗೂ ಮುನ್ನ ಸ್ಯಾಂಡಲ್​​ವುಡ್​​ನಲ್ಲಿ ಬ್ಯುಸಿಯಾಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಸದ್ಯ ಹೆಸರಿಡದ ಚಿತ್ರಕ್ಕೆ ಕಾಲ್​ಶೀಟ್​​ ನೀಡಿದ್ದಾರೆ.

vikarm-ravichadharn-new-movie-announced
ವಿಕ್ರಂ ರವಿಚಂದ್ರನ್

By

Published : Aug 24, 2020, 4:03 PM IST

ತ್ರಿವಿಕ್ರಮ ಪೋಸ್ಟರ್​​ ಹಾಗೂ ಟೀಸರ್​​ನಿಂದಲೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ನಟ ವಿಕ್ರಂ ರವಿಚಂದ್ರನ್, ತಮ್ಮ ಮೊದಲ ಸಿನಿಮಾ ರಿಲೀಸ್​​ಗೂ ಮುನ್ನವೇ ಮತ್ತೊಂದು ಹೆಸರಿಡದ ಚಿತ್ರಕ್ಕೆ ಸೈ ಎಂದಿದ್ದಾರೆ.​​

ವಿಕ್ರಂ ರವಿಚಂದ್ರನ್

ಸದ್ಯ ಶೂಟಿಂಗ್ ಮುಗಿಸಿರೋ ತ್ರಿವಿಕ್ರಮ, ರಿಲೀಸ್​ಗೆ ರೆಡಿಯಾಗುತ್ತಿದೆ. ಇದೀಗ, ಹೆಸರಿಡದ ಹೊಸ ಚಿತ್ರಕ್ಕೆ‌ ಒಪ್ಪಿಕೊಂಡಿದ್ದಾರೆ ವಿಕ್ರಂ. ಪ್ರಿಯಾಮಣಿ ಅಭಿನಯಿಸಿದ ವೈಟ್ ಎಂಬ ಕಿರು ಚಿತ್ರವನ್ನ ನಿರ್ದೇಶನ ಮಾಡಿದ್ದ ಮನುನಾಗ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ದೇಶಕ ಮನು ನಾಗ್​​

ಮಾಸ್ ಎಲಿಮೆಂಟ್ಸ್ ಹೊಂದಿರುವ ಚಿತ್ರದಲ್ಲಿ, ವಿಕ್ರಂ ರಗಡ್ ಲುಕ್​​ನಲ್ಲಿ​ ಕಾಣಿಸಿಕೊಳ್ಳಲಿದ್ದಾರಂತೆ‌. ವಿಕ್ರಂ ಮುಗ್ಧ ಅಭಿನಯ ಇಟ್ಟುಕೊಂಡು, ನಿರ್ದೇಶಕ ಮನು ನಾಗ್ ತಾಯಿ ಸೆಂಟಿಮೆಂಟ್ ಕಥೆಯನ್ನ ಹೇಳಲು ಹೊರಟ್ಟಿದ್ದಾರೆ‌.

ವಿಕ್ರಂ ರವಿಚಂದ್ರನ್ ಜೊತೆ ನಿರ್ದೇಶಕ ಮನು ನಾಗ್​​

ಚನ್ನೈ ಮೂಲದ ನಿರ್ಮಾಪಕರು ವಿಕ್ರಂ ಅಭಿನಯಸಲಿರೋ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಸದ್ಯ ನಿರ್ದೇಶಕ ಮನು ನಾಗ್, ವಿಕ್ರಂ ಜೊತೆ ಮಾತುಕತೆ ನಡೆಸಿದ್ದು, ಉಳಿದ ತಾರ ಬಳಗ ಹಾಗು ತಾಂತ್ರಿಕ ವರ್ಗದ ಆಯ್ಕೆ ಮಾಡಬೇಕಿದೆ. ಇನ್ನೂ ಹೆಸರಿಡದ ವಿಕ್ರಂ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ.

ABOUT THE AUTHOR

...view details