ಕರ್ನಾಟಕ

karnataka

ETV Bharat / sitara

ಮೇಘನಾ ರಾಜ್ ಹೊಟ್ಟೆಯಲ್ಲಿ ಪುಟ್ಟ ಚಿರಂಜೀವಿ.. ಹಿರಿಯ ನಟಿ ತಾರಾ ಭಾವೋದ್ವೇಗ..

ಮ್ಯಾಸಿವ್ ಅಟ್ಯಾಕ್ ಆಗಿ ಚಿರು ಚಿಕಿತ್ಸೆ ಫಲಿಸದೆ ನಿಧನ ಆಗಿದ್ದಾನೆ. ಚಿರು ಇನ್ನಿಲ್ಲ ಅನ್ನೋದು ನಂಬುವುದಕ್ಕೆ ಆಗ್ತಿಲ್ಲ ಅಂತ ಹಿರಿಯ ನಟಿ ತಾರಾ ಕಂಬನಿ ಮಿಡಿದಿದ್ದಾರೆ.

By

Published : Jun 7, 2020, 6:09 PM IST

Updated : Jun 7, 2020, 6:19 PM IST

Veteran actress Tara statement
ಹಿರಿಯ ನಟಿ ತಾರಾ ಕಣ್ಣೀರು..!

ಬೆಂಗಳೂರು:ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ವಿಷಯ ಕೇಳಿ ನನಗೆ ತುಂಬಾ ಶಾಕ್ ಆಗಿದೆ ಎಂದು ಹಿರಿಯ ನಟಿ ತಾರಾ ಹೇಳಿದರು. ಮಾಧ್ಯಮಗಳಲ್ಲಿ ಚಿರುಗೆ ಹೃದಯಾಘಾತ ಎಂದು ಸುದ್ದಿ ಬಂದಾಗ ಅದು ಫೇಕ್​​ ನ್ಯೂಸ್ ಅನ್ಕೊಂಡಿದ್ದೆ. ಆದರೆ, ಚಿರು ಹೃದಯಾಘಾತದಿಂದ ನಿಧನವಾಗಿದ್ದಾನೆ ಎಂದು ಭಾವುಕರಾದರು.

ಚಿರಂಜೀವಿ ನೆನೆದು ಹಿರಿಯ ನಟಿ ತಾರಾ ಕಣ್ಣೀರು..

ಚಿರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ತಾರಾ, ಆಸ್ಪತ್ರೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದರು. ಮ್ಯಾಸಿವ್ ಅಟ್ಯಾಕ್ ಆಗಿ ಚಿರು ಚಿಕಿತ್ಸೆ ಫಲಿಸದೆ ನಿಧನ ಆಗಿದ್ದಾನೆ. ಚಿರು ಇನ್ನಿಲ್ಲ ಅನ್ನೋದು ನಂಬುವುದಕ್ಕೆ ಆಗ್ತಿಲ್ಲ.

ಅವನ ಪತ್ನಿ ಮೇಘನಾ ರಾಜ್ ಹಾಗೂ ಕುಟುಂಬದ ಸದಸ್ಯರಿಗೆ ದುಃಖ ತಡೆದು ಕೊಳ್ಳುವ ಶಕ್ತಿ ಭಗವಂತ ನೀಡಲಿ. ಮೇಘಾನ ರಾಜ್ ಹೊಟ್ಟೆಯಲ್ಲಿ ಪುಟ್ಟ ಚಿರಂಜೀವಿ ಬರ್ತಿದ್ದಾನೆ ಎಂದು ಹೇಳಿ ಭಾವುಕರಾಗಿ ತಾರಾ ಕಣ್ಣೀರು ಹಾಕಿದ್ರು.

Last Updated : Jun 7, 2020, 6:19 PM IST

ABOUT THE AUTHOR

...view details