ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ವ್ಯಾನಿಟಿ ವ್ಯಾನ್ಗೆ ಕೂಲಿಂಗ್ ಪೇಪರ್ನ ಟಿಂಟೆಡ್ ಗ್ಲಾಸ್ ಬಳಲಾಗಿದೆ. ಸಂಚಾರಿ ನಿಯಮದ ಪ್ರಕಾರ ಟಿಂಟೆಡ್ ಗ್ಲಾಸ್ಗಳನ್ನು ಬಳಸುವಂತಿಲ್ಲ. ಆದರೆ, ಈ ನಿಯಮವನ್ನು ಅಲ್ಲು ಮುರಿದ್ದಾರೆ.
ಐಶಾರಾಮಿ ವ್ಯಾನ್ ಮೇಲೆ ಪೊಲೀಸ್ ಕಣ್ಣು... ನಟ ಅಲ್ಲು ಅರ್ಜುನ್ಗೆ ಶಾಕ್ - ಐಶಾರಾಮಿ ವ್ಯಾನ್
ಸಂಚಾರಿ ನಿಮಯ ಉಲ್ಲಂಘಿಸಿದ ಟಾಲಿವುಡ್ ನಟ ಅಲ್ಲು ಅರ್ಜುನ್ಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ.
ಚಿತ್ರಕೃಪೆ: ಟ್ವಿಟರ್
ಈ ಬಗ್ಗೆ ಇದೇ ತಿಂಗಳು 16 ರಂದು ಮೊಹಮ್ಮದ್ ಅಬ್ದುಲ್ ಅಜಂ ಎಂಬಾತ ಪೊಲೀಸರಿಗೆ ದೂರು ನೀಡಿದ್ದರು. ಹಿಮಾಯತ್ ನಗರದಲ್ಲಿ ಸಂಚರಿಸುತ್ತಿದ್ದ ವ್ಯಾನ್ ಪೋಟೊ ಸಮೇತ ಸೈಬರ್ ಠಾಣೆಗೆ ದೂರು ಕೊಟ್ಟಿದ್ದರು. ಇದನ್ನು ಪರಿಗಣಿಸಿರುವ ಪೊಲೀಸರು ಅಲ್ಲು ಅರ್ಜುನ್ ಮನೆಗೆ ₹735 ದಂಡದ ಚಲನ್ ಕಳುಹಿಸಿದ್ದಾರೆ.
ಇದೇ ತಿಂಗಳ ಮೊದಲ ವಾರದಲ್ಲಿ ಅಲ್ಲು FALCON ಕಂಪನಿಯ ದುಬಾರಿ ಮೊತ್ತದ ಲೇಟೆಸ್ಟ್ ಡಿಸೈನ್ನ ವ್ಯಾನಿಟಿ ವ್ಯಾನ್ ಖರೀದಿಸಿದ್ದರು. ಇದರ ಬೆಲೆ ಬರೋಬ್ಬರಿ ₹6 ಕೋಟಿ. ಹೊಸ ವಾಹನದ ಖರೀದಿ ಖುಷಿಯಲ್ಲಿರುವ ಅಲ್ಲು ಅರ್ಜುನ್ಗೆ ಹೈದರಾಬಾದ್ನ ಪೊಲೀಸರು ಆಘಾತ ನೀಡಿದ್ದಾರೆ.