ನಿನ್ನೆ ಹಿಂದಿ ಹೊರತುಪಡಿಸಿ ವಿಶ್ವಾದ್ಯಂತ ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸುಮಾರು 4000 ಸ್ಕ್ರೀನ್ಗಳಲ್ಲಿ 'ಪೈಲ್ವಾನ್' ಸಿನಿಮಾ ಬಿಡುಗಡೆಯಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನದ ಕಲೆಕ್ಷನ್ ಎಷ್ಟಿರಬಹುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೊದಲ ದಿನವೇ ಪೈಲ್ವಾನ್ 10 ಕೋಟಿ ರೂಪಾಯಿ ಲಾಭ ಗಳಿಸಿದ್ದಾನೆ ಎನ್ನಲಾಗಿದೆ. ಇಂದು ಮಹಾರಾಷ್ಟ್ರದಲ್ಲಿ ಮಾತ್ರ ಸುಮಾರು 2000 ಸ್ಕ್ರೀನ್ಗಳಲ್ಲಿ ಹಿಂದಿ ವರ್ಷನ್ ಬಿಡುಗಡೆಯಾಗಿದೆ. ನಿನ್ನೆ ಬೆಳಗ್ಗೆಯೇ 5.30ಕ್ಕೆ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ 'ಪೈಲ್ವಾನ್' ಮೊದಲ ಶೋ ಆರಂಭವಾಗಿತ್ತು. ಮುಂಗಡ ಬುಕ್ಕಿಂಗ್‌ಗೆ ಕೂಡಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.
ಇಂದು 'ಪೈಲ್ವಾನ್' ಹಿಂದಿ ಅವತರಣಿಕೆ ಬಿಡುಗಡೆ; ನಿನ್ನೆಯ ಒಟ್ಟು ಕಲೆಕ್ಷನ್ ಎಷ್ಟು? - ಕಿಚ್ಚನ ಅಭಿಮಾನಿಗಳು
'ಪೈಲ್ವಾನ್' ಕಿಚ್ಚ ಸುದೀಪ್ ಸಿನಿಮಾ ಕರಿಯರ್ನಲ್ಲಿ ಎಂದಿಗೂ ನೆನಪಿನಲ್ಲಿ ಉಳಿಯುವ ಸಿನಿಮಾ. ನಿನ್ನೆ ದೇಶಾದ್ಯಂತ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾವನ್ನು ಕಿಚ್ಚನ ಅಭಿಮಾನಿಗಳು ಬಹಳ ಅದ್ದೂರಿಯಾಗಿ ಬರಮಾಡಿಕೊಂಡಿದ್ದರು.
ಸಿಂಗಲ್ ಸ್ಕ್ರೀನ್ಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಹೆಚ್ಚು ಶೋ ಪ್ರದರ್ಶನಗೊಂಡ ಹಿನ್ನೆಲೆ 'ಪೈಲ್ವಾನ್' ಕನ್ನಡದಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಗಳಿಸಿದೆ ಎಂಬುದು ಗಾಂಧಿನಗರದ ಸಿನಿಪಂಡಿತರ ಮಾತು. ಇನ್ನು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಪೈಲ್ವಾನ್ ಅಬ್ಬರ ಜೋರಾಗಿತ್ತು. ಈ ಭಾಷೆಗಳ ಕಲೆಕ್ಷನ್ ಹಾಗೂ ವಿದೇಶಗಳಲ್ಲಿನ ಕಲೆಕ್ಷನ್ ಲೆಕ್ಕ ಹಾಕಿದರೆ ಸಿನಿಮಾದ ಒಟ್ಟು ಕಲೆಕ್ಷನ್ 13 ಕೋಟಿ ರೂಪಾಯಿಗೂ ಹೆಚ್ಚಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದನ್ನು ನಿರ್ಮಾಪಕರು ಅಧಿಕೃತವಾಗಿ ಹೇಳಬೇಕಿದೆ.
'ಹೆಬ್ಬುಲಿ' ನಂತರ ಎಸ್. ಕೃಷ್ಣ ಮತ್ತು ಸುದೀಪ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ಸಿನಿಮಾ ಇದು. ಜಿಮ್ಗೆ ಹೋಗದ ಕಿಚ್ಚ, ಈ ಸಿನಿಮಾಗಾಗಿ ಜಿಮ್ಗೆ ಹೋಗಿ ಭಾರಿ ವರ್ಕೌಟ್ ಮಾಡಿದ್ದಾರೆ. ನಿರ್ಮಾಪಕಿ ಸ್ವಪ್ನ ಕೃಷ್ಣ ಬಂಡವಾಳ ಹೂಡಿದ್ದ ಈ ಸಿನಿಮಾಕ್ಕೆ, ಅರ್ಜುನ್ ಜನ್ಯ ಸಂಗೀತವಿದೆ. ಸದ್ಯ 'ಪೈಲ್ವಾನ್' ಸಿನಿಮಾದ ಕ್ರೇಜ್ ನೋಡಿದ್ರೆ, ಈ ವೀಕೆಂಡ್‌ನಲ್ಲಿ ಮತ್ತಷ್ಟು ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.