ಕೋವಿಡ್-19 ಮಧ್ಯೆಯೂ ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿವೆ. ಅದೇ ರೀತಿ ಸ್ಯಾಂಡಲ್ವುಡ್ಗೆ ಸಾಕಷ್ಟು ಹೊಸ ಪ್ರತಿಭಾನ್ವಿತ ನಾಯಕಿಯರ ಆಗಮನವಾಗಿದ್ದು ಬೆಳ್ಳಿ ತೆರೆ ಮೇಲೆ ಮಿಂಚಿದ್ದಾರೆ. 2021ರಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಚೆಲುವೆಯರು ಯಾರು ನೋಡೋಣ..
ಮಳಯಾಳಂ ನಟಿ ಮೆಡೋನ್ನಾ ಸೆಬಾಸ್ಟಿಯನ್ 2021ರ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕನ್ನಡ ಚೆಲುವೆ ಆಶಾ ಭಟ್. 2019ರಲ್ಲಿ ಜಂಗ್ಲಿ ಎಂಬ ಹಿಂದಿ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರೆ. ಮೂಲತಃ ಭದ್ರಾವತಿ ಮೂಲದವರಾದ ನಟಿ 'ರಾಬರ್ಟ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು.
ತಮಿಳು, ತೆಲುಗು ಚಿತ್ರರಂಗದಲ್ಲಿ ತನ್ನದೇ ಇಮೇಜ್ ಹೊಂದಿರುವ ಸಯ್ಯೇಶಾ ಸೈಗಲ್ 'ಯುವರತ್ನ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಪವರ್ ಸ್ಟಾರ್ ಜೊತೆ ನಟಿಸಿದ ಸೈಗಲ್ ಚೊಚ್ಚಲ ಸಿನಿಮಾದಲ್ಲೇ 'ಊರಿಗೊಬ್ಬ ರಾಜ, ಆ ರಾಜನಿಗೆ ಒಬ್ಬಳು ರಾಣಿ' ಹಾಡಿನ ಮೂಲಕ ಕನ್ನಡಿಗರ ಮನಗೆದ್ದರು.
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೋಟಿಗೊಬ್ಬ 3' ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದವರು ಮಳಯಾಳಿ ನಟಿ ಮಡೋನಾ ಸೆಬಾಸ್ಟಿಯನ್. ಸುದೀಪ್ ಜೊತೆ ನೀ ಕೊಟ್ಟಿಗೊಬ್ಬನೇ ಎಂಬ ಹಾಡಿನಲ್ಲಿ ಕನ್ನಡ ಸಿನಿಮಾಪ್ರಿಯರಿಗೆ ಇಷ್ಟವಾದರು.
ಕನ್ನಡದವರೇ ಆದ ನಟಿ ಗಾನವಿ ಲಕ್ಷ್ಮಣ್ ಪರಭಾಷೆಯ ನಟಿಯರ ಮಧ್ಯೆ ಗಮನ ಸೆಳೆದವರು ರಾಜ್‌ಕುಮಾರ್ ಕುಟುಂಬದ ಕುಡಿ ಧನ್ಯಾ ರಾಮ್ ಕುಮಾರ್. ಅಣ್ಣಾವ್ರ ಮೊಮ್ಮಗಳಾಗಿರೋ ಧನ್ಯಾ, ಸೂರಜ್ ಗೌಡ ನಟನೆಯ ಜೊತೆಗೆ ನಿರ್ದೇಶನ ಮಾಡಿ ನಿನ್ನ ಸನಿಹಕೆ ಸಿನಿಮಾ ಮುಖಾಂತರ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಚೊಚ್ಚಲ ಸಿನಿಮಾದಲ್ಲೇ ಧನ್ಯಾ ರಾಮ್‌ಕುಮಾರ್ ಉತ್ತಮವಾಗಿ ನಟಿಸಿ, ಭವಿಷ್ಯದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.
ಟಿ.ಎನ್.ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಗೆದ್ದಿದ್ದ ಗಾನವಿ ಲಕ್ಷ್ಮಣ್, ರಿಷಭ್ ಶೆಟ್ಟಿ ನಿರ್ದೇಶನದ ಹೀರೋ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ಭವಿಷ್ಯ ಉತ್ತಮ ನಟಿಯಾಗುವ ಭರವಸೆ ಮೂಡಿಸಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರೆಬಾ ಮೋನಿಕಾ ಜಾನ್, ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರದ ಮೂಲಕ, ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಕಿರುತೆರೆಯಲ್ಲಿ ಮಿಂಚಿದ್ದ ಬೃಂದಾ ಆಚಾರ್ಯ, ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಬಿಗ್ ಸ್ಕ್ರೀನ್ಗೆ ಆಗಮಿಸಿದರು. ತಮ್ಮ ಚೊಚ್ಚಲ ಸಿನಿಮಾದಲ್ಲೇ ಪ್ರೇಮ್ ಜೊತೆ ಮನೋಜ್ಞವಾಗಿ ನಟಿಸಿ ಸೈ ಎನ್ನಿಸಿಕೊಂಡ ಬೃಂದಾ ಕನ್ನಡದವರು.
ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿರೋ ಕಯಾದು ಲೋಹರ್ ಮನುರಂಜನ್ ರವಿಚಂದ್ರನ್ ನಟನೆಯ ಮುಗಿಲ್ ಪೇಟೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಈ ಚಿತ್ರದಲ್ಲಿ ಮನು ಮತ್ತು ಕಯಾದು ಲೋಹಲ್ ಜೋಡಿ ವರ್ಕ್ ಔಟ್ ಆಗಿದೆ.