ಕರ್ನಾಟಕ

karnataka

ETV Bharat / sitara

ವಿರೋಧದ ನಡುವೆ ಕೂಡ ಮೊದಲ ದಿನವೇ 55 ಕೋಟಿ ರೂ. ಗಳಿಕೆ ಮಾಡಿದ 'ತಲೈವಿ'

ರೆಟ್ರೋ ಶೈಲಿಯಲ್ಲೇ ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಕೆಲ ಸಿನಿಮೀಯ ದೃಶ್ಯ ಸೇರಿಸಿ ಚಿತ್ರ ನಿರ್ಮಾಣ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ..

By

Published : Sep 10, 2021, 10:27 PM IST

actress Kangana Ranaut
actress Kangana Ranaut

ಚೆನ್ನೈ(ತಮಿಳುನಾಡು) :ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಜೀವನಾಧಾರಿತ ಚಿತ್ರ 'ತಲೈವಿ' ಇಂದು ದೇಶಾದ್ಯಂತ ರಿಲೀಸ್​ ಆಗಿದೆ. ಮೊದಲ ದಿನವೇ ಒಳ್ಳೇ ಗಳಿಕೆ ಮಾಡಿದೆ ಎಂದು ತಿಳಿದು ಬಂದಿದೆ.

ತಲೈವಿ ಚಿತ್ರದಲ್ಲಿ ನಟಿ ಕಂಗನಾ

ಚಿತ್ರಕ್ಕೆ ಕೆಲವೊಂದಿಷ್ಟು ವಿರೋಧ ವ್ಯಕ್ತವಾಗಿದ್ದು, ಇದರ ಮಧ್ಯೆ ಕೂಡ ಉತ್ತಮ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ದೇಶಾದ್ಯಂತ ಸುಮಾರು 750-800 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್​ ಆಗಿತ್ತು.

ಪ್ರಮುಖವಾಗಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು ಜೊತೆಗೆ ಕೇರಳದಲ್ಲೂ ಚಿತ್ರ ತೆರೆ ಕಂಡಿದೆ. ಸ್ಯಾಟ್​ಲೈಟ್​, ಡಿಜಿಟಲ್​, ಮ್ಯೂಜಿಕ್​ ರೈಟ್ಸ್​ ಹಾಗೂ ಚಿತ್ರಮಂದಿರಗಳಿಂದ ಸಿನಿಮಾ 85 ಕೋಟಿ ರೂ. ಗಳಿಕೆ ಮಾಡಿದ್ದು, ಇದರಲ್ಲಿ 55 ಕೋಟಿ ರೂ. ಚಿತ್ರಮಂದಿರಗಳಿಂದ ಬಂದಿದೆ ಎಂದು ವರದಿಯಾಗಿದೆ.

ಬಾಲಿವುಡ್ ನಟಿ ಕಂಗನಾ ರಣಾವತ್​​

ಸಿನಿಮಾದ ಕೆಲ ಸನ್ನಿವೇಶಗಳಿಗೆ ವಿರೋಧ

ತಲೈವಿ ಚಿತ್ರದಲ್ಲಿನ ಎಂಜಿಆರ್​ ಹಾಗೂ ಜಯಲಲಿತಾ ಅವರಿಗೆ ಸಂಬಂಧಿಸಿದ ಕೆಲ ಸನ್ನಿವೇಶಗಳಿಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಎಐಎಡಿಎಂಕೆ ಪಕ್ಷದ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿರಿ: ತೆರೆ ಮೇಲೆ ಬರಲು 'ತಲೈವಿ' ಸಜ್ಜು: ಜಯಲಲಿತಾ ಸ್ಮಾರಕಕ್ಕೆ ನಮಿಸಿದ ನಟಿ ಕಂಗನಾ

ರೆಟ್ರೋ ಶೈಲಿಯಲ್ಲೇ ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಕೆಲ ಸಿನಿಮೀಯ ದೃಶ್ಯ ಸೇರಿಸಿ ಚಿತ್ರ ನಿರ್ಮಾಣ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ABOUT THE AUTHOR

...view details