ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಪದೇ ಪದೇ ಕೇಳಿಬರುತ್ತಿರುವ ಹೆಸರು ಗಾಯಕಿ ಮಂಗ್ಲಿ ಅವರದ್ದು. ರಾಬರ್ಟ್ ಸಿನಿಮಾದ ತೆಲುಗು ಅವತರಣಿಕೆಯ`ಕಣ್ಣೇ ಅದಿರಿಂದಿ' ಹಾಡಿನ ಮೂಲಕ ಜನಪ್ರಿಯರಾದ ಮಂಗ್ಲಿ, ಕನ್ನಡದ ಮತ್ತೊಂದು ಚಿತ್ರಕ್ಕೆ ಧ್ವನಿಯಾಗಲಿದ್ದಾರೆ.
ಕಣ್ಣೇ ಅದಿರಿಂದಿ ಹಾಡಿನ ನಂತರ ಕನ್ನಡ ಚಿತ್ರರಂಗದಲ್ಲಿ ಮಂಗ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಮೊದಲಿಗೆ 'ಕರಿಯಾ ಐ ಲವ್ ಯೂ' ಎಂಬ ಚಿತ್ರದಲ್ಲಿ ಮಂಗ್ಲಿ ಒಂದು ಹಾಡು ಹಾಡುತ್ತಿದ್ದಾರೆ ಮತ್ತು ಅದೇ ಅವರ ಮೊದಲ ಕನ್ನಡ ಹಾಡು ಎಂದು ಹೇಳಲಾಯಿತು. ಆ ನಂತರ ಶಿವರಾಜ್ಕುಮಾರ್ ಅಭಿನಯದ ಹೊಸ ಚಿತ್ರದಲ್ಲಿ ಮಂಗ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಯಿತು. ಇದೀಗ ಅವರು `ತ್ರಿಬ್ಬಲ್ ರೈಡಿಂಗ್' ಚಿತ್ರದಲ್ಲಿ ಒಂದು ಹಾಡನ್ನು ಹಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.