ಕರ್ನಾಟಕ

karnataka

By

Published : Jun 16, 2019, 5:53 PM IST

ETV Bharat / sitara

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಅರಿವು... 'ಪ್ರೀತಿ ಇರಬಾರದೇ' ಬಿಡುಗಡೆಗೆ ಸಜ್ಜು

ಹೆಣ್ಣುಭ್ರೂಣ ಹತ್ಯೆ ವಿರುದ್ಧ ದನಿ ಎತ್ತಲು ತಯಾರಾಗಿದ್ದ ಟಾಲಿವುಡ್​ ಸಿನಿಮಾವೊಂದು ಇದೀಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಡಾ. ಲಿಂಗೇಶ್ವರ್ ಬಂಡವಾಳ ಹೂಡಿದ್ದು, ನವೀನ್ ನಯಾನಿ ಈ ಚಿತ್ರ ನಿರ್ದೇಶಿಸಿದ್ದಾರೆ.

'ಪ್ರೀತಿ ಇರಬಾರದೇ'

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಹಲವಾರು ಸಿನಿಮಾಗಳು ಬಂದಿವೆ. ಇದೀಗ ತೆಲುಗಿನ ಸಿನಿಮಾವೊಂದು 'ಪ್ರೀತಿ ಇರಬಾರದೇ' ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಆಗಿ ತೆರೆ ಕಾಣುತ್ತಿದೆ.

'ಪ್ರೀತಿ ಇರಬಾರದೇ' ಆಡಿಯೋ ಬಿಡುಗಡೆ ಸಮಾರಂಭ

ಈ ಸಿನಿಮಾದಲ್ಲಿ ನಟ, ನಟಿ, ನಿರ್ದೇಶಕ, ನಿರ್ಮಾಪರು ಹಾಗೂ ತಂತ್ರಜ್ಞಾನರಿಂದ ಹಿಡಿದು ಎಲ್ಲರೂ ತೆಲುಗಿನವರು. ತರುಣ್​​​​​ ತೇಜ್ ಹಾಗು ಲಾವಣ್ಯ ಎಂಬ ಯುವ ಪ್ರತಿಭೆಗಳು ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಕನ್ನಡ ಮಾತನಾಡಲು ಬರದಿದ್ದರೂ ಈ ಯುವ ನಟರು ಕನ್ನಡ ಸಿನಿಮಾವನ್ನು ನೋಡಿ ಬೆಳೆಸಿ ಎಂದು ಮನವಿ ಮಾಡಿದ್ದಾರೆ.

ಇನ್ನು ಈ ಚಿತ್ರದ ನಿರ್ಮಾಪಕ ಡಾ‌. ಲಿಂಗೇಶ್ವರ್​, ನಿರ್ದೇಶಕ ನವೀನ್ ನಯಾನಿ ಹಾಗೂ ಸಂಗೀತ ನಿರ್ದೇಶಕ ಸಾಬು ನರ್ಗಿಸ್ ಕೂಡಾ ತೆಲುಗಿನವರು. ಒಂದು ಖುಷಿಯ ವಿಚಾರ ಎಂದರೆ, ಕನ್ನಡ ಕವಿ ಕೆ. ಕಲ್ಯಾಣ್ ಬರೆದಿರುವ ಸಾಹಿತ್ಯಕ್ಕೆ ಸಾಬು ನರ್ಗಿಸ್ ಸಂಗೀತ ನೀಡಿದ್ದು, ಕನ್ನಡದ ಗಾಯಕರಾದ ಚೇತನ್ ನಾಯಕ್ ಹಾಗೂ ಅನಿರುಧ್​​​​ ಶಾಸ್ತ್ರಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

'ಪ್ರೀತಿ ಇರಬಾರದೇ' ಚಿತ್ರತಂಡ

For All Latest Updates

TAGGED:

ABOUT THE AUTHOR

...view details