ಕರ್ನಾಟಕ

karnataka

ಸುರ್​​ ಸರ್​​ ಬತ್ತಿ, ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದ 'ತಲೈವಾ'

ಸೂಪರ್​​ಸ್ಟಾರ್​ ರಜನಿ ಕಾಂತ್​ ಮನೆಯಲ್ಲೂ ದೀಪಾವಳಿ ಹಬ್ಬದ ಸಡಗರ ತುಂಬಿದೆ. ತಲೈವಾ ರಜನಿ ತಮ್ಮ ಮಗಳು, ಅಳಿಯ, ಮಡದಿ ಹಾಗೂ ಮೊಮ್ಮಗನ ಜೊತೆ ದೀಪಾವಳಿ ಆಚರಿಸಿದ್ದಾರೆ.

By

Published : Nov 14, 2020, 6:45 PM IST

Published : Nov 14, 2020, 6:45 PM IST

ಸುರ್​​ಸರ್​​ ಬತ್ತಿ, ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದ 'ತಲೈವಾ'
ಸುರ್​​ಸರ್​​ ಬತ್ತಿ, ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದ 'ತಲೈವಾ'

ಇಂದು ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಸಿನಿ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿದ್ದಾರೆ. ಇನ್ನು ಕೆಲವು ಸಿನಿಮಾ ನಟ-ನಟಿಯರು ತಾವು ಹಬ್ಬ ಸೆಲೆಬ್ರೇಟ್​ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸೂಪರ್ ​​ಸ್ಟಾರ್​ ರಜನಿ ಕಾಂತ್​ ಮನೆಯಲ್ಲೂ ದೀಪಾವಳಿ ಹಬ್ಬದ ಸಡಗರ ತುಂಬಿದೆ. ತಲೈವಾ ರಜನಿ ತಮ್ಮ ಮಗಳು, ಅಳಿಯ, ಮಡದಿ ಹಾಗೂ ಮೊಮ್ಮಗನ ಜೊತೆ ದೀಪಾವಳಿ ಆಚರಿಸಿದ್ದಾರೆ. ಪಟಾಕಿ ಹೊಡೆಯುತ್ತ, ಸುರ್​ ಸುರ್​​ ಬತ್ತಿ ಹಚ್ಚಿ ಹಬ್ಬವನ್ನು ಎಂಜಾಯ್​ ಮಾಡಿದ್ದಾರೆ. ಈ ಫೋಟೋಗಳನ್ನು ರಜನಿ ಕಾಂತ್​​ ಮಗಳು ಸೌಂದರ್ಯ ರಜನಿ ಕಾಂತ್​ ತಮ್ಮ ಟ್ವಿಟರ್​​ ಖಾತೆಯಲ್ಲಿ ಶೇರ್​​ ಮಾಡಿದ್ದಾರೆ.

ಸುರ್ ​​ಸರ್​​ ಬತ್ತಿ, ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದ 'ತಲೈವಾ'
ಸುರ್​​ ಸರ್​​ ಬತ್ತಿ, ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದ 'ತಲೈವಾ'

ರಜನಿ ಕಾಂತ್​​ ಕೊರೊನಾ ಬಂದ ಮೇಲಿಂದ ಯಾವುದೇ ಸಿನಿಮಾ ಕಾರ್ಯಗಳಲ್ಲಿ ತೊಡಗಿಕೊಂಡಿಲ್ಲ. ಕೊರೊನಾ ಲಾಕ್​ಡೌನ್​ ಮುಂಚಿತವಾಗಿ ಅಣ್ಣಾತೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು. ಕೊರೊನಾ ಲಾಕ್​ಡೌನ್​ ನಂತ್ರ ಚಿತ್ರೀಕರಣವನ್ನು ನಿಲ್ಲಿಸಿದ್ದು, ಮುಂದಿನ ವರ್ಷ ಮತ್ತೆ ಅಣ್ಣಾತೆ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ರಜಿನಿ ಈ ಹಿಂದೆ ದರ್ಬಾರ್​ ಸಿನಿಮಾದಲ್ಲಿ ಕಾಣಿಕೊಂಡಿದ್ದರು.

ABOUT THE AUTHOR

...view details