ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸ್ವಪ್ನ ಕೃಷ್ಣ ನಿರ್ದೇಶನದ ಜನಪ್ರಿಯ ಧಾರಾವಾಹಿ ಸುಬ್ಬಲಕ್ಷ್ಮಿ ಸಂಸಾರ ಕೂಡಾ ತನ್ನ ಪ್ರಸಾರ ನಿಲ್ಲಿಸಲಿದೆ.
ಗುರುಮೂರ್ತಿ ಜೊತೆಗಿನ ಸಂಸಾರಕ್ಕೆ ಫುಲ್ ಸ್ಟಾಪ್ ಇಟ್ಟ ಸುಬ್ಬಲಕ್ಷ್ಮಿ! ಲಾಕ್ಡೌನ್ನಿಂದಾಗಿ ಈಗಾಗಲೇ ಹಲವು ಧಾರಾವಾಹಿಗಳು ಮುಕ್ತಾಯಗೊಂಡಿದ್ದು, ಇದೀಗ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ಕೂಡಾ ಮುಕ್ತಾಯವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತು ಸ್ವತಃ ಧಾರಾವಾಹಿಯ ನಿರ್ದೇಶಕಿ, ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಧಾರವಾಹಿಯಲ್ಲಿ ಬಹುತೇಕ ಮಂದಿಗೆ ಇಷ್ಟವಾದವಳು ನಮ್ಮ ಸುಬ್ಬಿ. ಹಳ್ಳಿ ಸೊಗಡಿನ ಮಾತು, ಅವಳ ಮುಗ್ದತೆ, ಅವಳು ತನ್ನ ನೋವನ್ನು ಸ್ವೀಕರಿಸಿದ ಶೈಲಿ ಎಷ್ಟೋ ಮಂದಿಗೆ ಇಷ್ಟ.
ಗುರುಮೂರ್ತಿ ಜೊತೆಗಿನ ಸಂಸಾರಕ್ಕೆ ಫುಲ್ ಸ್ಟಾಪ್ ಇಟ್ಟ ಸುಬ್ಬಲಕ್ಷ್ಮಿ! ಆದರೆ, ಎಲ್ಲಾ ಕಥೆಯಲ್ಲೂ ವಿಲನ್ಗಳು ಇದ್ದಹಾಗೆ ಈ ಧಾರಾವಾಹಿಯಲ್ಲಿ ಒಳಗೂ, ಹೊರಗೂ ವಿಲನ್ಗಳಿದ್ದರು. ನಮ್ಮ ಸುಬ್ಬಿಗೆ 750 ಸಂಚಿಕೆಗಳ ಸಂಭ್ರಮ ತಂದು ಕೊಟ್ಟಿದ್ದು ನಮ್ಮ ಪ್ರೇಕ್ಷಕರು. ಅವಳನ್ನ ನಿಜವಾಗಲು ಗೆಲ್ಲಿಸಿರುವುದು ನೀವು. ಸುಬ್ಬಿಯ ಸಂಸಾರಕ್ಕೆ ಒಂದು ಒಳ್ಳೆ ಕ್ಲೈಮಾಕ್ಸ್ ಇದ್ದಿತಾದರೂ ಅದನ್ನು ನಿಮ್ಮ ಮುಂದೆ ತರುಲು ಆಗುತ್ತಿಲ್ಲ ಎನ್ನುವ ನಿರಾಸೆ ಖಂಡಿತಾ ಇದೆ. ಸುಬ್ಬಿ ಖಂಡಿತಾ ಅರುಣಪ್ರಸಾದ್ ಅವರನ್ನು ಮದುವೆ ಆಗುತ್ತಿರಲಿಲ್ಲ. ಒಂದು ಗಂಡು-ಹೆಣ್ಣು ಒಳ್ಳೆಯ ಸ್ನೇಹಿತರು ಆಗಬಹುದು. ಅವರದ್ದು ಪರಿಶುದ್ಧ ಸ್ನೇಹ.
ಸುಬ್ಬಿಯನ್ನ ನಿಮ್ಮ ಮುಂದೆ ತರಲು ಕೆಲಸ ಮಾಡಿದ ನಮ್ಮ ತಂತ್ರಜ್ಞರ ತಂಡ, ನಮ್ಮ ಬರವಣಿಗೆಯ ಟೀಂ, ಕಲಾವಿದರು, ಪ್ರೊಡಕ್ಷನ್ ಟೀಮ್ಗೆ ಧನ್ಯವಾದಗಳು. ಈ ಧಾರಾವಾಹಿಯನ್ನ ನಿಮ್ಮಮುಂದೆ ತರಲು ಅವಕಾಶ ಕೊಟ್ಟ ಜೀ ಕನ್ನಡಕ್ಕೆ ಸದಾ ಚಿರಋಣಿ. ಯಾವುದು ಅಂತ್ಯವಲ್ಲ ಆರಂಭ. ಮತ್ತೆ ಹೊಸ ಕಥೆ ಜೊತೆಗೆ ಎಲ್ಲರನ್ನು ರಂಜಿಸಲು ಬರುತ್ತೇವೆ ಎಂದು ಬರೆದುಕೊಂಡಿದ್ದಾರೆ.