ಕರ್ನಾಟಕ

karnataka

ETV Bharat / sitara

'ಏಕ್ ಲವ್ ಯಾ' ಸಿನಿಮಾ ನೋಡಿ ಮೆಚ್ಚಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ - Ek Love Ya release date

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ರೇಣುಕಾಚಾರ್ಯ ಕುಟುಂಬಸ್ಥರು 'ಏಕ್ ಲವ್ ಯಾ' ಸಿನಿಮಾ ವೀಕ್ಷಣೆ ಮಾಡಿದ್ದು, ಚಿತ್ರದ ಕುರಿತು ಸಿದ್ದರಾಮಯ್ಯ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.

'ಏಕ್ ಲವ್ ಯಾ' ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ
'ಏಕ್ ಲವ್ ಯಾ' ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ

By

Published : Feb 24, 2022, 8:59 AM IST

'ಏಕ್ ಲವ್ ಯಾ' ಶೀರ್ಷಿಕೆಯಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಸಿನಿಮಾ. ನಿರ್ದೇಶಕ ಜೋಗಿ ಪ್ರೇಮ್ 'ದಿ ವಿಲನ್' ಚಿತ್ರದ ಬಳಿಕ ಪತ್ನಿ ರಕ್ಷಿತಾ ಅವರ ಸಹೋದರ ರಾಣಾನನ್ನು ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಸದ್ಯಕ್ಕೆ ಪೋಸ್ಟರ್ ಹಾಗೂ ಟೀಸರ್​ನಿಂದಲೇ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿರುವ ಈ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ‌.

ನಿರ್ದೇಶಕ ಜೋಗಿ ಪ್ರೇಮ್ ರಾಜಕೀಯ ಗಣ್ಯರಾದ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್.ಡಿ‌.ಕುಮಾರಸ್ವಾಮಿ ,ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಿನಿಮಾ ವೀಕ್ಷಿಸಲು ಆಹ್ವಾನಿಸಿ, ವಿಶೇಷ ಶೋ ಅನ್ನು ಎಂಜಿ‌ ರಸ್ತೆಯ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಆಯೋಜಿಸಿದ್ದರು.

'ಏಕ್ ಲವ್ ಯಾ' ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಬಂದು 'ಏಕ್ ಲವ್ ಯಾ' ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಚಿತ್ರದ ಕುರಿತು ಮೆಚ್ವುಗೆ ವ್ಯಕ್ತಪಡಿಸಿದ ಮಾಜಿ ಸಿಎಂ ಇಡೀ ಚಿತ್ರತಂಡಕ್ಕೆ ಅಭಿನಂದಿಸಿ, ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸಿದರು.

'ಏಕ್ ಲವ್ ಯಾ' ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ

'ಏಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾ ಮೂರು ಶೇಡ್​ನಲ್ಲಿ ಬಣ್ಣ ಹಚ್ಚಿದ್ದು, ರಚಿತಾ ರಾಮ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ ಆಧರಿಸಿರೋ ಈ ಸಿನಿಮಾವನ್ನ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ ನಿರ್ಮಿಸಲಾಗುತ್ತಿದೆ. ಅರ್ಜುನ್ ಜನ್ಯಾ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಜೊತೆಗೆ ರನ್ನ, ರೀಷ್ಮಾ ನಾಣಯ್ಯ ಸೇರಿದಂತೆ ಮೊದಲ ಬಾರಿಗೆ ಅನೇಕರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details