ಕರ್ನಾಟಕ

karnataka

By

Published : Jul 10, 2021, 1:27 PM IST

ETV Bharat / sitara

ಮತ್ತೆ ಚೇಂಜ್ ಆಗಲಿದೆ ಸೆಂಚುರಿ ಸ್ಟಾರ್ ಅಭಿನಯದ 'ಶಿವಪ್ಪ' ಚಿತ್ರದ ಟೈಟಲ್!

ಸೆಂಚುರಿ ಸ್ಟಾರ್ 123ನೇ ಸಿನಿಮಾಕ್ಕೆ 'ಶಿವಪ್ಪ' ಅಂತಾ ಹೆಸರಿಟ್ಟು, ಮುಕ್ಕಾಲು ಭಾಗ ಚಿತ್ರೀಕರಣ ಮುಗಿದಿದೆ. ಇದೀಗ ಈ ಚಿತ್ರದ ಟೈಟಲ್ ಚೇಂಜ್ ಆಗಿದ್ದು, ಶಿವರಾಜ್ ಕುಮಾರ್ ಅವರ 58ನೇ ಹುಟ್ಟುಹಬ್ಬಕ್ಕೆ ಅನಾವರಣ ಆಗಲಿದೆ.

Shiva Rajkumar
ಮತ್ತೆ ಚೇಂಜ್ ಆಗಲಿದೆ ಸೆಂಚುರಿ ಸ್ಟಾರ್ ಅಭಿನಯದ 'ಶಿವಪ್ಪ' ಚಿತ್ರದ ಟೈಟಲ್

ಸ್ಯಾಂಡಲ್​​​ವುಡ್​ನಲ್ಲಿ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನ ಮಾಡುತ್ತಿರುವ ಕನ್ನಡದ ಬ್ಯುಸಿಯಸ್ಟ್ ನಟ ಅಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸದ್ಯ ಸೆಂಚುರಿ ಸ್ಟಾರ್ 123ನೇ ಸಿನಿಮಾಕ್ಕೆ 'ಶಿವಪ್ಪ' ಅಂತಾ ಹೆಸರಿಟ್ಟು, ಮುಕ್ಕಾಲು ಭಾಗ ಚಿತ್ರೀಕರಣ ಸಹ ಮುಗಿದಿದೆ.

ಇದೀಗ ಈ ಚಿತ್ರದ ಟೈಟಲ್ ಚೇಂಜ್ ಆಗಿದ್ದು, ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅನಾವರಣ ಆಗಲಿದೆ. ಶಿವರಾಜ್ ಕುಮಾರ್ ಇದೇ ಜುಲೈ 12ಕ್ಕೆ 58ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಈಗಾಗಲೇ ನಿರ್ಧರಿಸಿದ್ದಾರೆ. ಆ ದಿನದೊಂದು ನಿರ್ದೇಶಕ ವಿಜಯ್ ಮಿಲ್ಟನ್, ಶಿವಣ್ಣನ 123ನೇ ಸಿನಿಮಾದ ಟೈಟಲ್ ಬಿಡುಗಡೆ ಮಾಡುವ ಮೂಲಕ ಹ್ಯಾಟ್ರಿಕ್ ಹೀರೋಗೆ ಬರ್ತಡೇ ಗಿಫ್ಟ್ ನೀಡಲಿದ್ದಾರೆ.

ಮತ್ತೆ ಚೇಂಜ್ ಆಗಲಿದೆ ಸೆಂಚುರಿ ಸ್ಟಾರ್ ಅಭಿನಯದ 'ಶಿವಪ್ಪ' ಚಿತ್ರದ ಟೈಟಲ್

ಸದ್ಯ ಹ್ಯಾಟ್ರಿಕ್ ಹೀರೋ ಕೈಯಲ್ಲಿ ಘಂಟೆ ಹಿಡಿದು ರೌಡಿಗಳಿಗೆ ಹೊಡೆಯುವ ಸೀನ್ ಹೊಂದಿರುವ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ‌. ಶಿವರಾಜ್ ಕುಮಾರ್ ಜೊತೆ ಡಾಲಿ ಧನಂಜಯ್, ದಿಯಾ ಖ್ಯಾತಿ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಸೆಂಚುರಿ ಸ್ಟಾರ್ 123ನೇ ಸಿನಿಮಾದ ಟೈಟಲ್ ಏನು ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರೊದಂತು‌ ನಿಜ.

ಇದನ್ನೂ ಓದಿ:ಸುಮಲತಾ ಏಕಾಂಗಿ ಅಲ್ಲ, ಅಮ್ಮನ ಪರವಾಗಿ‌ ಅಭಿಷೇಕ್ ಅಂಬರೀಶ್ ಬ್ಯಾಟಿಂಗ್!

ABOUT THE AUTHOR

...view details