ಮುಂಬೈ :ಸೂಪರ್ಮ್ಯಾನ್, ಸ್ಪೈಡರ್ಮ್ಯಾನ್, ಬ್ಯಾಟ್ ಮ್ಯಾನ್ ಮುಂತಾದ ಸೂಪರ್ ಹೀರೋಗಳನ್ನು ನಾವು ನೋಡಿದ್ದಾಯ್ತು.. ಈಗ ಭಾರತದ ಶಕ್ತಿಮಾನ್ ಸೂಪರ್ ಹೀರೋ ಆಗಿ ಹಾಲಿವುಡ್ನಲ್ಲಿ ಮಿಂಚಲು ತಯಾರಾಗುತ್ತಿದ್ದಾನೆ.
ಹೌದು.. ಐಕಾನಿಕ್ ಧಾರಾವಾಹಿ 'ಶಕ್ತಿಮಾನ್' ಹಾಲಿವುಡ್ ಮೂಲಕ ಹಿರಿತೆರೆಗೆ ಬರಲು ಸಿದ್ಧವಾಗುತ್ತಿದೆ. ಸೋನಿ ಪಿಕ್ಚರ್ ಇಂಡಿಯಾ ಶಕ್ತಿಮಾನ್ ಧಾರಾವಹಿಯನ್ನು ಸಿನಿಮಾ ಆಗಿ ನಿರ್ಮಿಸುವುದಾಗಿ ಹೇಳಿಕೊಂಡಿದ್ದು, ಈ ಕುರಿತು ಟ್ವೀಟ್ ಮಾಡಿದೆ.
ಮುಖೇಶ್ ಖನ್ನಾ ಅಭಿನಯದ ಈ ಧಾರಾವಾಹಿಯನ್ನು ಸಿನಿಮಾ ಆಗಿ ಮಾರ್ಪಾಡು ಮಾಡಲು ಸೋನಿ ಪಿಕ್ಚರ್ ಸಿದ್ಧವಾಗಿದ್ದು, ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ.