ಕರ್ನಾಟಕ

karnataka

ಕೊರೊನಾ ಸೋಂಕಿಗೆ ಹಿರಿಯ ನಟಿ ಆಶಾಲತಾ ಬಲಿ

ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟನೆ ಮಾಡಿದ್ದ ಚಿತ್ರರಂಗದ ಹಿರಿಯ ನಟಿ ಆಶಾಲತಾ ವಾಬ್ಗಾಂವ್​ಕರ್​​ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.

By

Published : Sep 22, 2020, 4:15 PM IST

Published : Sep 22, 2020, 4:15 PM IST

Senior actress Ashalta
Senior actress Ashalta

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಭಾರತೀಯ ಚಿತ್ರರಂಗದ ಹಿರಿಯ ನಟಿ ಆಶಾಲತಾ ವಬ್ಗಾಂವ್​ಕರ್​​ ನಿಧನರಾಗಿದ್ದಾರೆ. 79 ವರ್ಷದ ಅವರಿಗೆ ಶೂಟಿಂಗ್​ ವೇಳೆ ಕೊರೊನಾ ಸೋಂಕು ತಗುಲಿತ್ತು.

ಮರಾಠಿ, ಕೊಂಕಣಿ, ರಂಗಭೂಮಿ ಸೇರಿದಂತೆ ಕೆಲವೊಂದು ಬಾಲಿವುಡ್​ ಸಿನಿಮಾಗಳಲ್ಲಿ ನಟನೆ ಮಾಡಿದ್ದ ಇವರು, ಗೋವಾ ಮೂಲದವರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಧಾರಾವಾಹಿ ಒಂದರ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ, ನಟಿ ಆಶಾಲತಾ ಸೇರಿದಂತೆ 20 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತು. ಆಶಾಲತಾ ಅವರನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಚಿತ್ರರಂಗದ ಹಿರಿಯ ನಟಿ ಆಶಾಲತಾ ನಿಧನ

ಇವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದು, ರೇಣುಕಾ ಶಹಾನೆ ಟ್ವೀಟ್​ ಮಾಡಿ ಇಂದು ಅತ್ಯಂತ ದುಃಖಕರ ದಿನವಾಗಿದ್ದು, ಕೋವಿಡ್​ ಸೋಂಕಿನಿಂದಾಗಿ ನಾವು ಓರ್ವ ಸರಳ ಜೀವಿಯನ್ನ ಕಳೆದುಕೊಂಡಿದ್ದೇವೆ ಎಂದಿದ್ದಾರೆ. ಮಹಾರಾಷ್ಟ್ರದ ಸತಾರಾದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details