ಕರ್ನಾಟಕ

karnataka

ETV Bharat / sitara

ಶೇಖರ್​​ ನನಗೆ ನಿರ್ದೇಶಕರಷ್ಟೇ ಅಲ್ಲ, ಅದಕ್ಕಿಂತ ಹೆಚ್ಚು: ಸಾಯಿ ಪಲ್ಲವಿ

ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ನಿರ್ದೇಶಕ ಶೇಖರ್​​ ಬಗ್ಗೆ ಮಾತನಾಡಿರುವ ನಟಿ ಸಾಯಿ ಪಲ್ಲವಿ, ಅವರು ನನಗೆ ನಿರ್ದೇಶಕರಿಗಿಂತ ಹೆಚ್ಚು. ಫಿದಾ ಶೂಟಿಂಗ್​ ಸೆಟ್​​ನಲ್ಲಿ ನನಗೆ ಸಾಕಷ್ಟು ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ನನ್ನ ಈ ದಾರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ ಎಲ್ಲರ ಮುಂದೆ ನಿಂತು ಮಾತನಾಡಲು ನನಗೆ ಕಲಿಸಿದ್ದಾರೆ ಎಂದಿದ್ದಾರೆ.

By

Published : Dec 29, 2020, 7:36 PM IST

ಸಾಯಿಪಲ್ಲವಿ ಮತ್ತು ಶೇಖರ್​​
ಸಾಯಿಪಲ್ಲವಿ ಮತ್ತು ಶೇಖರ್​​

ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಲ್ಲಿ ಶೇಖರ್​ ಕಮ್ಮುಲ ​​ದೊಡ್ಡ ಹೆಸರು ಮಾಡಿದ್ದಾರೆ. ಇವರ ನಿರ್ದೇಶನದಲ್ಲಿ ಸಾಯಿ ಪಲ್ಲವಿ ಅಭಿನಯದ ಫಿದಾ ಚಿತ್ರ 2017ರಲ್ಲಿ ತೆರೆ ಕಂಡಿದೆ. ಇನ್ನು ತಮ್ಮ ನೆಚ್ಚಿನ ನಿರ್ದೇಶಕರ ಬಗ್ಗೆ ಸಾಯಿ ಪಲ್ಲವಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಸಾಯಿ ಪಲ್ಲವಿ, ಶೇಖರ್​, ವರುಣ್​​​

ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ನಿರ್ದೇಶಕ ಶೇಖರ್​​ ಬಗ್ಗೆ ಮಾತನಾಡಿರುವ ನಟಿ, ಅವರು ನನಗೆ ನಿರ್ದೇಶಕರಿಗಿಂತ ಹೆಚ್ಚು. ಫಿದಾ ಶೂಟಿಂಗ್​ ಸೆಟ್​​ನಲ್ಲಿ ನನಗೆ ಸಾಕಷ್ಟು ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ನನ್ನ ಈ ದಾರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ ಎಲ್ಲರ ಮುಂದೆ ನಿಂತು ಮಾತನಾಡಲು ನನಗೆ ಕಲಿಸಿದ್ದಾರೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಸಾಯಿ ಪಲ್ಲವಿ ಮತ್ತು ಶೇಖರ್​​

ಫಿದಾ ಶೂಟಿಂಗ್​ ಸೆಟ್​​ನಲ್ಲಿ ನನಗೆ ಹಲವಾರು ವಿಷಯಗಳನ್ನು ಹೇಳಿಕೊಟ್ಟಿರುವ ಶೇಖರ್​​​, ಒಬ್ಬ ಮಹಿಳೆಯಾಗಿ ಹೇಗೆ ಇರಬೇಕೆಂದು ತಿಳಿಸಿದ್ದಾರೆ. ಇಲ್ಲದಿದ್ದರೆ ನಾನು ಇನ್ನೂ ಮಗುವಾಗಿಯೇ ಇರುತ್ತಿದ್ದೆ ಎಂದಿದ್ದಾರೆ.

ಸಾಯಿ ಪಲ್ಲವಿ ಮತ್ತು ಶೇಖರ್​​

ಸದ್ಯ ರೌಡಿ ಬೇಬಿ ಶೇಖರ್​​ ನಿರ್ದೇಶನದ 'ಲವ್​ ಸ್ಟೋರಿ' ಸಿನಿಮಾದ ರಿಲೀಸ್​ಗೆ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆ ನಾಗಚೈತನ್ಯ ಬಣ್ಣ ಹಚ್ಚಿದ್ದಾರೆ.

ABOUT THE AUTHOR

...view details