ಕರ್ನಾಟಕ

karnataka

By

Published : May 5, 2019, 3:03 PM IST

Updated : May 5, 2019, 3:08 PM IST

ETV Bharat / sitara

ಒಂದು ಶಾಟ್​​​ಗೆ 50 ಟೇಕ್ಸ್​​​ ತೆಗೆದುಕೊಂಡ್ರು ಈ ರೌಡಿ ಬೇಬಿ!

ತನ್ನ ಅಭಿನಯದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟಿ ಸಾಯಿ ಪಲ್ಲವಿ ಈ ಬಾರಿ ಬೇರೊಂದು ವಿಷಯಕ್ಕೆ ಸಂಬಂಧಿಸಿದಂತೆ ಅಚ್ಚರಿ ಮೂಡಿಸಿದ್ದಾರೆ. ಒಂದು ಶಾಟ್​​ಗೆ ಬರೋಬ್ಬರಿ 50 ಟೇಕ್ಸ್ ತೆಗೆದುಕೊಂಡಿದ್ದಾರಂತೆ ಈ ಫಿದಾ ಬೆಡಗಿ. ಇದಕ್ಕೆ ಸೂರ್ಯ ಕೂಡಾ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ತಾಳ್ಮೆಯಿಂದಲೇ ಪಲ್ಲವಿಗೆ ಶಾಟ್ ಓಕೆ ಆಗೋವರೆಗೂ ಸಹಕರಿಸಿದ್ದಾರಂತೆ.

ಸಾಯಿ ಪಲ್ಲವಿ

ಸಾಯಿ ಪಲ್ಲವಿ ಎಲ್ಲರ ಮೋಸ್ಟ್ ಫೇವರೆಟ್ ನಟಿ. ಡ್ಯಾನ್ಸಿಂಗ್ ಶೋನಲ್ಲಿ ಭಾಗವಹಿಸುವ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾದ ಈ ಪಿಂಪಲ್ ಬ್ಯೂಟಿ ತಮಿಳಿನ 'ಕಸ್ತೂರಿ ಮಾನ್', 'ಧಾಮ್ ಧೂಮ್' ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದವರು.

ಸಾಯಿ ಪಲ್ಲವಿ

ಇನ್ನು ಈ ನಟಿ ಸ್ಕಿನ್​ ಶೋ ಕೂಡಾ ಮಾಡದೆ ಕಡಿಮೆ ಸಮಯದಲ್ಲೇ ದೊಡ್ಡ ಹೆಸರು ಮಾಡಿದಾಕೆ. ಸೆಲ್ವ ರಾಘವನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಎನ್​ಜಿಕೆ (ನಂದ ಗೋಪಾಲ ಕುಮಾರನ್​​) ಸಿನಿಮಾದಲ್ಲಿ ಪಲ್ಲವಿ ಖ್ಯಾತ ನಟ ಸೂರ್ಯ ಅವರೊಂದಿಗೆ ನಟಿಸಿದ್ದಾರೆ. ಯಾವುದೇ ಡೈಲಾಗ್ ಇದ್ದರೂ ಭಾವನೆಗೆ ತಕ್ಕಂತೆ ಅಭಿನಯಿಸುವ ಪಲ್ಲವಿಗೆ ಸೂರ್ಯ ಜೊತೆ ನಟಿಸುವಾಗ ಒಂದು ಶಾಟ್​​ಗೆ 50 ಟೇಕ್ಸ್ ತೆಗೆದುಕೊಂಡಿದ್ದಾರಂತೆ. ಇದಕ್ಕೆ ಸೂರ್ಯ ಕೂಡಾ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ತಾಳ್ಮೆಯಿಂದಲೇ ಪಲ್ಲವಿ ಶಾಟ್ ಓಕೆ ಮಾಡುವವರೆಗೂ ಸಹಕರಿಸಿದ್ದಾರಂತೆ. ಈ ವಿಷಯವನ್ನು ಸ್ವತ: ಪಲ್ಲವಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸೂರ್ಯ ಅವರ ಜೊತೆ ಮತ್ತೊಂದು ಸಿನಿಮಾ ಮಾಡಬೇಕು ಎಂದು ಕೂಡಾ ಪಲ್ಲವಿ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.

ನಟಿ ಸಾಯಿ ಪಲ್ಲವಿ

ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್​ ಅಡಿ ತಯಾರಾಗುತ್ತಿರುವ NGK, ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಸೂರ್ಯ, ರಕುಲ್ ಪ್ರೀತ್ ಸಿಂಗ್, ಸಾಯಿ ಪಲ್ಲವಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಮೇ 31 ರಂದು ಬಿಡುಗಡೆಯಾಗಲಿದೆ.

Last Updated : May 5, 2019, 3:08 PM IST

For All Latest Updates

TAGGED:

ABOUT THE AUTHOR

...view details