ಕರ್ನಾಟಕ

karnataka

ಪತ್ನಿ, ಮಕ್ಕಳೊಂದಿಗೆ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿರುವ ರಿಯಲ್​ ಸ್ಟಾರ್​

By

Published : Apr 30, 2019, 11:28 AM IST

ಲೋಕಸಭೆ ಚುನಾವಣೆ ಗುಂಗಿನಲ್ಲಿದ್ದ ಉಪೇಂದ್ರ ಇದೀಗ ರಿಲ್ಯಾಕ್ಸ್ ಮೂಡ್​​​ನಲ್ಲಿದ್ದು ಪತ್ನಿ ಹಾಗೂ ಮಕ್ಕಳೊಂದಿಗೆ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

ಉಪೇಂದ್ರ ಕುಟುಂಬ

ಬೇಸಿಗೆ ರಜೆ ಬಂತೆಂದರೆ ಸಾಕು ಪೋಷಕರು ಮಕ್ಕಳನ್ನು ಸಮ್ಮರ್ ಕ್ಯಾಂಪ್ ಅಥವಾ ಹೊರಗೆ ಟ್ರಿಪ್ ಕರೆದೊಯ್ಯುವುದು ಸಾಮಾನ್ಯ. ಅದರಲ್ಲೂ ಸೆಲಬ್ರಿಟಿಗಳೆಂದರೆ ಕೇಳಬೇಕೆ, ಅವರು ಫ್ಯಾಮಿಲಿಯೊಂದಿಗೆ ವಿದೇಶಕ್ಕೆ ಹಾರುತ್ತಾರೆ.

ಪ್ರಿಯಾಂಕ, ಉಪೇಂದ್ರ
ಪ್ರಿಯಾಂಕ

ಕಳೆದ ತಿಂಗಳು ಪುನೀತ್ ರಾಜ್​​ಕುಮಾರ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಳೆದ ತಿಂಗಳು ದಕ್ಷಿಣ ಅಮೆರಿಕ ಟ್ರಿಪ್ ಹೋಗಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿಸಿಕೊಂಡು ಫುಲ್ ರಿಲ್ಯಾಕ್ಸ್ ಮೂಡ್​​ನಲ್ಲಿರುವ ಉಪ್ಪಿ ಪತ್ನಿ ಪ್ರಿಯಾಂಕ ಹಾಗೂ ಮಕ್ಕಳಾದ ಆಯುಶ್ ಹಾಗೂ ಐಶ್ವರ್ಯ ಜೊತೆ ನ್ಯೂಯಾರ್ಕ್​ಗೆ ಹಾರಿದ್ದಾರೆ.

ಪ್ರಿಯಾಂಕ, ಐಶ್ವರ್ಯ
ಉಪೇಂದ್ರ ಮಕ್ಕಳು

ಪ್ರತಿವರ್ಷ ಕೂಡಾ ಉಪ್ಪಿ ಮಕ್ಕಳಿಗೆ ಬೇಸಿಗೆ ರಜೆ ಬಂದಾಗ ಫಾರಿನ್ ಟೂರ್ ಹೋಗುತ್ತಾರೆ. ಅದರಂತೆ ಈ ಬಾರಿ ಕೂಡಾ ವಿದೇಶಕ್ಕೆ ಹೋಗಿದ್ದು ನ್ಯೂಯಾರ್ಕ್​ ಸುಂದರ ತಾಣಗಳಲ್ಲಿ ಕ್ಲಿಕ್ ಮಾಡಿರುವ ಫೋಟೋಗಳನ್ನು ಪ್ರಿಯಾಂಕ ಉಪೇಂದ್ರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಕ್ಕಳೊಂದಿಗೆ ಪ್ರಿಯಾಂಕ
ಆಯುಶ್, ಐಶ್ವರ್ಯ

TAGGED:

ABOUT THE AUTHOR

...view details