ಕರ್ನಾಟಕ

karnataka

ಒಟಿಟಿ ಪ್ಲಾಟ್ ಫಾರ್ಮ್​ನಲ್ಲಿ ‘ಫ್ರೆಂಚ್ ಬಿರಿಯಾನಿ’ ಬಡಿಸಲಿದ್ದಾರೆ ಪುನೀತ್ ರಾಜಕುಮಾರ್

ಪಿಆರ್ ಕೆ ಪ್ರೊಡಕ್ಷನ್ ಪನ್ನಗ ಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಜೊತೆಗೆ ರಘು ಸಮರ್ಥ ನಿರ್ದೇಶನದ ‘ಲಾ’ ಸಿನಿಮಾ ಸಹ ಶುರು ಮಾಡಿದ್ದರು. ಈಗ ಎರಡು ಸಿನಿಮಾಗಳು ಸಿದ್ದವಾಗಿವೆ.

By

Published : May 7, 2020, 11:40 AM IST

Published : May 7, 2020, 11:40 AM IST

French biryani
‘ಫ್ರೆಂಚ್ ಬಿರ್ಯಾನಿ

ದೊಡ್ಡಮನೆಯಿಂದ ಒಂದು ಮಹತ್ತರ ಕ್ರಾಂತಿ ಆಗಲಿದೆ. ಅದೇ ಪಿ ಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆದ ಕನ್ನಡ ಸಿನಿಮಾ ‘ಫ್ರೆಂಚ್ ಬಿರ್ಯಾನಿ’ ನೇರವಾಗಿ ಒಟಿಟಿ ( Over-the-top media service) ಪ್ಲಾಟ್ ಫಾರ್ಮ್ ಅಲ್ಲಿ ಬಿಡುಗಡೆ ಮಾಡಿ ಚಿತ್ರಮಂದಿರದ ಪದ್ಧತಿಯನ್ನು ಅನುಸರಿಸುತ್ತಿಲ್ಲ.

ಈ ರೀತಿ ನೇರ ಮನೆ ಮನೆಗೆ, ನಿಮ್ಮ ನಿಮ್ಮ ಮೊಬೈಲ್ ಫೋನ್ ಅಲ್ಲಿ ಕಳೆದ ವರ್ಷ ಜೀ 5 ಯಿಂದ ‘ಭಿನ್ನ’ ಕನ್ನಡ ಸಿನಿಮಾ ಸಹ ಬಿಡುಗಡೆ ಆಗಿ ಎಲ್ಲ ರೀತಿಯಲ್ಲಿ ಫಲಪ್ರದವಾಗಿತ್ತು. ಈಗ ಒಟಿಟಿ ಪ್ಲಾಟ್ ಫಾರ್ಮ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಮೆಜಾನ್ ಪ್ರೈಮ್ ನಲ್ಲಿ ಅವರ ಎರಡು ಸಿನಿಮಗಳು ಕವಲುದಾರಿ ಹಾಗೂ ಮಾಯಾಬಜಾರ್ ಚಿತ್ರಗಳು ವ್ಯಾಪಾರ ಕುದುರಿಸಿರುವುದರಿಂದ ಆ ಪ್ಲಾಟ್ ಫಾರ್ಮ್ ಅಲ್ಲೇ ಸಿನಿಮಾ ಬಿಡುಗಡೆ ಆಗುವ ಲಕ್ಷಣಗಳು ಹೆಚ್ಚಾಗಿದೆ.

ಫ್ರೆಂಚ್ ಬಿರ್ಯಾನಿ

‘ಫ್ರೆಂಚ್ ಬಿರಿಯಾನಿ’ ಚಿತ್ರೀಕರಣ ಸಂಪೂರ್ಣ ಆದ ಮೇಲೆ ಪಿ ಆರ್ ಕೆ ಪ್ರೊಡಕ್ಷನ್ ನಿರ್ಮಾಪಕ ಪುನೀತ್ ರಾಜಕುಮಾರ್ ಈ ನಿರ್ಧಾರ ಕೈಗೊಂಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ‘ಕವಲುದಾರಿ’ ಸಿನಿಮಾ ಮುಗಿಸುವಷ್ಟರಲ್ಲಿ ಕೆಲವು ಸಿನಿಮಾಗಳನ್ನು ಮಾಡುವುದಾಗಿ ಹೇಳಿಕೊಂಡು ಹೊಸ ಪ್ರತಿಭೆ ಹಾಗೂ ಹೊಸ ನಿರೂಪಣೆ ಆಯ್ಕೆ ಮಾಡಿಕೊಳ್ಳುವೆ ಎಂದಿದ್ದರು. ಅದರಂತೆ ‘ಮಾಯಾ ಬಜಾರ್ 2016’ ಸಹ ಕವಲುದಾರಿ ಅಂತೆ ಯಶಸ್ಸು ಕಂಡಿತು.

ಪಿ ಆರ್ ಕೆ ಪ್ರೊಡಕ್ಷನ್ ಪನ್ನಗ ಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಜೊತೆಗೆ ರಘು ಸಮರ್ಥ ನಿರ್ದೇಶನದ ‘ಲಾ’ ಸಿನಿಮಾ ಸಹ ಶುರು ಮಾಡಿದ್ದರು. ಈಗ ಎರಡು ಸಿನಿಮಾಗಳು ಸಿದ್ದವಾಗಿವೆ.

ಮೊದಲು ಫ್ರೆಂಚ್ ಬಿರಿಯಾನಿ ಪ್ರೇಕ್ಷಕರಿಗೆ ಎದುರಿಗೆ ಬರಲು ಸಿದ್ದವಾಗಿದೆ. ಈ ಚಿತ್ರ ಮೂರು ದಿವಸಗಳಲ್ಲಿ ನಡೆಯುವ ಕಥೆ. ಹಂಬಲ್ ಪೊಲಿಟೀಷಿಯನ್ ನೊಗರಾಜ್ ಇಂದ ನಾಯಕ ನಟನಾದ ದನಿಷ್ ಸೇಠ್ ಮುಖ್ಯಪಾತ್ರ ಮಾಡಿದ್ದಾರೆ.

ಶಿವಾಜಿನಗರದ ಆಟೋ ಡ್ರೈವರ್ ಪಾತ್ರದಲ್ಲಿ ಸಾಲ್ ಯುಸೂಫ್ ನಟಿಸಿದ್ದಾರೆ. ದಿಶಾ ಮದನ್, ನಾಗಭೂಷಣ್​ ಹಾಗೂ ಸಿಂಧು ಶ್ರೀನಿವಾಸಮೂರ್ತಿ ಸಹ ಪ್ರಮುಖ ಪಾತ್ರ ಹಂಚಿಕೊಂಡಿದ್ದಾರೆ. ಪನ್ನಗ ಭರಣ ‘ಹ್ಯಾಪಿ ನ್ಯೂ ಇಯರ್’ ಸಿನಿಮಾ ನಂತರ ಎರಡನೇ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಫ್ರೆಂಚ್ ಬಿರಿಯಾನಿ ಚಿತ್ರಕ್ಕೆ ಅವಿನಾಶ್ ಬಾಲೆಕಳ ಕಥೆ, ವಾಸುಕಿ ವೈಭವ್ ಹಾಗೂ ಕಾರ್ತಿಕ್ ಸಂಗೀತ ನೀಡಿದ್ದಾರೆ.

ಜೀ 5 ವಾಹಿನಿಯಲ್ಲಿ ‘ಭಿನ್ನ’ ಕನ್ನಡ ಸಿನಿಮಾ ಆದರ್ಶ್ ಈಶ್ವರಪ್ಪ ನಿರ್ದೇಶನದಲ್ಲಿ ಪ್ರಿಮಿಯರ್ ಬಿಡುಗಡೆ ಭಾಗ್ಯ ಪಡೆದುಕೊಂಡು ಸುಮಾರು 190 ದೇಶಗಳಲ್ಲಿ ಸಿಗುವಂತಾಗಿತ್ತು.

ABOUT THE AUTHOR

...view details