ಕರ್ನಾಟಕ

karnataka

ETV Bharat / sitara

ಮತ್ತೆ ಪುಟ್ನಂಜ ಲುಕ್​​​ನಲ್ಲಿ ರವಿಮಾಮ: ರವಿ ಬೋಪಣ್ಣನಿಗೆ ನಾಯಕಿ ಇವರೇ ನೋಡಿ

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶನ ಮಾಡುತ್ತಿರುವ ರವಿಬೋಪಣ್ಣ ಚಿತ್ರದ ಶೂಟಿಂಗ್​ ಕಳೆದ ಒಂದು ವಾರದಿಂದ ಮಡಿಕೇರಿಯಲ್ಲಿ ನಡೆಯುತ್ತಿದೆ. ಇದೀಗ ರವಿಮಾಮನ ಅಡ್ಡಕ್ಕೆ ನಾಯಕಿಯಾಗಿ ಕನ್ನಡದ ಸಂಚಿತ ಪಡುಕೋಣೆ ಎಂಟ್ರಿಕೊಟ್ಟಿದ್ದಾರೆ.

By

Published : Nov 30, 2019, 12:55 PM IST

ravi bipanna movie shooting in madikeri
ಮತ್ತೆ ಪಟ್ನಂಜ ಲುಕ್​​​ನಲ್ಲಿ ರವಿಮಾಮ

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶನ ಮಾಡುತ್ತಿರುವ ರವಿಬೋಪಣ್ಣ ಚಿತ್ರದ ಶೂಟಿಂಗ್​ ಕಳೆದ ಒಂದು ವಾರದಿಂದ ಮಡಿಕೇರಿಯಲ್ಲಿ ನಡೆಯುತ್ತಿದೆ. ಇದೀಗ ರವಿಮಾಮನ ಅಡ್ಡಕ್ಕೆ ನಾಯಕಿಯಾಗಿ ಕನ್ನಡದ ಸಂಚಿತ ಪಡುಕೋಣೆ ಎಂಟ್ರಿಕೊಟ್ಟಿದ್ದಾರೆ.

ರವಿ ಬೋಪಣ್ಣ ನಾಯಕಿ ಸಂಚಿತ ಪಡುಕೋಣೆ

ಒಂದು ವಾರದಿಂದ ಟಾಕಿ‌ಪೋಷನ್ ಶೂಟಿಂಗ್​​ನಲ್ಲಿ ಬಿಝಿ ಇದ್ದ ಮಲ್ಲ, ಇಂದಿನಿಂದ ಸಾಂಗ್ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಇನ್ನು ರವಿ ಬೋಪ್ಪಣ್ಣ ಚಿತ್ರದಲ್ಲಿ ರವಿಚಂದ್ರನ್ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಲ್ಟ್ ಬಿಯರ್ಡ್​​ ಲುಕ್​​ನಲ್ಲಿ ಕಾಣಿಸಿಕೊಂಡಿರುವ ರವಿಮಾಮನ ಲುಕ್ ಈಗಾಗಲೇ ರಿವೀಲ್ ಆಗಿದೆ. ಇದೀಗ ಮತ್ತೊಂದು ಲುಕ್​ ಕೂಡ ಅಭಿಮಾನಿಗಳಿಗೆ ಪರಿಚಯವಾಗಿದೆ.

ರವಿ ಬೋಪಣ್ಣ ನಾಯಕಿ ಸಂಚಿತ ಪಡುಕೋಣೆ ಮತ್ತು ರವಿ ಚಂದ್ರನ್​​

ಈ ಲುಕ್​​​ನಲ್ಲಿ 'ಪುಟ್ನಂಜ‌' ರೀತಿ ರವಿಮಾಮ ಮೀಸೆ ಬಿಟ್ಟು, ಕ್ಲೀನ್​​​​ ಶೇವ್ ಮಾಡಿ ಸಖತ್ ಯಂಗ್ ಆಗಿ ಕಾಣಿಸಿದ್ದಾರೆ. ಈ ರಸಿಕನ ಲುಕ್ಕಿಗೆ ಲೇಡಿ ಫ್ಯಾನ್ಸ್ ಹಾರ್ಟ್ ಬೀಟ್ ಹೆಚ್ಚಾಗೋದಂತು ಗ್ಯಾರಂಟಿ.

ರವಿ ಬೋಪಣ್ಣ ನಾಯಕಿ ಸಂಚಿತ ಪಡುಕೋಣೆ ಮತ್ತು ರವಿ ಚಂದ್ರನ್​​

ABOUT THE AUTHOR

...view details